ಮಾರಾಟದಲ್ಲಿ ಕುಸಿತ; 2 ದಿನ ಉತ್ಪಾದನೆ ಸ್ಥಗಿತಕ್ಕೆ ಮಾರುತಿ ಸುಜುಕಿ ನಿರ್ಧಾರ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಬುಧವಾರ ಹರಿಯಾಣದ ಗುರುಗ್ರಾಮ್ ಮತ್ತು ಮನೇಸರ್ ಸ್ಥಾವರಗಳಲ್ಲಿ ಉತ್ಪಾದನೆಯನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ 

Last Updated : Sep 4, 2019, 04:21 PM IST
 ಮಾರಾಟದಲ್ಲಿ ಕುಸಿತ; 2 ದಿನ ಉತ್ಪಾದನೆ ಸ್ಥಗಿತಕ್ಕೆ ಮಾರುತಿ ಸುಜುಕಿ ನಿರ್ಧಾರ  title=
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಬುಧವಾರ ಹರಿಯಾಣದ ಗುರುಗ್ರಾಮ್ ಮತ್ತು ಮನೇಸರ್ ಸ್ಥಾವರಗಳಲ್ಲಿ ಉತ್ಪಾದನೆಯನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಸೆಪ್ಟೆಂಬರ್ 7 ಮತ್ತು 9 ರಂದು ಎರಡು ಸೌಲಭ್ಯಗಳಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಕಂಪನಿ ತಿಳಿಸಿದೆ. ಆಟೋಮೊಬೈಲ್ ಕಂಪನಿಯು ಆಗಸ್ಟ್ ತಿಂಗಳಲ್ಲಿ ಮಾರಾಟದಲ್ಲಿ ವರ್ಷಕ್ಕೆ ಶೇ 36 ರಷ್ಟು ಕುಸಿತ ಕಂಡಿದೆ. ಈ ಹಿನ್ನಲೆಯಲ್ಲಿ ಕಳೆದ ತಿಂಗಳಲ್ಲಿ ಉತ್ಪಾದನೆಯನ್ನು ಶೇಕಡಾ 34 ರಷ್ಟು (ವೈ-ಒ-ವೈ) ಕಡಿಮೆಗೊಳಿಸಿದೆ ಎಂದು ಹೇಳಿದೆ, ಸತತ ಏಳನೇ ತಿಂಗಳ ಉತ್ಪಾದನೆಯನ್ನು ಕಡಿತಗೊಳಿಸಿ ಗ್ರಾಹಕರ ಬೇಡಿಕೆಯೊಂದಿಗೆ ಉತ್ಪಾದನೆಯನ್ನು ಜೋಡಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ಕಳೆದ ಹಲವು ತಿಂಗಳುಗಳಲ್ಲಿ ಮಾರಾಟ ಕುಸಿತದ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಿಗೆ ದೇಶೀಯ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಶೇಕಡಾ 36 ರಷ್ಟು ಕುಸಿತವನ್ನು ಕಂಪನಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಕಂಪನಿಯು ಈಗಾಗಲೇ ಆಗಸ್ಟ್ 2019 ಸೇರಿದಂತೆ ಏಳು ತಿಂಗಳವರೆಗೆ ತನ್ನ ಉತ್ಪಾದನೆಯನ್ನು ಕಡಿತಗೊಳಿಸಿದೆ. ಮಾರುತಿ ಜುಲೈನಲ್ಲಿ ಉತ್ಪಾದನೆಯನ್ನು ಶೇಕಡಾ 25 ರಷ್ಟು ಕಡಿತಗೊಳಿಸಿದರೆ, ಜೂನ್ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ 15.6 ಮತ್ತು 18 ಶೇಕಡಾ ವೈ-ಒ-ವೈ ಕಡಿತಗೊಂಡಿದೆ. ಕಂಪನಿಯು ಏಪ್ರಿಲ್‌ನಲ್ಲಿ ಉತ್ಪಾದನೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಿದ್ದರೆ, ಮಾರ್ಚ್‌ನಲ್ಲಿ ಕೇವಲ 21 ಶೇಕಡಾಕ್ಕಿಂತ ಕಡಿಮೆಯಾಗಿದೆ.

Trending News