Bipin Rawat: 'ಸೇನೆಯಲ್ಲಿ 1 ಲಕ್ಷ ಯೋಧರನ್ನು ಕಡಿತ'ಗೊಳಿಸಲು ಮುಂದಾದ ಕೇಂದ್ರ ಸರ್ಕಾರ!

ಪ್ರಸ್ತುತ, ಭಾರತೀಯ ಸೇನೆಯಲ್ಲಿ ಸುಮಾರು 14 ಲಕ್ಷ ಸೈನಿಕರು ಇದ್ದಾರೆ.

Written by - Channabasava A Kashinakunti | Last Updated : Apr 6, 2021, 05:25 PM IST
  • ಭಾರತೀಯ ಸೇನೆಯು ಆಧುನಿಕ ಶಸ್ತ್ರಾಸ್ತ್ರಗಳಿಂದ ಹೆಚ್ಚು ಬಲಿಷ್ಠ ಮಾಡಲು ತಯಾರಿ.
  • ಸೇನೆಯಲ್ಲಿ, ಮುಂದಿನ ಕೆಲವು ವರ್ಷಗಳಲ್ಲಿ ಒಂದು ಲಕ್ಷ ಸೈನಿಕರನ್ನು ಕಡಿತ
  • ಪ್ರಸ್ತುತ, ಭಾರತೀಯ ಸೇನೆಯಲ್ಲಿ ಸುಮಾರು 14 ಲಕ್ಷ ಸೈನಿಕರು ಇದ್ದಾರೆ.
Bipin Rawat: 'ಸೇನೆಯಲ್ಲಿ 1 ಲಕ್ಷ ಯೋಧರನ್ನು ಕಡಿತ'ಗೊಳಿಸಲು ಮುಂದಾದ ಕೇಂದ್ರ ಸರ್ಕಾರ! title=
ZEE NEWS

ನವದೆಹಲಿ: ಭಾರತೀಯ ಸೇನೆಯು ಆಧುನಿಕ ಶಸ್ತ್ರಾಸ್ತ್ರಗಳಿಂದ ಹೆಚ್ಚು ಬಲಿಷ್ಠ ಮಾಡಲು ತಯಾರಿ ನಡೆಸುತ್ತಿದೆ. ಸೇನೆಯಲ್ಲಿ, ಮುಂದಿನ ಕೆಲವು ವರ್ಷಗಳಲ್ಲಿ ಒಂದು ಲಕ್ಷ ಸೈನಿಕರನ್ನು ಕಡಿತಗೊಳಿಸಲಾಗುವುದು ಮತ್ತು ಇದರಿಂದ ಬರುವ ಉಳಿತಾಯವನ್ನು ಸೈನ್ಯಕ್ಕೆ ಹೊಸ ತಂತ್ರಜ್ಞಾನವನ್ನು ಖರೀದಿಸಲು ಬಳಕೆ ಮಾಡಲಾಗುತ್ತದೆ ಎಂದು  ಸಿಡಿಎಸ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಮಹತ್ವದ ಸಲಹೆ ನೀಡಿದ ಸರ್ಕಾರ

ಪ್ರಸ್ತುತ, ಭಾರತೀಯ ಸೇನೆ(Indian Military)ಯಲ್ಲಿ ಸುಮಾರು 14 ಲಕ್ಷ ಸೈನಿಕರು ಇದ್ದಾರೆ. ಚೀನಾಗಿಂತಲೂ ಹೆಚ್ಚಿನ ಸೈನಿಕರನ್ನು ಭಾರತ ಹೊಂದಿದೆ. ಈಗ ಅದು ಮಿಲಿಟರಿ ಕಾರ್ಯಾಚರಣೆಗಳಲ್ಲಿ ನೇರವಾಗಿ ಭಾಗವಹಿಸದೆ, ಸೈನಿಕರ ಸಂಖ್ಯೆ ಕಡಿಮೆ ಮಾಡಿ, ಆದರೆ ತಂತ್ರಜ್ಞಾನ ಬಳೆಕೆಯ ಮೂಲಕ ಯುದ್ಧಕ್ಕೆ ಮುಂದಾಗುತ್ತಿದೆ.

ಇದನ್ನೂ ಓದಿ: "ಮುಸ್ಲಿಂ ಮತ ಬ್ಯಾಂಕ್ ನಿಮ್ಮ ಕೈ ತಪ್ಪಿಹೋಗುವುದು ಖಾತ್ರಿಯಾಗಿದೆ"

ಸೇನೆಯಲ್ಲಿ 1 ಲಕ್ಷ ಸೈನಿಕರ(soldiers) ಕಡಿತ: ಗಡಿಯಲ್ಲಿರುವ ಸೈನಿಕರಿಗೆ ಉತ್ತಮ ಶಸ್ತ್ರಾಸ್ತ್ರಗಳು ಮತ್ತು ಹೊಸ ಉಪಕರಣಗಳನ್ನು ನೀಡಲಾಗುತ್ತದೆ. ಕಳೆದ ತಿಂಗಳು ಸದನದಲ್ಲಿ ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿ ತನ್ನ ವರದಿಯನ್ನ ಮಂಡಿಸಿತು. ಈ ವರದಿಯಲ್ಲಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ತಮ್ಮ ಅಭಿಪ್ರಾಯದಲ್ಲಿ, ಈಗ ಸೈನ್ಯವು ತಂತ್ರಜ್ಞಾನದ ಬಗ್ಗೆ ಹೆಚ್ಚು ಹೆಚ್ಚು ಗಮನ ಹರಿಸುತ್ತಿದೆ. ಹೊಸ ರೀತಿಯ ಯುದ್ಧ ತಂತ್ರಜ್ಞಾನದ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಲು ನಾವು ಸಿದ್ಧರಾಗಿದ್ದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: 7th Pay Commission New Updates: ನೌಕರರ TA -DA, ವೇತನ ಹೆಚ್ಚಳ, PF ಕೊಡುಗೆ, ವೈದ್ಯಕೀಯ ಭತ್ಯೆ ಹೆಚ್ಚಳ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News