/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಕರೋನಾವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ (Lockdown) ನಿಂದಾಗಿ ಉದ್ಯೋಗ ಮತ್ತು ವ್ಯವಹಾರಗಳಿಗೆ ಸಾಕಷ್ಟು ತೊಂದರೆಯಾಗಿದೆ. ಕೆಲಸವನ್ನು ಪುನರಾರಂಭಿಸಲು ಜನರಿಗೆ ಹಣದ ಅಗತ್ಯತೆ ಇದೆ. ದೀರ್ಘ ಪ್ರಕ್ರಿಯೆ ಮತ್ತು ಬ್ಯಾಂಕಿನ ಹೆಚ್ಚಿನ ಬಡ್ಡಿದರಗಳಿಂದಾಗಿ ಜನರು ಸಾಲ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ಜನರಿಗೆ 10,000 ರೂಪಾಯಿಗಳ ತ್ವರಿತ ಸಾಲವನ್ನು ನೀಡಲು ಮೋದಿ ಸರ್ಕಾರ ನಿರ್ಧರಿಸಿದೆ.

ಸ್ವಾವಲಂಬಿ ನಿಧಿ ಯೋಜನೆಯಡಿ ಸಿಗಲಿದೆ 10 ಸಾವಿರ ರೂಪಾಯಿ:
ಸಣ್ಣ ಉದ್ಯಮಿಗಳು, ಬೀದಿ ಬದಿ ವ್ಯಾಪಾರಿಗಳು ಈಗ ದೇಶಾದ್ಯಂತ 3.8 ​​ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಕೇಂದ್ರಗಳ ಮೂಲಕ 'ಆತ್ಮ ನಿರ್ಭರ್ ಫಂಡ್' (Atamnirbhar Fund) ಯೋಜನೆಯಡಿ 10,000 ರೂ.ವರೆಗೆ ಸಾಲ ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರದ ಡಿಜಿಟಲ್ ಮತ್ತು ಇ-ಆಡಳಿತ ಸೇವೆಗಳ ಘಟಕವಾದ ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಬುಧವಾರ ಈ ವಿಷಯ ತಿಳಿಸಿದೆ.

ಪ್ರಧಾನ್ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಸ್ವಾವಲಂಬಿ ನಿಧಿ ಯೋಜನೆ (ಪಿಎಂಎಸ್ವಿಎಎಫ್‌ಐ) ಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಂಪೂರ್ಣ ಹಣವನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಹತ್ತು ಸಾವಿರ ರೂಪಾಯಿಗಳ ಕಾರ್ಯ ಬಂಡವಾಳವನ್ನು ಒದಗಿಸಲಿದೆ. ಯೋಜನೆಯಡಿಯಲ್ಲಿ ಸಾಲ ತೆಗೆದುಕೊಳ್ಳುವ ಈ ಉದ್ಯಮಿಗಳಿಗೆ ನಿಯಮಿತವಾಗಿ ಸಾಲವನ್ನು ಪಾವತಿಸಲು ಪ್ರೋತ್ಸಾಹ ನೀಡಲಾಗುತ್ತದೆ ಮತ್ತು ಡಿಜಿಟಲ್ ವಹಿವಾಟಿನಲ್ಲಿ ಬಹುಮಾನವನ್ನೂ ನೀಡಲಾಗುತ್ತದೆ.

ಶಾಲೆ ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುವಂತಿಲ್ಲ: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಔಪಚಾರಿಕ ಸ್ವರೂಪವನ್ನು ನೀಡುತ್ತದೆ ಮತ್ತು ಈ ಪ್ರದೇಶಕ್ಕೆ ಹೊಸ ಅವಕಾಶಗಳನ್ನು ತೆರೆಯಲಾಗುತ್ತದೆ. ಈ ಸಣ್ಣ ವ್ಯಾಪಾರಿಗಳನ್ನು ಯೋಜನೆಯಡಿ ನೋಂದಾಯಿಸಲು ಸಿಎಸ್ಸಿ ಸಹಾಯ ಮಾಡುತ್ತದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ಕುಮಾರ್ ಮಾತನಾಡಿ ಈ ಯೋಜನೆಯಡಿ ನಗರ ಪ್ರದೇಶದ ನಿವಾಸಿಗಳಿಗೆ ಹತ್ತು ಸಾವಿರ ರೂಪಾಯಿಗಳ ಕಾರ್ಯ ಬಂಡವಾಳ ಲಭ್ಯವಾಗಲಿದೆ. ಈ ಬಂಡವಾಳವು ಒಂದು ವರ್ಷದ ಅವಧಿಗೆ ಇರುತ್ತದೆ ಮತ್ತು ಅದನ್ನು ಮಾಸಿಕ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಎಲ್ಲಾ ವ್ಯಾಪಾರಿಗಳು ಡಿಜಿಟಲ್ ವಹಿವಾಟು ನಡೆಸಬೇಕಾಗುತ್ತದೆ, ಅವರು ಅದರಲ್ಲಿ ನಗದು ಬ್ಯಾಂಕ್ ಕೊಡುಗೆಯನ್ನು ಪಡೆಯುತ್ತಾರೆ.  ಈ ಸಾಲಕ್ಕಾಗಿ ಸಾಲ ನೀಡುವ ಸಂಸ್ಥೆ ಯಾವುದೇ ರೀತಿಯ ಗ್ಯಾರಂಟಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.  

ಈ ಯೋಜನೆಗೆ ಅನುಷ್ಠಾನಗೊಳಿಸುವ ಸಂಸ್ಥೆಯಾಗಿ ಎಸ್‌ಐಡಿಬಿಐ ನೇಮಕಗೊಂಡಿದೆ. ಈವರೆಗೆ ಇದರ ಅಡಿಯಲ್ಲಿ ಎರಡು ಲಕ್ಷ ಅರ್ಜಿಗಳು ಬಂದಿದ್ದು 50 ಸಾವಿರ ಉದ್ಯಮಿಗಳಿಗೆ ಸಾಲ ಮಂಜೂರು ಮಾಡಲಾಗಿದೆ ಎಂದು ಕುಮಾರ್ ಹೇಳಿದರು.

Section: 
English Title: 
Modi government is giving a loan of 10,000 rupees, no guarantee is needed
News Source: 
Home Title: 

ಮೋದಿ ಸರ್ಕಾರ ನೀಡುತ್ತಿರುವ ಈ ಸಾಲ ಸೌಲಭ್ಯ ಪಡೆಯಲು ಯಾವುದೇ ಗ್ಯಾರಂಟಿ ಅಗತ್ಯವಿಲ್ಲ

ಮೋದಿ ಸರ್ಕಾರ ನೀಡುತ್ತಿರುವ ಈ ಸಾಲ ಸೌಲಭ್ಯ ಪಡೆಯಲು ಯಾವುದೇ ಗ್ಯಾರಂಟಿ ಅಗತ್ಯವಿಲ್ಲ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಮೋದಿ ಸರ್ಕಾರ ನೀಡುತ್ತಿರುವ ಈ ಸಾಲ ಸೌಲಭ್ಯ ಪಡೆಯಲು ಯಾವುದೇ ಗ್ಯಾರಂಟಿ ಅಗತ್ಯವಿಲ್ಲ
Yashaswini V
Publish Later: 
Yes
Publish At: 
Thursday, July 23, 2020 - 07:32
Created By: 
Yashaswini V
Updated By: 
Yashaswini V