ಭಾರತದ ಅತ್ಯಂತ ಭಯಾನಕ ರೈಲ್ವೆ ನಿಲ್ದಾಣ ಯಾವುದು ಗೊತ್ತಾ? ಇಲ್ಲಿ ರೈಲು ಬರ್ತಿದ್ದಂತೆ ಕಾಣಿಸಿಕೊಳ್ಳುತ್ತೆ ಪ್ರೇತಾತ್ಮ... 42 ವರ್ಷ ಇದೇ ಕಾರಣಕ್ಕೆ ಬಂದ್‌ ಆಗಿತ್ತು ಈ ಸ್ಟೇಷನ್‌

Most Haunted Railway Station: ಭಾರತೀಯ ರೈಲ್ವೇ ಏಷ್ಯಾದ ಎರಡನೇ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ. ಇದರಲ್ಲಿ ಪ್ರತಿದಿನ ಸಾವಿರಾರು ಮತ್ತು ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಭಾರತದಲ್ಲಿ ಸುಮಾರು 8 ಸಾವಿರ ರೈಲು ನಿಲ್ದಾಣಗಳಿದ್ದು, ಅವೆಲ್ಲವೂ ಒಂದಲ್ಲ, ಒಂದು ವಿಶೇಷ ಕಾರಣದಿಂದ ಪ್ರಸಿದ್ಧವಾಗಿದೆ.

Written by - Bhavishya Shetty | Last Updated : Dec 6, 2024, 04:05 PM IST
    • ಭಾರತೀಯ ರೈಲ್ವೇ ಏಷ್ಯಾದ ಎರಡನೇ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ
    • ಇದರಲ್ಲಿ ಪ್ರತಿದಿನ ಸಾವಿರಾರು ಮತ್ತು ಲಕ್ಷ ಜನರು ಪ್ರಯಾಣ ಮಾಡುತ್ತಾರೆ
    • ಬೇಗಂಕೋದರ್ ರೈಲು ನಿಲ್ದಾಣವು ಭಾರತದ ಅತ್ಯಂತ ಭಯಾನಕ ರೈಲು ನಿಲ್ದಾಣ
ಭಾರತದ ಅತ್ಯಂತ ಭಯಾನಕ ರೈಲ್ವೆ ನಿಲ್ದಾಣ ಯಾವುದು ಗೊತ್ತಾ? ಇಲ್ಲಿ ರೈಲು ಬರ್ತಿದ್ದಂತೆ ಕಾಣಿಸಿಕೊಳ್ಳುತ್ತೆ ಪ್ರೇತಾತ್ಮ...  42 ವರ್ಷ ಇದೇ ಕಾರಣಕ್ಕೆ ಬಂದ್‌ ಆಗಿತ್ತು ಈ ಸ್ಟೇಷನ್‌ title=
Most Haunted Railway Station

Most Haunted Railway Station: ಭಾರತೀಯ ರೈಲ್ವೇ ಏಷ್ಯಾದ ಎರಡನೇ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ. ಇದರಲ್ಲಿ ಪ್ರತಿದಿನ ಸಾವಿರಾರು ಮತ್ತು ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಭಾರತದಲ್ಲಿ ಸುಮಾರು 8 ಸಾವಿರ ರೈಲು ನಿಲ್ದಾಣಗಳಿದ್ದು, ಅವೆಲ್ಲವೂ ಒಂದಲ್ಲ, ಒಂದು ವಿಶೇಷ ಕಾರಣದಿಂದ ಪ್ರಸಿದ್ಧವಾಗಿದೆ. ಆದರೆ ಕೆಲವೊಂದು ರಾಜ್ಯಗಳಲ್ಲಿರುವ ರೈಲ್ವೆ ನಿಲ್ದಾಣವು ಭಯಾನಕವಾಗಿದ್ದು, ಇಲ್ಲಿ ಹಗಲು ರಾತ್ರಿ ಎನ್ನದೆ ಜನರು ಒಬ್ಬರೇ ಓಡಾಡಲು ಭಯಪಡುತ್ತಾರೆ.

ಇದನ್ನೂ ಓದಿ: ದೇವಿಯ ಯೋನಿಗೆ ಪೂಜೆ ಮಾಡುವ ಜಗತ್ತಿನ ಏಕೈಕ ದೇವಾಲಯ ಯಾವುದು ಗೊತ್ತೇ? ಇಲ್ಲಿ ವರ್ಷಕ್ಕೊಮ್ಮೆ ಋತುಮತಿಯಾಗ್ತಾಳೆ ದೇವಿ... ಭಾರತದಲ್ಲೇ ಇರೋ ಈ ದೇಗುಲಕ್ಕೆ ಪುರುಷರಿಗೆ ಪ್ರವೇಶವಿಲ್ಲ

ಬೇಗಂಕೋದರ್ ರೈಲು ನಿಲ್ದಾಣ, ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಬೇಗಂಕೋದರ್ ರೈಲು ನಿಲ್ದಾಣವು ಭಾರತದ ಅತ್ಯಂತ ಭಯಾನಕ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿಗೆ ಬರುವ ಅನೇಕ ಪ್ರಯಾಣಿಕರು ಬಿಳಿ ಸೀರೆಯುಟ್ಟ ಮಹಿಳೆಯ ಭೂತವನ್ನು ಕಣ್ಣಾರೆ ಕಂಡಿದ್ದಾರಂತೆ. ಇದಲ್ಲದೇ ನಿಲ್ದಾಣಕ್ಕೆ ಸಂಬಂಧಿಸಿದ ಅನೇಕ ಭಯಾನಕ ಕಥೆಗಳು ಇಲ್ಲಿ ಕೇಳಿಬರುತ್ತಿವೆ. ಇನ್ನು ಈ ನಿಲ್ದಾಣಕ್ಕೆ ಸಂಬಂಧಿಸಿದ ಪ್ರೇತಾತ್ಮದ ಕಾರಣಗಳಿಂದ, ಈ ನಿಲ್ದಾಣವನ್ನು 42 ವರ್ಷಗಳ ಕಾಲ ಮುಚ್ಚಲಾಗಿತ್ತು. ಆ ಬಳಿಕ ಇದನ್ನು 2009 ರಲ್ಲಿ ಮತ್ತೆ ತೆರೆಯಲಾಯಿತು.

ನೈನಿ ರೈಲು ನಿಲ್ದಾಣ, ಉತ್ತರ ಪ್ರದೇಶ
ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಬಳಿಯ ನೈನಿ ಜೈಲಿನಲ್ಲಿ ಅನೇಕ ಭಾರತೀಯರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಈ ಜೈಲಿನಿಂದ ಸ್ವಲ್ಪ ದೂರದಲ್ಲಿ ನೈನಿ ರೈಲು ನಿಲ್ದಾಣವಿದೆ. ಈ ನಿಲ್ದಾಣದಲ್ಲಿ ಅಂತಹ ಯಾವುದೇ ಘಟನೆ ನಡೆಯದಿದ್ದರೂ ಜನರಲ್ಲಿ ಇನ್ನೂ ವಿಚಿತ್ರ ನಂಬಿಕೆ ಇದೆ. ನಿಲ್ದಾಣದ ಬಳಿ ಅನೇಕ ದುಷ್ಟಶಕ್ತಿಗಳು ಅಲೆದಾಡುತ್ತಿದ್ದು, ರಾತ್ರಿ ವೇಳೆ ಅಳುವುದು, ಕಿರುಚುವ ಶಬ್ದಗಳು ಕೇಳಿಬರುತ್ತವೆ ಎಂದು ಹಲವರು ಹೇಳುತ್ತಾರೆ.

ಮುಲುಂಡ್ ಸ್ಟೇಷನ್, ಮುಂಬೈ
ಮುಂಬೈನಲ್ಲಿರುವ ಮುಲುಂಡ್ ನಿಲ್ದಾಣವು ದೇಶದ ಪುರಾತನ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಸಂಜೆಯ ನಂತರ ಇಲ್ಲಿ ಕಿರುಚಾಟ ಮತ್ತು ಅಳುವ ಶಬ್ದಗಳು ಕೇಳಿಬರುತ್ತವೆ ಎಂದು ಈ ನಿಲ್ದಾಣಕ್ಕೆ ಭೇಟಿ ನೀಡುವ ಜನರು ಹೇಳುತ್ತಾರೆ.

ಬರೋಗ್ ರೈಲು ನಿಲ್ದಾಣ, ಹಿಮಾಚಲ ಪ್ರದೇಶ
 ಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿರುವ ಹಿಮಾಚಲದ ಬರೋಗ್ ರೈಲು ನಿಲ್ದಾಣವು ಎಷ್ಟು ಅದ್ಭುತವಾಗಿದೆಯೋ, ಅಷ್ಟೇ ಭಯಾನಕ ಮತ್ತು ದೆವ್ವದ ಕಥೆಯನ್ನು ಹೊಂದಿದೆ. ನಿಲ್ದಾಣದ ಬಳಿ ಬರೋಗ್ ಎಂಬ ಹೆಸರಿನ ಸುರಂಗವೂ ಇದೆ, ಅಲ್ಲಿ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಬರೋಗ್ ಕೆಲಸ ಮಾಡುತ್ತಿದ್ದರು. ಒಂದೊಮ್ಮೆ ಅವರು ಆತ್ಮಹತ್ಯೆ ಮಾಡಿಕೊಂಡರಂತೆ. ಅಂದಿನಿಂದ ಅವರ ಆತ್ಮವು ಈ ಸುರಂಗದಲ್ಲಿ ಅಡ್ಡಾಡುತ್ತಿವೆ ಎಂದು ಇಲ್ಲಿ ಕೆಲಸ ಮಾಡುವ ಜನರು ಹೇಳುತ್ತಾರೆ.

ಇದನ್ನೂ ಓದಿ: ಭೈರತಿ ರಣಗಲ್ ಯಶಸ್ಸಿನ ನಂತರ, ಗೀತಾ ಪಿಕ್ಚರ್ಸ್‌ ಮತ್ತೊಂದು ಹ್ಯಾಟ್ರಿಕ್‌ ಘೋಷಣೆ..!

ಸೂಚನೆ: ಈ ಲೇಖನದಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿ/ವಿಷಯವು ನಿಖರ ಅಥವಾ ವಿಶ್ವಾಸಾರ್ಹ ಎಂದು ಖಾತರಿಪಡಿಸುವುದಿಲ್ಲ. ನಮ್ಮ ಉದ್ದೇಶವು ಮಾಹಿತಿಯನ್ನು ಒದಗಿಸುವುದು ಮಾತ್ರ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News