ನವದೆಹಲಿ: ಶಿಕ್ಷಣದ ಮೇಲೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ದೇಶಾದ್ಯಂತ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಪುಸ್ತಕ ಸಾಮಗ್ರಿಗಳನ್ನು ಒದಗಿಸಲು ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಭಾರತೀಯ ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ (ISLRTC)ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ
ಇದನ್ನು ಓದಿ- Online Classes ಹೇಗೆ ಸಾಧ್ಯ? NCERT ಸಮೀಕ್ಷಾ ವರದಿಯಿಂದ ಬಹಿರಂಗಗೊಂಡ ಸತ್ಯ ಏನು?
आज @ncert और Indian Sign Language Research and Training Centre-ISLRTC (DEPwD, Ministry of Social Justice and Empowerment के तहत एक राष्ट्रीय संस्थान) के बीच एक एतिहासिक समझौते (MoU) से हिंदी और अंग्रेजी माध्यम की कक्षा I-XII तक की सभी NCERT पाठ्यपुस्तक,@MSJEGOI @EduMinOfIndia pic.twitter.com/Xyla7TJ6rN
— Dr. Ramesh Pokhriyal Nishank (@DrRPNishank) October 6, 2020
ಶಿಕ್ಷಣದ ದೃಷ್ಟಿಯಿಂದ ಅತ್ಯಾವಶ್ಯಕ ಹೆಜ್ಜೆ ಇದಾಗಿದೆ
ಅಕ್ಟೋಬರ್ 6, 2020 ರಂದು ಎನ್‌ಸಿಇಆರ್‌ಟಿ ಮತ್ತು ಐಎಸ್‌ಎಲ್‌ಆರ್‌ಟಿಸಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ, ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದು, 'ಇಂದು ಎಲ್ಲಾ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು, ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಒಂದನೇ ತರಗತಿಯ ಶಿಕ್ಷಕರ ಕೈಪಿಡಿಗಳು ಎನ್‌ಸಿಇಆರ್‌ಟಿ ಮತ್ತು ಐಎಸ್‌ಎಲ್‌ಆರ್‌ಟಿಸಿ ನಡುವೆ ಸಹಿ ಹಾಕಿದ ಐತಿಹಾಸಿಕ ಒಪ್ಪಂದದಿಂದ (ಎಂಒಯು). ಮತ್ತು ಇತರ ಪೂರಕ ಪಠ್ಯ ಪುಸ್ತಕಗಳು ಮತ್ತು ಸಂಪನ್ಮೂಲಗಳನ್ನು ಭಾರತೀಯ ಸಂಕೇತ ಭಾಷೆಯಾಗಿ ಪರಿವರ್ತಿಸಬಹುದು" ಎಂದು ಹೇಳಿದ್ದಾರೆ.
ಇದನ್ನು ಓದಿ- NCERT ಪಠ್ಯ ಪರಿಷ್ಕರಣೆ: ಆರ್ಟಿಕಲ್ 370ರ ವಿಷಯ ಸೇರ್ಪಡೆ
ಶಬ್ದಾವಳಿ ಅಭಿವೃದ್ಧಿಗೊಳ್ಳಲಿದೆ
ಇದುವರೆಗೆ ಮೂಕ ಹಾಗೂ ಕಿವುಡ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಈ ಒಪ್ಪಂದದಿಂದ ವಿದ್ಯಾರ್ಥಿಗಳು ಭಾರತೀಯ ಸಾಂಕೇತಿಕ ಭಾಷೆಗಳಲ್ಲಿಯೂ ಕೂಡ ಅವರು ಅಧ್ಯಯನ ನಡೆಸಬಹುದು. ಇದರಿಂದ ಕೇವಲ ಅವರ ಶಬ್ದಾವಳಿ ಮಾತ್ರ ಅಭಿವೃದ್ಧಿಗೊಳ್ಳದೆ, ಕಾಂಟೆಕ್ಸ್ಟ್ ಅನ್ನು ಅರ್ಥಮಾಡಿಕೊಳ್ಳುವ ಅವರ ಕ್ಷಮತೆ ಕೂಡ ಹೆಚ್ಚಾಗಲಿದೆ. ಮೂಕ ಹಾಗೂ ಕಿವುಡ ಮಕ್ಕಳಲ್ಲಿ ಸಾಂಕೇತಗಳನ್ನು ಅರ್ಥಮಾಡಿಕೊಳ್ಳುವ ಕಲೆ ಚಿಕ್ಕಂದಿನಿಂದಲೇ ಇರುತ್ತದೆ.