ನವದೆಹಲಿ: ಭಾರತವು 2022 ರಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.ಅದೇ ವರ್ಷ ಭಾರತ ತನ್ನ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಜಿ ಶೃಂಗಸಭೆಯನ್ನು ಭಾರತಕ್ಕೆ ಆಯೋಜಿಸಿಸುವ ಅವಕಾಶ ನೀಡಬೇಕೆಂದು ಪ್ರಧಾನಿ ವಿನಂತಿಸಿಕೊಂಡಿದ್ದರು.
In 2022 India completes 75 years since Independence. In that special year, India looks forward to welcoming the world to the G-20 Summit! Come to India, the world's fastest growing large economy! Know India’s rich history and diversity, and experience the warm Indian hospitality.
— Narendra Modi (@narendramodi) December 1, 2018
ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ "2022 ರಲ್ಲಿ ಭಾರತ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬಲಿವೆ ಆದ್ದರಿಂದ ಆ ವಿಶೇಷ ವರ್ಷದಲ್ಲಿ, ಭಾರತವು G-20 ಶೃಂಗಸಭೆಗೆ ಜಗತ್ತನ್ನು ಸ್ವಾಗತಿಸಲು ಎದುರು ನೋಡುತ್ತಿದೆ! ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾದ ಭಾರತಕ್ಕೆ ಬನ್ನಿ! ಭಾರತದ ಶ್ರೀಮಂತ ಇತಿಹಾಸ ಮತ್ತು ವೈವಿಧ್ಯತೆಯನ್ನು ತಿಳಿಯಿರಿ ಮತ್ತು ಭಾರತೀಯ ಆತಿಥ್ಯವನ್ನು ಅನುಭವಿಸಿರಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಶೇಷವೆಂದರೆ 2022 ರ ಜಿ-ಶೃಂಗಸಭೆಯನ್ನು ಇಟಲಿ ದೇಶವು ಆಯೋಜಿಸಬೇಕಾಗಿತ್ತು.ಆದರೆ ಆಗ ಭಾರತ ತನ್ನ 75ನೇ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಿದೆ.ಈ ಹಿನ್ನಲೆಯಲ್ಲಿ ಭಾರತ ಆ ಶೃಂಗಸಭೆಯನ್ನು ತಾನು ಆಯೋಜಿಸುವುದಾಗಿ ಕೇಳಿಕೊಂಡಿದೆ.