Adhipatra Update: ಚಂದನವನದ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮುಖ್ಯಪಾತ್ರದಲ್ಲಿ ಬಣ್ಣ ಹಚ್ಚಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Adhipatra movie : ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾದ ಚೆಲುವೆ ಜಾಹ್ನವಿ ಇದೀಗ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾ ʼಅಧಿಪತ್ರʼ ದಲ್ಲಿ ನಾಯಕಿ ಪಾತ್ರ ಮಾಡಲಿದ್ದಾರೆ.
Roopesh Shetty new movie : ಬಿಗ್ ಬಾಸ್ ಶೋ ಗೆದ್ದ ನಂತರದಲ್ಲಿ ರೂಪೇಶ್ ಶೆಟ್ಟಿ ಸಿನಿಮಾ ನಡೆ ಏನೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಕನ್ನಡ ಸಿನಿಮಾದ ತಯಾರಿಯಲ್ಲಿರುವಾಗಲೇ ತುಳು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದ ಅವರು, ಅದರಲ್ಲಿಯೇ ಬ್ಯುಸಿಯಾಗಿಬಿಟ್ಟಿದ್ದರು.
Circus' Tulu Film: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಸರ್ಕಸ್’. ಈ ಚಿತ್ರ ಜೂನ್ 23 ರಂದು ಬಿಡುಗಡೆಯಾಗಿ, ಯಶಸ್ವಿ ಒಂದು ವಾರ ಪೂರೈಸಿದೆ.
Roopesh Shetty : ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ. ಜೊತೆಗೆ ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್. ರೂಪೇಶ್ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ರೂಪೇಶ್ ಇವರು 15 ಆಗಸ್ಟ್ 1991ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದರು.
ಬಿಗ್ಬಾಸ್ ಮನೆಯಲ್ಲಿ ಕಪ್ ನೋಡಿ ಬಿಗ್ಬಾಸ್ ಕಪ್ ನಾನೆತ್ತಿದ್ರೆ ಹೇಗಿರುತ್ತೆ ಅಂತಾ ಯೋಚಿಸಿದ್ದೆ.. ಆಗಲೇ ಬಿಗ್ಬಾಸ್ ಗೆಲ್ಲಬೇಕು ಅನ್ನೋ ಆಸೆಯಾಯ್ತು.. ಹಣಕ್ಕಿಂತಲೂ ಬಿಗ್ಬಾಸ್ ಕಪ್ ಮುಖ್ಯ ಎಂದು ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.. ಕಾರಿನಲ್ಲಿ ಕಪ್ ಬೀಳೋಕೆ ಆದಾಗ ಬೈದೆ.. ಬಿಗ್ಬಾಸ್ ಕಪ್ ನನಗೆ ತುಂಬಾ ಸ್ಪೆಷಲ್ ಎಂದಿದ್ದಾರೆ..
ಬಿಗ್ಬಾಸ್ ಮನೆಯಲ್ಲಿ ದಿನಕಳೆಯೋದೇ ಚಾಲೆಂಜಿಂಗ್ ಎಂದು ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ. ನನ್ನನ್ನು ಯಾರೂ ನೋಡುತ್ತಿಲ್ವಾ ಅನ್ನೋ ಭಾವನೆ ಇತ್ತು.. ಆದ್ರೆ ಬಂದಿದ್ದ ಗಿಫ್ಟ್ನಿಂದ ನನ್ನ ಯೋಚನೆ ಬದಲಾಯ್ತು.. ಬಿಗ್ಬಾಸ್ ನನಗೆ ಹೊಸ ಪ್ರಪಂಚ ಕೊಟ್ಟಿದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ 3-4 ವಾರ ಇದ್ರೆ ಲೈಫ್ ಚೇಂಜ್ ಆಗುತ್ತೆ ಎಂದುಕೊಂಡಿದ್ದೆ. ಕನಿಷ್ಠ ನಾಲ್ಕುವಾರವಾದ್ರೂ ಇರಬೇಕು ಎಂದುಕೊಂಡಿದೆ.. ಬಿಗ್ಬಾಸ್ ಗೆಲ್ಲೋ ಕನಸು ಇರಲಿಲ್ಲ ಎಂದು ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.. ಜೀ ಕನ್ನಡ ನ್ಯೂಸ್ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ..
Bigg Boss Kannada 9 Grand Finale : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸೀಸನ್ 9 ಗೆ ಇಂದು ತೆರೆ ಬಿದ್ದಿದೆ. 100 ದಿನಗಳ ಆಟದಲ್ಲಿ ದೊಡ್ಮನೆಯೊಳಗೆ ತಮ್ಮದೇ ಶೈಲಿಯಲ್ಲಿ ಆಡಿ ಇದೀಗ ಒಬ್ಬರು ವಿನ್ನರ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಬಿಗ್ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
Bigg Boss Kannada Season 9 : ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮೊದಲ ಐದು ಫೈನಲಿಸ್ಟ್ಗಳಾಗಿದ್ದು, ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ ಇಂದು ಸಂಜೆ ನಡೆಯಲಿದೆ.
ರಾತ್ರೋರಾತ್ರಿ ಬಿಗ್ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ. ಮಂಗಳವಾರ ಸಂಚಿಕೆಯಲ್ಲಿ ಗುರೂಜಿ ಎಲಿಮಿನೆಟ್ ಆಗಿದ್ದರು. ಬಿಗ್ಹೌಸ್ನಿಂದ ಹೊರಬರುವಾಗ ಅವರು ಮಗುವಿನಂತೆ ಕಣ್ಣೀರು ಹಾಕಿದ್ದರು. ಇದೀಗ ಮತ್ತೇ ರೂಪೇಶ್ ಶೆಟ್ಟಿ ನೆನೆದು ಆರ್ಯವರ್ಧನ್ ಗುರೂಜಿಯವರು ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ರೂಪೇಶ್ ಗೆಲ್ಬೇಕು, ಅವನು ನನ್ನ ಮನಗ ರೀತಿ ಅಂತ ಬಾವುಕವಾಗಿ ಮಾತನಾಡಿದ್ದಾರೆ.
ಬಿಗ್ ಬಾಸ್ ಆಟ ಮುಗಿಯುವ ಸಮಯ ಬಂದಾಯ್ತು. ಮನೆಯಲ್ಲಿ ವೈರಿಗಳಂತಿದ್ದವರು ಇಂದು ಪ್ರಾಣ ಸ್ನೇಹಿತರಾಗಿದ್ದಾರೆ. ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಆದ್ರೆ ಬಿಗ್ಬಾಸ್ ಆಟದ ಮುಂದೆ ಎಲ್ಲವೂ ಶೂನ್ಯ ಅಲ್ಲವೆ.. ಇದು ಆಟದ ಮನೆ ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಎನ್ನುವಂತೆ ಎಲಿಮಿನೇಟ್ ಆದವರು ಮೆನೆಯಿಂದ ಹೊರಗೆ ಹೋಗಲೇಬೇಕು. ಇದೀಗ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ.
ಬಿಗ್ಬಾಸ್ ಆಟಕ್ಕೆ ಮನೆಮಂದಿಯಲ್ಲಾ ಸುಟ್ಟು ಸುಣ್ಣವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಹೊಸ ಹೊಸ ಆಟಗಳು ಉದಯಿಸುತ್ತಿವೆ. ಇವೇಲ್ಲ ಪ್ರೇಕ್ಷಕರಿಗೆ ಮಜಾ ಕೊಟ್ಟರೆ ಸ್ಪರ್ಧಿಗಳಿಗೆ ಸಂಕಟಪ್ರಾಯವಾಗಿವೆ. ಸದ್ಯ ರೂಪೇಶ್ ರಾಜಣ್ಣ ಅವರು ಕಳೆದುಕೊಂಡ ಚಿನ್ನದ ಉಂಗುರ ಮತ್ತು ಬ್ರೆಸ್ಲೆಟ್ ಕಂಡು ಹಿಡಿಯುವುದಾಗಿ ಹೇಳಿ ಗುರೂಜಿ ಮತ್ತು ರೂಪೇಶ್ ಬಕ್ರಾ ಮಾಡಿದ ಎಪಿಸೋಡ್ ವೀಕ್ಷಕರನ್ನು ನಗೆಗಡಲಿಗೆ ತೆಲಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.