ನಿರ್ಭಯ ಹ'ತ್ಯಾಚಾರ ಪ್ರಕರಣ: ನಾಳೆಗಿಲ್ಲ ಅಪರಾಧಿಗಳ ಗಲ್ಲು ಶಿಕ್ಷೆ- ದೆಹಲಿ ಕೋರ್ಟ್

2012 ರಲ್ಲಿ ನಿರ್ಭಯಾ ಹ'ತ್ಯಾಚಾರದ ಅಪರಾಧಿಗಳಿಗೆ ನಾಳೆ ಗಲ್ಲಿಗೇರಿಸಲಾಗುವುದಿಲ್ಲ ಎಂದು ದೆಹಲಿಯ ನ್ಯಾಯಾಧೀಶರು ತಿಳಿಸಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಇನ್ನೂ ಅಪರಾಧಿಗಳ ಕ್ಷಮಾಧಾನ ಅರ್ಜಿ ಬಾಕಿ ಇರುವುದರಿಂದ, ಅತ್ಯಾಚಾರಿಗಳು ಎಲ್ಲ ಕಾನೂನು ಆಯ್ಕೆಗಳು ಇನ್ನು ಮುಗಿದಿಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Last Updated : Mar 2, 2020, 07:32 PM IST
ನಿರ್ಭಯ ಹ'ತ್ಯಾಚಾರ ಪ್ರಕರಣ: ನಾಳೆಗಿಲ್ಲ ಅಪರಾಧಿಗಳ ಗಲ್ಲು ಶಿಕ್ಷೆ- ದೆಹಲಿ ಕೋರ್ಟ್   title=
ಸಾಂದರ್ಭಿಕ ಚಿತ್ರ

ನವದೆಹಲಿ: 2012 ರಲ್ಲಿ ನಿರ್ಭಯಾ ಹ'ತ್ಯಾಚಾರದ ಅಪರಾಧಿಗಳಿಗೆ ನಾಳೆ ಗಲ್ಲಿಗೇರಿಸಲಾಗುವುದಿಲ್ಲ ಎಂದು ದೆಹಲಿಯ ನ್ಯಾಯಾಧೀಶರು ತಿಳಿಸಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಇನ್ನೂ ಅಪರಾಧಿಗಳ ಕ್ಷಮಾಧಾನ ಅರ್ಜಿ ಬಾಕಿ ಇರುವುದರಿಂದ, ಅತ್ಯಾಚಾರಿಗಳು ಎಲ್ಲ ಕಾನೂನು ಆಯ್ಕೆಗಳು ಇನ್ನು ಮುಗಿದಿಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ನಿರ್ಭಯ ಪ್ರಕರಣದಲ್ಲಿನ ಅಪರಾಧಿಗಳಾದ ಅಕ್ಷಯ್ ಠಾಕೂರ್, 31, ಪವನ್ ಗುಪ್ತಾ, 25, ವಿನಯ್ ಶರ್ಮಾ, 26, ಮತ್ತು ಮುಖೇಶ್ ಸಿಂಗ್ (32) ಅವರು ತಮ್ಮ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ದಿಗ್ಭ್ರಮೆಗೊಂಡ ಸರಣಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಅವರ ಗಲ್ಲು ಶಿಕ್ಷೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ.

ಒಟ್ಟು ಆರು ಅಪರಾಧಿಗಳಲ್ಲಿ ಒಬ್ಬ ಅಪರಾಧಿಯೂ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇನ್ನೂಬ್ಬ ಅಪ್ರಾಪ್ತನಾಗಿದ್ದ ಹಿನ್ನಲೆಯಲ್ಲಿ ಆತನನ್ನು ಮೂರು ವರ್ಷಗಳ ನಂತರ ಸುಧಾರಣಾ ರೂಮಿನಿಂದ ಬಿಡುಗಡೆ ಮಾಡಲಾಯಿತು.ಇನ್ನುಳಿದ ನಾಲ್ವರು ಅಪರಾಧಿಗಳಿಗೆ ಈಗ ಗಲ್ಲು ಶಿಕ್ಷೆಯನ್ನು ನೀಡಲಾಗಿದೆ.ಆದರೆ ಈಗ ಅವರು ಎಲ್ಲ ಕಾನೂನು ಆಯ್ಕೆಗಳ ಮೂಲಕ ತಮ್ಮ ಶಿಕ್ಷೆಯನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದಾರೆ. ಡಿಸೆಂಬರ್ 16, 2012 ರಂದು, ಸಂಭವಿಸಿದ ಭೀಕರ ನಿರ್ಭಯ ಹತ್ಯಾಚಾರ ಪ್ರಕರಣ ದೇಶದೆಲ್ಲೆಡೆ ಆಕ್ರೋಶವನ್ನು ಹುಟ್ಟು ಹಾಕಿತ್ತು.

ಈಗ ನ್ಯಾಯಾಂಗದ ಪ್ರಕ್ರಿಯೆ ವಿಳಂಭವಾಗುತ್ತಿರುವ ಹಿನ್ನಲೆಯಲ್ಲಿ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ನಿರ್ಭಯ ತಾಯಿ ' ಆಕೆ ಕ್ರೂರವಾಗಿ ಅತ್ಯಾಚಾರಕ್ಕೊಳಗಾದಳು ಮತ್ತು ಅವಳನ್ನು ಬೀದಿಯಲ್ಲಿ ಎಸೆಯಲ್ಪಡಲಾಗಿತ್ತು. ಆದರೆ ಈಗ ಈ ನ್ಯಾಯಾಲಯಗಳೆಲ್ಲವೂ ತಮಶಾವನ್ನು ನೋಡುತ್ತಿವೆ" ಎಂದು ನಿರ್ಭಯಾ ತಾಯಿ ನ್ಯಾಯಾಲಯದ ಹೊರಗೆ ಹೇಳಿದರು.

ಇದೇ ವೇಳೆ ನಿರ್ಭಯ ಪ್ರಕರಣದಲ್ಲಿನ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಸೀಮಾ ಕುಶ್ವಾಹಾ "ಕಾನೂನಿನ ಕುಶಲತೆಯನ್ನು ನ್ಯಾಯಾಲಯವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ನಮ್ಮ ವ್ಯವಸ್ಥೆಯು ಸಂಪೂರ್ಣವಾಗಿ ಕೊಳೆತುಹೋಗಿದೆ. ನ್ಯಾಯ ಪಡೆಯಲು ವರ್ಷಗಳು ಬೇಕಾಗುತ್ತವೆ. ನಾವು ಅದನ್ನು ಒಟ್ಟಾಗಿ ಸರಿಪಡಿಸಬೇಕಾಗಿದೆ' ಎಂದು ಹೇಳಿದರು.

Trending News