ಅವಿಶ್ವಾಸ ಮತಯಾಚನೆ: ಕೇಂದ್ರಕ್ಕೆ ಬೆಂಬಲ ನೀಡಿದ ಜೆಡಿಯು,ಸಂಸತ್ತಿನಿಂದ ಸಭಾತ್ಯಾಗ

      

Last Updated : Jul 20, 2018, 02:00 PM IST
ಅವಿಶ್ವಾಸ ಮತಯಾಚನೆ: ಕೇಂದ್ರಕ್ಕೆ ಬೆಂಬಲ ನೀಡಿದ ಜೆಡಿಯು,ಸಂಸತ್ತಿನಿಂದ ಸಭಾತ್ಯಾಗ   title=
Photo courtesy: ANI

ನವದೆಹಲಿ: ಜೆಡಿಯು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕುರಿತು ತೆಲುಗುದೇಶಂ (ಟಿಡಿಪಿ) ಮಂಡಿಸಿರುವ ವಿಶ್ವಾಸಮತಯಾಚನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ಮುಖ್ಯಸ್ಥ ಮತ್ತು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ "ನಾವು ಆಡಳಿತಾರೂಢ ಸರ್ಕಾರದ ಜೊತೆಗೆ ಎಂದು ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ  ಹೇಳಿದರು.ಜೆಡಿ (ಯು) ನರೇಂದ್ರ ಮೋದಿ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಹಿನ್ನಲೆಯಲ್ಲಿ , ಬಿಜು ಜನತಾ ದಳ ಸಂಸತ್ತಿನಿಂದ ಹೊರ ನಡೆದರು.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಲೋಕಸಭಾ ಅಧ್ಯಕ್ಷೆ  ಸುಮಿತ್ರಾ ಮಹಾಜನ್ ಅವರು ಟಿಡಿಪಿ ವಿಶ್ವಾಸಮತ ಮಂಡನೆಗೆ ಒಪ್ಪಿಕೊಂಡಿದ್ದಾರೆ.ಇದೇ ಮೊದಲ ಬಾರಿಗೆ ನಾಲ್ಕೂವರೆ ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ವಿಶ್ವಾಸಮತವನ್ನು ಎದುರಿಸುತ್ತಿದೆ. 2014ರಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಗೆಲ್ಲುವ ಮೂಲಕ ಮೂರು ದಶಕಗಳಲ್ಲಿ ಈ ಸಾಧನೆ ಮಾಡಿದ ಮೊದಲ ಪಕ್ಷ ಎನ್ನುವ ಖ್ಯಾತಿಯನ್ನು ಪಡೆದಿತ್ತು.

ಇನ್ನೊಂದು ವಿಶೇಷ ಸಂಗತಿಯೆಂದರೆ 15 ವರ್ಷಗಳ ನಂತರ ಮೋದಿ ಸರ್ಕಾರ ಮೊದಲ ಬಾರಿಗೆ ವಿಶ್ವಾಸಮತವನ್ನು ಎದುರಿಸುತ್ತಿದೆ.ಈ ಹಿಂದೆ 2003 ರಲ್ಲಿ ವಾಜಪೇಯಿ ಸರ್ಕಾರ ವಿಶ್ವಾಸಮತವನ್ನು ಎದುರಿಸಿತ್ತು.

ವಿಶ್ವಾಸಾರ್ಹ ಚಲಾವನೆಯನ್ನು ಸೋಲಿಸಲು, ಬಿಜೆಪಿ 268 ಮತಗಳ ಅವಶ್ಯಕತೆಯಿದೆ. ಎನ್ಡಿಎ ಪ್ರಸ್ತುತ 535 ಸದಸ್ಯ ಲೋಕಸಭೆಯಲ್ಲಿ 312 ಸದಸ್ಯರನ್ನು ಹೊಂದಿದೆ, ಬಿಜೆಪಿ 274 ಸದಸ್ಯರನ್ನು ಒಳಗೊಂಡಿದೆ.

Trending News