ಗ್ರೇಟರ್ ನೋಯ್ಡಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿಲ್ಲ: ವೈದ್ಯಕೀಯ ವರದಿ

 11ನೇ ತರಗತಿ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಯಾವುದೇ ಗುರುತಿಲ್ಲ ಎಂದು ಹೇಳಿದೆ. 

Last Updated : Apr 25, 2018, 02:09 PM IST
ಗ್ರೇಟರ್ ನೋಯ್ಡಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿಲ್ಲ: ವೈದ್ಯಕೀಯ ವರದಿ title=

ಗ್ರೇಟರ್‌ ನೋಯ್ಡಾ : ತನ್ನ ಮೇಲೆ ಸ್ನೇಹಿತ ಹಾಗೂ ಸಂಬಂಧಿಯೊಬ್ಬ ಕಾರಿನಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ನೀಡಿದ್ದ 11ನೇ ತರಗತಿ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಯಾವುದೇ ಗುರುತಿಲ್ಲ ಎಂದು ಹೇಳಿದೆ. 

ಏಪ್ರಿಲ್ 18ರಂದು ತನ್ನ ಸ್ನೇಹಿತ ಹಾಗೂ ಸಂಬಂಧಿಯೋರ್ವ ಕಾರಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಆರೋಪಿಸಿ ಆಕೆ ಗ್ರೇಟರ್ ನೊಯಿಡಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ಅದರಂತೆ ಪೊಲೀಸರು ಮೂವರ ವಿರುದ್ಧ ಪ್ರಕಟನ ದಾಖಲಿಸಿದ್ದಾರೆ. ಅದರೆ ಇದೀಗ ಆ ಮೂವರೂ ತಲೆ ತಪ್ಪಿಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಹುಡುಗಿ ಹೇಳಿಕೆಯ ಪ್ರಕಾರ, ಆಕೆ ಶಾಲೆ ಮುಗಿಸಿ ಮರಳುವಾಗ ಆರೋಪಿಗಳು ಆಕೆಯನ್ನು ಅಪಹರಿಸಿ, ಬಳಿಕ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಆ ಹುಡುಗಿ ಗ್ರೇಟರ್‌ ನೋಯ್ಡಾದ ಗಾಲ್ತಿಯಾ ಕಾಲೇಜಿನ ಸಮೀಪ ರಸ್ತೆಬದಿಯಲ್ಲಿ ಹಾಕಿ ಹೋಗಿದ್ದಾರೆ ಎನ್ನಲಾಗಿದೆ. 

ಆದರೆ, ಇದೀಗ ಬಂದಿರುವ ವೈದ್ಯಕೀಯ ವರದಿಗಳು ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಮ್ನ್ದು ಹೇಳುತ್ತಿವೆ. ಹೀಗಾಗಿ ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ತನಿಖೆ ನಡೆಸುತ್ತಿದ್ದಾರೆ. 

Trending News