ನವದೆಹಲಿ:ಶಹಜಾನ್ ಕಟ್ಟಿಸಿದ ಕೆಂಪುಕೋಟೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ ಬ್ರಿಟಿಷರ ಯುನಿಯನ್ ಜಾಕ್ ಧ್ವಜವನ್ನು ಇಳಿಸಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು, ಪ್ರಧಾನಿ ನೆಹರು ರಿಂದ ಹಿಡಿದು ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೆಗೂ ಈ ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಧ್ವಜವನ್ನು ಹಾರಿಸಿದ್ದಾರೆ.
ಆದರೆ ಇಂತಹ ಕೆಂಪುಕೋಟೆ ಇನ್ನು ಮುಂದೆ ಸರ್ಕಾರದ ಸ್ವತ್ತಾಗಿ ಇರುವುದುದಿಲ್ಲ ಎನ್ನುವುದು ಸದ್ಯದ ಸಂಗತಿ. ಹೌದು, ಈಗ ದಾಲ್ಮಿಯ ಭಾರತ ಗ್ರೂಪ್ ಎನ್ನುವ ಖಾಸಗಿ ಕಂಪನಿಯು ಇದನ್ನು ದತ್ತು ತೆಗೆದುಕೊಂಡಿದೆ. ಆದ್ದರಿಂದ ಕೆಂಪುಕೋಟೆ ಇನ್ನು ಮುಂದೆ ದಾಲ್ಮಿಯ ಗ್ರೂಪ್ ಕೆಂಪುಕೋಟೆ ಎಂದು ಕರೆಸಿಕೊಳ್ಳಲಿದೆ.ಸುಮಾರು ಐದು ವರ್ಷಗಳ ಅವದಿಯಲ್ಲಿ 25 ಕೋಟಿ ರೂಪಾಯಿಗಳನ್ನು ಅದು ಇದರ ನಿರ್ವಹಣೆಗಾಗಿ ಖರ್ಚು ಮಾಡಲಾಗುತ್ತಿದೆ, ಇದೇ ಬರುವ ಮೇ 23 ರಕ್ಕೆ ತನ್ನ ಕಾರ್ಯಾರಂಭ ಮಾಡಲಾಗಿದೆ.
ಮೋದಿ ಸರ್ಕಾರ ಇತ್ತೀಚಿಗೆ ಪಾರಂಪರಿಕ ಕಟ್ಟಡಗಳನ್ನು ಕಾಂಟ್ರಾಕ್ಟ್ ಮೂಲಕ ಖಾಸಗಿ ಕಂಪನಿಗಳಿಗೆ ನಿಡುವ ಯೋಜನೆಯನ್ನು ಜಾರಿಗೆ ತಂದಿದ್ದರು, ಆದ್ದರಿಂದ ಇನ್ನು ಮುಂದೆ ಇದೆ ಮೊದಲ ಬಾರಿಗೆ ಪ್ರಧಾನಿಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಖಾಸಗಿ ಅಧೀನದಲ್ಲಿರುವ ಕೆಂಪುಕೋಟೆಯಲ್ಲಿ ಆಚರಿಸಲಿದ್ದಾರೆ.