ದೆಹಲಿಯಲ್ಲಿ 58 ವರ್ಷಗಳಲ್ಲೇ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಚಳಿ ದಾಖಲು..!

ಭಾರತ ಹವಾಮಾನ ಇಲಾಖೆಯ (ಐಎಂಡಿ) ಅಂಕಿ-ಅಂಶಗಳ ಪ್ರಕಾರ ಅಕ್ಟೋಬರ್ ತಿಂಗಳು ದೆಹಲಿಯಲ್ಲಿ 58 ವರ್ಷಗಳಲ್ಲಿ ಅತ್ಯಂತ ಶೀತವಾಗಿದೆ.

Last Updated : Oct 31, 2020, 06:31 PM IST
ದೆಹಲಿಯಲ್ಲಿ 58 ವರ್ಷಗಳಲ್ಲೇ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಚಳಿ ದಾಖಲು..!

ನವದೆಹಲಿ: ಭಾರತ ಹವಾಮಾನ ಇಲಾಖೆಯ (ಐಎಂಡಿ) ಅಂಕಿ-ಅಂಶಗಳ ಪ್ರಕಾರ ಅಕ್ಟೋಬರ್ ತಿಂಗಳು ದೆಹಲಿಯಲ್ಲಿ 58 ವರ್ಷಗಳಲ್ಲಿ ಅತ್ಯಂತ ಶೀತವಾಗಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಸರಾಸರಿ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು 1962ರ ನಂತರದ ಅತಿ ಕಡಿಮೆ ಎನ್ನಲಾಗಿದೆ, ಆಗ ಅದು 16.9 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು ಐಎಂಡಿ ತಿಳಿಸಿದೆ.

ಸಾಮಾನ್ಯವಾಗಿ, ದೆಹಲಿಯು ಅಕ್ಟೋಬರ್‌ನಲ್ಲಿ ಕನಿಷ್ಠ 19.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸುತ್ತದೆ.ಗುರುವಾರ, ದೆಹಲಿಯಲ್ಲಿ ಕನಿಷ್ಠ 12.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಇದು 26 ವರ್ಷಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಅತಿ ಕಡಿಮೆ ಎನ್ನಲಾಗಿದೆ,ದೆಹಲಿಯಲ್ಲಿ ಇಷ್ಟು ಕಡಿಮೆ ತಾಪಮಾನ ದಾಖಲಾಗಿದ್ದು 1994 ರಲ್ಲಿ ಎನ್ನಲಾಗಿದೆ.

ಐಎಂಡಿ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 31, 1994 ರಂದು ದೆಹಲಿ 12.3 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.ವರ್ಷದ ಈ ಸಮಯದ ಸಾಮಾನ್ಯ ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್ ಎಂದು ಐಎಂಡಿ ತಿಳಿಸಿದೆ.ಐಎಂಡಿಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ, ಮೋಡ ಕವಚದ ಅನುಪಸ್ಥಿತಿಯು ಈ ಬಾರಿ ಇಂತಹ ಕಡಿಮೆ ತಾಪಮಾನಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಅಕ್ಟೋಬರ್ 31, 1937 ರಂದು ದೆಹಲಿಯು ಸಾರ್ವಕಾಲಿಕ ಕಡಿಮೆ ತಾಪಮಾನ 9.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ ಎಂದು ಅವರು ಹೇಳಿದರು.

 

More Stories

Trending News