ಒಂದಲ್ಲ ಎರಡಲ್ಲ 17 ಮದುವೆಯಾದ ಭೂಪ.. ಈತನ ಕತೆ ಕೇಳಿದ್ರೆ ಒಂದು ಕ್ಷಣ ತಲೆ ತಿರಗುತ್ತೆ!

ವಿವಿಧ ರಾಜ್ಯಗಳ ಮಧ್ಯವಯಸ್ಕ, ವಿದ್ಯಾವಂತ ಮತ್ತು ಸ್ಥಿತಿವಂತ ಮಹಿಳೆಯರನ್ನು ವಿವಾಹವಾದ ಒಡಿಶಾದ 66 ವರ್ಷದ ಪುರುಷನ ಪಟ್ಟಿಯಲ್ಲಿ ಇನ್ನೂ ಮೂರು ಪ್ರಕರಣಗಳು ಮುಂಚೂಣಿಗೆ ಬರುವುದರೊಂದಿಗೆ ಪತ್ನಿಯರ ಸಂಖ್ಯೆ 17 ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

Written by - Chetana Devarmani | Last Updated : Feb 17, 2022, 10:35 AM IST
  • ವಿವಿಧ ರಾಜ್ಯಗಳ 17 ಜನರನ್ನು ಈ ವ್ಯಕ್ತಿ ಮದುವೆಯಾಗಿದ್ದಾನೆ
  • ಒಡಿಶಾದ 66 ವರ್ಷದ ಪುರುಷನ ಕತೆ ಕೇಳಿದ್ರೆ ಒಂದು ಕ್ಷಣ ತಲೆ ತಿರಗುತ್ತೆ
  • ವೈದ್ಯನೆಂದು ನಂಬಿಸಿ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ ಈ ಆಸಾಮಿ
ಒಂದಲ್ಲ ಎರಡಲ್ಲ 17 ಮದುವೆಯಾದ ಭೂಪ.. ಈತನ ಕತೆ ಕೇಳಿದ್ರೆ ಒಂದು ಕ್ಷಣ ತಲೆ ತಿರಗುತ್ತೆ! title=
ಮದುವೆ

ನವದೆಹಲಿ: ಒಂದಲ್ಲ ಎರಡಲ್ಲ ಎರಡು ಮದುವೆಯಾಗಿರುವ (Marriage) ಈ ಭೂಪನ ಕತೆ ಕೇಳಿದ್ರೆ ಒಂದು ಕ್ಷಣ ತಲೆ ತಿರಗುತ್ತೆ. ವಿವಿಧ ರಾಜ್ಯಗಳ 17 ಜನರನ್ನು ಈ ವ್ಯಕ್ತಿ ಮದುವೆಯಾಗಿದ್ದಾನೆ. 

ಪೊಲೀಸರ ಪ್ರಕಾರ, ಈ 17 ಜನರಲ್ಲಿ ನಾಲ್ವರು ಒಡಿಶಾದಲ್ಲಿ, ಮೂವರು ದೆಹಲಿಯಲ್ಲಿ, ಮೂವರು ಅಸ್ಸೋಂನಲ್ಲಿ ಮತ್ತು ಇತರರು ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಕುಶಿನಗರದಲ್ಲಿ ಭೀಕರ ಅಪಘಾತ! ಅರಿಶಿನ ಶಾಸ್ತ್ರದಲ್ಲಿ ಬಾವಿಗೆ ಬಿದ್ದ ಮಹಿಳೆಯರು; 11 ಮಂದಿ ಮೃತ್ಯು

ವಿವಿಧ ರಾಜ್ಯಗಳ ಮಧ್ಯವಯಸ್ಕ, ವಿದ್ಯಾವಂತ ಮತ್ತು ಸ್ಥಿತಿವಂತ ಮಹಿಳೆಯರನ್ನು ವಿವಾಹವಾದ ಒಡಿಶಾದ (Odisha) 66 ವರ್ಷದ ಪುರುಷನ ಪಟ್ಟಿಯಲ್ಲಿ ಇನ್ನೂ ಮೂರು ಪ್ರಕರಣಗಳು ಮುಂಚೂಣಿಗೆ ಬರುವುದರೊಂದಿಗೆ ಪತ್ನಿಯರ ಸಂಖ್ಯೆ 17 ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿ 14 ಬಾರಿ ಮದುವೆಯಾಗಿದ್ದ ಎಂದು ಈ ಹಿಂದೆ ಆರೋಪಿಸಲಾಗಿತ್ತು.

ವೈದ್ಯನೆಂದು (Doctor) ನಂಬಿಸಿ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ ಈ ಆಸಾಮಿ, ಅಸ್ಸೋಂನ ವೈದ್ಯೆ ಮತ್ತು ಒಡಿಶಾದ ಉನ್ನತ ಶಿಕ್ಷಣ ಪಡೆದ ಮಹಿಳೆ, ಛತ್ತೀಸ್‌ಗಢದ ಚಾರ್ಟೆಡ್ ಅಕೌಂಟೆಂಟ್ ಜತೆ ಮದುವೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ವಿದ್ಯಾರ್ಥಿಯೊಬ್ಬರಿಗೆ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ ಈತ ₹18 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರ ಮೊಬೈಲ್ ಫೋನ್‌ಗಳನ್ನು (Mobile Phone) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಮತ್ತು ಅವರ ಹಣಕಾಸಿನ ವಹಿವಾಟುಗಳನ್ನು ತನಿಖೆ ಮಾಡಲಾಗುತ್ತದೆ ಎಂದುಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, 40 kmph ವೇಗ: ಸರ್ಕಾರದ ಹೊಸ ರಸ್ತೆ ಸುರಕ್ಷತಾ ನಿಯಮಗಳು ಇಲ್ಲಿವೆ

ಆರೋಪಿಯು ಮೂರು ಪ್ಯಾನ್ ಕಾರ್ಡ್‌ಗಳು (Pan Card) ಮತ್ತು 11 ಎಟಿಎಂ ಕಾರ್ಡ್‌ಗಳನ್ನು (ATM Card) ಹೊಂದಿರುವುದು ಪತ್ತೆಯಾದ ಕಾರಣ ಈ ಪ್ರಕರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹಾಯವನ್ನು ಸಹ ಕೋರಲಾಗಿದೆ.

ಪೊಲೀಸರ ಪ್ರಕಾರ, ಈ 17 ಜನರಲ್ಲಿ ನಾಲ್ವರು ಒಡಿಶಾದಲ್ಲಿ, ಮೂವರು ದೆಹಲಿಯಲ್ಲಿ, ಮೂವರು ಅಸ್ಸೋಂನಲ್ಲಿ, ತಲಾ ಇಬ್ಬರು ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ಮತ್ತು ತಲಾ ಒಬ್ಬರು ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News