ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ!

ಈರುಳ್ಳಿ ಬೆಲೆಗಳು ಮತ್ತೊಮ್ಮೆ ಜನಸಾಮಾನ್ಯರು ಕೊಳ್ಳುವಾಗಲೇ ಕಣ್ಣೀರುಡುವಂತೆ ಮಾಡುತ್ತಿದೆ. ಕಳೆದ ಒಂದು ತಿಂಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಈ ಅವಧಿಯಲ್ಲಿ, ಈರುಳ್ಳಿಯ ಬೆಲೆ ಶೇಕಡಾ 75 ಕ್ಕಿಂತ ಹೆಚ್ಚಾಗಿದೆ.  

Last Updated : Aug 22, 2019, 02:25 PM IST
ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ! title=

ನವದೆಹಲಿ: ಈರುಳ್ಳಿ ಬೆಲೆಗಳು ಮತ್ತೊಮ್ಮೆ ಜನಸಾಮಾನ್ಯರು ಕೊಳ್ಳುವಾಗಲೇ ಕಣ್ಣೀರುಡುವಂತೆ ಮಾಡುತ್ತಿದೆ. ಕಳೆದ ಒಂದು ತಿಂಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಈ ಅವಧಿಯಲ್ಲಿ, ಈರುಳ್ಳಿಯ ಬೆಲೆ ಶೇಕಡಾ 75 ಕ್ಕಿಂತ ಹೆಚ್ಚಾಗಿದೆ. ಚಿಲ್ಲರೆ ಬೆಲೆ ಕೆ.ಜಿ.ಗೆ 40 ರೂ.ಗೆ ಏರಿದೆ. ಕಳೆದ ಐದು ದಿನಗಳಲ್ಲಿ, ಬೆಲೆಗಳು ಶೇಕಡಾ 20 ಕ್ಕಿಂತ ಹೆಚ್ಚಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾಗಿರುವುದೇ ಈರುಳ್ಳಿ ದರ ಗಗನಕ್ಕೇರಲು ಕಾರಣ ಎಂದು ಹೇಳಲಾಗುತ್ತಿದೆ.

ಈರುಳ್ಳಿ ಬೆಲೆಯನ್ನು ನಿಯಂತ್ರಿಸಬಹುದೇ?
ನಿರಂತರವಾಗಿ ಹೆಚ್ಚುತ್ತಿರುವ ಈರುಳ್ಳಿ ಬೆಲೆ ಕುರಿತು ಗ್ರಾಹಕ ಸಚಿವಾಲಯ ಸಭೆ ನಡೆಸಿದೆ. ಕನಿಷ್ಠ ರಫ್ತು ಬೆಲೆಯನ್ನು ಸರ್ಕಾರ ವಿಧಿಸಬಹುದು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಸಂಗ್ರಹಣೆ ವಿರುದ್ಧ ಕಠಿಣ ಆದೇಶ ನೀಡಲಾಗಿದೆ. ಅಲ್ಲದೆ, ಸಫಾಲ್ ಅಂಗಡಿಯಲ್ಲಿ ಈರುಳ್ಳಿಯ ಚಿಲ್ಲರೆ ದರವನ್ನು ಪ್ರತಿ ಕೆ.ಜಿ.ಗೆ 23.90 ರೂ ಎಂದು ನಿಗದಿಪಡಿಸಲಾಗಿದೆ. ಬೆಲೆ ನಿಗ್ರಹಿಸಲು, ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಮಾಡಲು ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಆದೇಶಿಸಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಬಫರ್ ಸ್ಟಾಕ್ ಅನ್ನು ಮಾರಾಟ ಮಾಡಲು ಸಹ ಆದೇಶಿಸಲಾಗಿದೆ. ಎರಡು ತಿಂಗಳಲ್ಲಿ ಹೊಸ ಬೆಳೆ ಬಂದ ನಂತರ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
 

ದೊಡ್ಡ ಮಾರುಕಟ್ಟೆಗಳಲ್ಲಿ ಈರುಳ್ಳಿಯ ಸಗಟು ಬೆಲೆ
ಮಾರುಕಟ್ಟೆ

20 ಜುಲೈ

(ಬೆಲೆ ರೂ.ಗಳಲ್ಲಿ

ಪ್ರತಿ ಕ್ವಿಂಟಲ್‌ಗೆ)

20 ಆಗಸ್ಟ್

(ಬೆಲೆ ರೂ.ಗಳಲ್ಲಿ

ಪ್ರತಿ ಕ್ವಿಂಟಲ್‌ಗೆ)

ತಿಂಗಳಲ್ಲಿ

ಶೇ. ಬೆಲೆ ಹೆಚ್ಚಳ

ಮುಂಬೈ 1,250 2,200 76%
ಲಸಲ್ಗಾಂವ್ 1,200 2,051 71%
ಅಹಮದಾಬಾದ್ 1,100 1,800 64%
ಕೋಲ್ಕತಾ 1,975 2,875 46%
ಬೆಂಗಳೂರು 1,210 1,750 45%
ದೆಹಲಿ 1,063 1,459 37%
ಚೆನ್ನೈ 1,800 2,300 28%

 

Trending News