ಆರ್ಥಿಕ ಕುಸಿತದಿಂದಾಗಿ 10,000 ಕಾರ್ಮಿಕರನ್ನು ಕೈ ಬಿಡಲು ಮುಂದಾದ ಪಾರ್ಲೆ

ದೇಶದ ಅತಿದೊಡ್ಡ ಬಿಸ್ಕತ್ತು ತಯಾರಕ ಕಂಪನಿ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಆರ್ಥಿಕ ಬೆಳವಣಿಗೆಯಲ್ಲಿ ಕುಂಠಿತಗೊಂಡಿರುವುದರಿಂದ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಕುಸಿದಿರುವುದರಿಂದ 10,000 ಕಾರ್ಮಿಕರನ್ನು ವಜಾಗೊಳಿಸಬಹುದು ಎಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

Last Updated : Aug 21, 2019, 03:57 PM IST
ಆರ್ಥಿಕ ಕುಸಿತದಿಂದಾಗಿ 10,000 ಕಾರ್ಮಿಕರನ್ನು ಕೈ ಬಿಡಲು ಮುಂದಾದ ಪಾರ್ಲೆ title=

ನವದೆಹಲಿ: ದೇಶದ ಅತಿದೊಡ್ಡ ಬಿಸ್ಕತ್ತು ತಯಾರಕ ಕಂಪನಿ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಆರ್ಥಿಕ ಬೆಳವಣಿಗೆಯಲ್ಲಿ ಕುಂಠಿತಗೊಂಡಿರುವುದರಿಂದ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಕುಸಿದಿರುವುದರಿಂದ 10,000 ಕಾರ್ಮಿಕರನ್ನು ವಜಾಗೊಳಿಸಬಹುದು ಎಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಕುಸಿತವು ಕಾರುಗಳಿಂದ ಬಟ್ಟೆಯವರೆಗಿನ ಎಲ್ಲದರ ಮಾರಾಟ ಕುಂಠಿತಗೊಳ್ಳುತ್ತಿದೆ, ಇದು ಉತ್ಪಾದನೆಯನ್ನು ಮೊಟಕುಗೊಳಿಸುವಂತೆ ಮಾಡಿದೆ.ಈಗ ಎಲ್ಲ ವಲಯಗಳು ಸರ್ಕಾರದ ಕ್ರಮಗಳ ಮೂಲಕ ಪುನರುಜ್ಜೀವನಗೊಳ್ಳುವ ಕ್ರಮಕ್ಕೆ ನಿರೀಕ್ಷಿಸುತ್ತಿವೆ ಎನ್ನಲಾಗಿದೆ.

ಪಾರ್ಲೆಯ ಬಿಸ್ಕತ್ತು ಮಾರಾಟದಲ್ಲಿ ತೀವ್ರ ಕುಸಿತದಿಂದಾಗಿ ಕಂಪನಿಯು ಉತ್ಪಾದನೆಯನ್ನು ಕಡಿತಗೊಳಿಸಬೇಕಾಗಬಹುದು, ಇದರಿಂದಾಗಿ 8,000-10,000 ಜನರ ವಜಾಗೊಳಿಸಬಹುದು ಎಂದು ಪಾರ್ಲೆ ವಿಭಾಗದ ಮುಖ್ಯಸ್ಥ ಮಾಯಾಂಕ್ ಷಾ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ. 'ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಒಂದು ವೇಳೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ ...ನಾವು ಈ ಸ್ಥಾನಗಳನ್ನು ತೆಗೆದುಹಾಕಬಹುದು' ಎಂದು ಅವರು ಹೇಳಿದರು. 

1929 ರಲ್ಲಿ ಸ್ಥಾಪನೆಯಾದ ಪಾರ್ಲೆ, ಕಂಪನಿಯ ಒಡೆತನದ 10 ಸೌಲಭ್ಯಗಳು ಮತ್ತು 125 ಗುತ್ತಿಗೆ ಉತ್ಪಾದನಾ ಘಟಕಗಳಲ್ಲಿ ನೇರ ಮತ್ತು ಗುತ್ತಿಗೆ ಕಾರ್ಮಿಕರು ಸೇರಿದಂತೆ ಸುಮಾರು 1,00,000 ಜನರನ್ನು ನೇಮಿಸಿಕೊಂಡಿದೆ. 2017 ರಲ್ಲಿ ಕೇಂದ್ರ  ಸರ್ಕಾರದ  ಜಾರಿಗೆ ತಂಡ ಜಿಎಸ್‌ಟಿ ಕಾಯ್ದೆಯಿಂದಾಗಿ ಪಾರ್ಲೆ-ಜಿ ಯಂತಹ ಜನಪ್ರಿಯ ಪಾರ್ಲೆ ಬಿಸ್ಕತ್ತು ಬ್ರಾಂಡ್‌ಗಳ ಬೇಡಿಕೆ ಹದಗೆಟ್ಟಿದೆ ಎಂದು ಷಾ ಹೇಳಿದರು.

ಸರ್ಕಾರದ ಹೆಚ್ಚಿನ ತೆರಿಗೆಯಿಂದಾಗಿ ಪಾರ್ಲೆಗೆ ಪ್ರತಿ ಪ್ಯಾಕ್‌ನಲ್ಲಿ ಕಡಿಮೆ ಬಿಸ್ಕತ್ತು ನೀಡುವಂತೆ ಒತ್ತಾಯಿಸಿದೆ, ಇದು ಗ್ರಾಮೀಣ ಭಾರತದಲ್ಲಿ ಕಡಿಮೆ-ಆದಾಯದ ಗ್ರಾಹಕರಿಂದ ಬೇಡಿಕೆಗೆ ಹೊಡೆತ ಬಿದ್ದಿದೆ. ಇದು ಪಾರ್ಲೆಯ ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ನೀಡುತ್ತದೆ ಎನ್ನಲಾಗಿದೆ. 'ಇಲ್ಲಿನ ಗ್ರಾಹಕರು ಅತ್ಯಂತ ಬೆಲೆ-ಸಂವೇದನಾಶೀಲರಾಗಿದ್ದಾರೆ, ನಿರ್ದಿಷ್ಟ ಬೆಲೆಗೆ ಅವರು ಎಷ್ಟು ಬಿಸ್ಕತ್ತುಗಳನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಅವರು ಬಹಳ ಜಾಗೃತರಾಗಿದ್ದಾರೆ' ಎಂದು ಶಾ ಹೇಳಿದರು.

ವಾರ್ಷಿಕ 1.4 ಶತಕೋಟಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಪಾರ್ಲೆ, ಕಳೆದ ವರ್ಷದಲ್ಲಿ ಸರ್ಕಾರದ ಜಿಎಸ್ಟಿ ಕೌನ್ಸಿಲ್ ಮತ್ತು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯೊಂದಿಗೆ ಮಾತುಕತೆ ನಡೆಸಿದ್ದು, ತೆರಿಗೆ ದರಗಳನ್ನು ಪರಿಶೀಲಿಸುವಂತೆ ಕೇಳಿಕೊಂಡರು ಎಂದು ಶಾ ತಿಳಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತವು ಈಗಾಗಲೇ ತನ್ನ ನಿರ್ಣಾಯಕ ವಾಹನ ಉದ್ಯಮದಲ್ಲಿ ಸಾವಿರಾರು ಉದ್ಯೋಗ ನಷ್ಟಗಳಿಗೆ ಕಾರಣವಾಗಿದೆ, ಇದು ಬೇಡಿಕೆಯ ಕುಸಿತವನ್ನು ವೇಗಗೊಳಿಸುತ್ತದೆ ಎಂದು ಶಾ ಹೇಳಿದರು.

ಈ ಹಿಂದೆ ಈ ಕಂಪನಿಗೆ ಪಾರ್ಲೆ ಗ್ಲುಕೊ ಎಂದು ಕರೆಯಲಾಗುತ್ತಿತು, ಅಂತರ ಅದನ್ನು ಪಾರ್ಲೆ-ಜಿ ಎಂದು ಮರು ನಾಮಕರಣ ಮಾಡಲಾಯಿತು. 1980 ಮತ್ತು 1990 ರ ದಶಕಗಳಲ್ಲಿ ಪಾರ್ಲೆ ಜಿ ದೇಶದೆಲ್ಲಡೆ ಮನೆ ಮಾತಾಗಿತ್ತು. 2003 ರಲ್ಲಿ, ಪಾರ್ಲೆ-ಜಿ ಅನ್ನು ವಿಶ್ವದ ಅತಿದೊಡ್ಡ ಮಾರಾಟವಾದ ಬಿಸ್ಕತ್ತು ಬ್ರಾಂಡ್ ಎಂದು ಪರಿಗಣಿಸಲಾಯಿತು.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ನೀಲ್ಸನ್ ಕಳೆದ ತಿಂಗಳು ದೇಶದ ಗ್ರಾಹಕ ಸರಕುಗಳ ಉದ್ಯಮವು ಹಬೆಯನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದು, ಸಣ್ಣ ತಯಾರಕರು ನಿಧಾನಗತಿಯ ಆರ್ಥಿಕತೆಯಲ್ಲಿ ಸ್ಪರ್ಧಾತ್ಮಕ ಅನುಕೂಲಗಳನ್ನು ಕಳೆದುಕೊಳ್ಳುತ್ತಾರೆ. ಪಾರ್ಲೆ ಮುಖ್ಯ ಸ್ಪರ್ಧಿ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆರ್ರಿ ಈ ತಿಂಗಳ ಆರಂಭದಲ್ಲಿ ಮಾತನಾಡಿ' ನಿಸ್ಸಂಶಯವಾಗಿ, ಆರ್ಥಿಕತೆಯಲ್ಲಿ ಕೆಲವು ಗಂಭೀರ ಸಮಸ್ಯೆಗಳಿವೆ' ಎಂದು ಬೆರ್ರಿ ಹೇಳಿದ್ದರು.

Trending News