ವಿಮಾನದಲ್ಲಿ ಬಟ್ಟೆ ಕಳಚಿ ಓಡಾಡಿದ ಪ್ರಯಾಣಿಕ; ಯಾಕೆ ಗೊತ್ತಾ?

ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನ IX 194ರಲ್ಲಿ ಶನಿವಾರ ಈ ಘಟನೆ ನಡೆದಿದೆ. 

Last Updated : Dec 31, 2018, 05:38 PM IST
ವಿಮಾನದಲ್ಲಿ ಬಟ್ಟೆ ಕಳಚಿ ಓಡಾಡಿದ ಪ್ರಯಾಣಿಕ; ಯಾಕೆ ಗೊತ್ತಾ? title=

ನವದೆಹಲಿ: ದುಬೈನಿಂದ ಲಕ್ನೌಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಏಕಾಏಕಿ ಬಟ್ಟೆ ಕಳಚಿ ಓಡಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನ IX 194ರಲ್ಲಿ ಶನಿವಾರ ಈ ಘಟನೆ ನಡೆದಿದೆ. ಆತ ಬಟ್ಟೆ ಬಿಚ್ಚಿದ್ದನ್ನು ಕಂಡ ವಿಮಾನ ಸಿಬ್ಬಂದಿ ಕೂಡಲೇ ಆತ್ನಕಗೊಂದು ಪೈಲೆಟ್ ಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಎಟಿಸಿಯನ್ನು ಸಂಪರ್ಕಿಸಿದ ಪೈಲೆಟ್, ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯನ್ನು ಒದಗಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ. ಬಳಿಕ ಲಕ್ನೌನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಆತನನ್ನು ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ ಎಂದು ಏರ್ ಲೈನ್ ಮೂಲಗಳಿಂದ ತಿಳಿದುಬಂದಿದೆ. 

ಉತ್ತರಪ್ರದೇಶದ ನಿವಾಸಿಯಾದ ಪ್ರಯಾಣಿಕ 'ಮಾನಸಿಕ ಅಸ್ವಸ್ಥ' ಎಂಬುದು ವಿಚಾರಣೆ ಸಂದರ್ಭದಲ್ಲಿ ತಿಳಿದ ನಂತರ ಆತನನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ. 

Trending News