ಪೆಟಾದಿಂದ ಕಂಬಳ ನಿಷೇದ ಕೋರಿ ಸುಪ್ರೀಂಗೆ ಮರು ಅರ್ಜಿ ಸಲ್ಲಿಕೆ

ಕರಾವಳಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಆಡುವ ಕಂಬಳಕ್ಕೆ  ತಡೆ ನೀಡಬೇಕೆಂದು ಪ್ರಾಣಿ ದಯಾ ಸಂಘ ಸುಪ್ರೀಂಕೋರ್ಟ್‌ಗೆ ಮತ್ತೆ ಅರ್ಜಿಯನ್ನು ಸಲ್ಲಿಸಿದೆ. 

Last Updated : Sep 15, 2018, 12:59 PM IST
ಪೆಟಾದಿಂದ ಕಂಬಳ ನಿಷೇದ ಕೋರಿ ಸುಪ್ರೀಂಗೆ ಮರು ಅರ್ಜಿ ಸಲ್ಲಿಕೆ  title=

ನವದೆಹಲಿ: ಕರಾವಳಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಆಡುವ ಕಂಬಳಕ್ಕೆ  ತಡೆ ನೀಡಬೇಕೆಂದು ಪ್ರಾಣಿ ದಯಾ ಸಂಘ ಸುಪ್ರೀಂಕೋರ್ಟ್‌ಗೆ ಮತ್ತೆ ಅರ್ಜಿಯನ್ನು ಸಲ್ಲಿಸಿದೆ. 

ಈ ಹಿಂದೆ ಈ ಕ್ರೀಡೆಗೆ ಅನುಮತಿ ನಿಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ - 2017ಯನ್ನು ಜಾರಿಗೆ ತಂದಿತ್ತು.  ಈ ಹಿನ್ನಲೆಯಲ್ಲಿ ಈಗ ಪೇಟಾ ಕ್ರೀಡೆಯನ್ನು ನಿಷೇದಪಡಿಸಬೇಕೆಂದು ತಗಾದೆ ತಗೆದಿದೆ.

ಇನ್ನು, ರಾಜ್ಯ ಸರ್ಕಾರದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಮಸೂದೆಗೆ - 2017ಕ್ಕೆ ಮಾರ್ಚ್ 2018ರಲ್ಲೇ  ತಡೆ ನೀಡಬೇಕೆಂದು ಪೆಟಾ ಅರ್ಜಿ ಸಲ್ಲಿಸಿತ್ತು. ಆದರೆ, ಈ ಮಸೂದೆಗೆ ರಾಷ್ಟ್ರಪತಿಯವರು ಸಹಿ ಹಾಕಿದ ನಂತರ ಕಂಬಳಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿದೆ. 

ಈ ಹಿನ್ನಲೆಯಲ್ಲಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ಅನುಮತಿ ನಿಡುವುದಲ್ಲದೆ,ಈಗ ಹೊಸದಾಗಿ ಸಲ್ಲಿಸಲಿರುವ ಅರ್ಜಿಯನ್ನು ಸ್ವೀಕರಿಸಬೇಕೆಂದು ಸುಪ್ರೀಂಕೋರ್ಟ್ ಗೆ ಪೇಟಾ ಮನವಿ ಮಾಡಿಕೊಂಡಿದೆ. ಪೇಟಾವು ರಾಜ್ಯ ಸರ್ಕಾರವು ತಂದಿರುವ ಕಾಯ್ದೆಯು ಕೇಂದ್ರ ಸರ್ಕಾರದ ಪ್ರಾಣಿಗಳ ಮೇಲೆ ಕ್ರೌರ್ಯ ತಡೆಯುವ 1960 ಕಾಯ್ದೆಗೆ  ವಿರುದ್ದವಾಗಿದೆ ಎಂದು ತನ್ನ ಹೊಸ ಅರ್ಜಿಯಲ್ಲಿ ತಿಳಿಸಿದೆ. 

ಸುಪ್ರೀಂ ಕೋರ್ಟ್  ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಸ್ಪರ್ಧೆಗಳನ್ನು ನಿಷೇದ ಮಾಡಿದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಕಂಬಳಕ್ಕೆ ಅನುಮತಿ ನಿಡುವ ನಿಟ್ಟಿನಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು. ಈ ಹಿನ್ನಲೆಯಲ್ಲಿ ಈಗ ಈ ನೂತನ ಕಾಯ್ದೆ ಪ್ರಾಣಿಗಳ ಹಕ್ಕಿನ್ನು ಉಲ್ಲಂಘಿಸುತ್ತದೆ ಎಂದು ಪೇಟಾ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

 

Trending News