ಚುನಾವಣೋತ್ತರ ಹಿಂಸೆಗೆ ತತ್ತರಿಸಿದ ಪ.ಬಂಗಾಳ. ರಾಜ್ಯಪಾಲರೊಂದಿಗೆ ಪ್ರಧಾನಿ ಮಾತುಕತೆ

ಹಿಂಸಾಚಾರದ ಬಗ್ಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖಡ್, ಪ್ರಧಾನಿ ನರೇಂದ್ರ ಮೋದಿ   ದೂರವಾಣಿ ಮೂಲಕ ಮಾತನಾಡಿದ್ದಾರೆ.  ಹಿಂಸಾಚಾರದ ಬಗ್ಗೆ ಗಂಭೀರ ಚಿಂತೆ ವ್ಯಕ್ತ ಪಡಿಸಿದ್ದಾರೆ. ನಾನು ಕೂಡಾ ಅವರೊಂದಿಗೆ ತನ್ನ ಆತಂಕ, ನೋವು ಹಂಚಿಕೊಂಡಿದ್ದೇನೆ. ಬಂಗಾಳದಲ್ಲಿ ಹಿಂಸಾಚಾರ, ದಾಂಧಲೆ, ಲೂಟಿ, ಬೆಂಕಿ ಹಚ್ಚುವುದು ಹತ್ಯೆ ಇತ್ಯಾದಿ ನಿರಾತಂಕವಾಗಿ ಮುಂದುವರಿದಿದೆ.

Written by - Ranjitha R K | Last Updated : May 4, 2021, 06:05 PM IST
  • ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ
  • ಹಿಂಸಾಚಾರಕ್ಕೆ ಕನಿಷ್ಟ 11 ಮಂದಿ ಬಲಿ
  • ಹಿಂಸಾಚಾರದ ಕುರಿತಂತೆ ರಾಜ್ಯಪಾಲರಿಗೆ ಕರೆ ಮಾಡಿದ ಪ್ರಧಾನಿ
ಚುನಾವಣೋತ್ತರ ಹಿಂಸೆಗೆ ತತ್ತರಿಸಿದ ಪ.ಬಂಗಾಳ. ರಾಜ್ಯಪಾಲರೊಂದಿಗೆ ಪ್ರಧಾನಿ ಮಾತುಕತೆ title=
ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ (Photo India.com)

ಕೊಲ್ಕತ್ತಾ : ಪಶ್ಚಿಮಬಂಗಾಳ ಚುನಾವಣೆಯಲ್ಲಿ ( West Bengal Election) ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರದ ವರದಿಯಾಗಿದ್ದು, ಕನಿಷ್ಠ 11 ಜನರು ಹತ್ಯೆಗೀಡಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖಡ್ ಜೊತೆ ಮಾತುಕತೆ ನಡೆಸಿದ್ದಾರೆ.  ರಾಜ್ಯದಲ್ಲಿ ಉಂಟಾಗಿರುವ ಹಿಂಸೆಯ ಬಗ್ಗೆ ಪ್ರಧಾನಿ ಚಿಂತೆ ಮತ್ತು ದುಃಖ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ ಮಾತನಾಡಿದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖಡ್, ಪ್ರಧಾನಿ ನರೇಂದ್ರ ಮೋದಿ (Narendra Modi)  ದೂರವಾಣಿ ಮೂಲಕ ಮಾತನಾಡಿದ್ದಾರೆ.  ಹಿಂಸಾಚಾರದ ಬಗ್ಗೆ ಗಂಭೀರ ಚಿಂತೆ ವ್ಯಕ್ತ ಪಡಿಸಿದ್ದಾರೆ. ನಾನು ಕೂಡಾ ಅವರೊಂದಿಗೆ ತನ್ನ ಆತಂಕ, ನೋವು ಹಂಚಿಕೊಂಡಿದ್ದೇನೆ. ಬಂಗಾಳದಲ್ಲಿ ಹಿಂಸಾಚಾರ, ದಾಂಧಲೆ, ಲೂಟಿ, ಬೆಂಕಿ ಹಚ್ಚುವುದು (fire), ಹತ್ಯೆ ಇತ್ಯಾದಿ ನಿರಾತಂಕವಾಗಿ ಮುಂದುವರಿದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಂಬಂಧಪಟ್ಟವರು ಕೂಡಲೇ ಕಾರ್ಯ ತತ್ಪರರಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : JEE ಮೇನ್ ಎಕ್ಸಾಮ್ 2021 ಮತ್ತೆ ಮುಂದೂಡಿಕೆ: ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್

ದೆಹಲಿಯಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ:
ಪಶ್ಚಿಮ ಬಂಗಾಳ (West Bengal) ಹಿಂಸಾಚಾರದ ಬಗ್ಗೆ ದೆಹಲಿಯಲ್ಲಿ ಬಿಜೆಪಿ (BJP) ನಾಯಕರು ಪ್ರತಿ ಭಟನೆ ನಡೆಸಿದ್ದಾರೆ. ಬಂಗಾಳ ಗೆಸ್ಟ್ ಹೌಸ್ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದರಾದ ಆದೇಶ್ ಗುಪ್ತಾ, ಮೀನಾಕ್ಷಿ ಲೇಖಿ, ಪರ್ವೇಶ್ ಸಿಂಗ್ ವರ್ಮಾ ಮತ್ತು ರಮೇಶ್ ಬಿದೂರಿ ಬಂಗಾಳ ಹಿಂಸಾಚಾರವನ್ನು ಖಂಡಿಸಿದ್ದಾರೆ.  ಇಂದು ಭಾರತ ವಿಭಜನೆ ಸಂದರ್ಭದಲ್ಲಿ ಮುಸ್ಲಿಂ ಲೀಗ್ (Muslim league) ಕೈಗೊಂಡ ಕರಾಳ ಡೈರೆಕ್ಟ್ ಆಕ್ಷನ್ ಡೇಯನ್ನು ನೆನಪಿಸುತ್ತದೆ ಎಂದು ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. 

ಹಿಂಸೆಯ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ :
ಪಶ್ವಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರದ  ಪ್ರಕರಣಗಳು ದಾಖಲಾಗುತ್ತಿರುವಂತೆಯೇ ಕೇಂದ್ರ ಗೃಹ ಸಚಿವಾಲಯ ಕಾರ್ಯ ತತ್ಪರವಾಗಿದೆ. ಈ ಕೂಡಲೇ ಹಿಂಸಾಚಾರದ ಕುರಿತ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ : Swiggy ಡೆಲಿವೆರಿ ಬಾಯ್ ಗಳಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸ, ಕೋವಿಡ್ ಚಿಕಿತ್ಸೆಯ ಖರ್ಚು ಕೂಡಾ ಭರಿಸಲಿದೆ ಕಂಪನಿ

ಕೊಲ್ಕತ್ತಾಗೆ ಧಾವಿಸಿದ ಜೆಪಿ ನಡ್ಡಾ :
ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸೆಯ ಪ್ರಕರಣ ಹೆಚ್ಚುತ್ತಿರುವ ವರದಿಗಳು ಬರುತ್ತಿರುವಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಕೊಲ್ಕತ್ತಾಗೆ ಧಾವಿಸಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ಕಾರ್ಯಕರ್ತರ ಮನೆಗೆ ತೆರಳಿ  ಅವರು ಸಾಂತ್ವನ ಹೇಳಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News