ನವದೆಹಲಿ: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವ ಹುತಾತ್ಮ ಯೋಧರು ಹಾಗೂ ನಿವೃತ್ತ ಯೋಧರ ಸ್ಮರಣಾರ್ಥ ನವದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಕ್ಷಣಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
M Narendra Modi,Defence Minister Nirmala Sitharaman and the three Service Chiefs at the #NationalWarMemorial pic.twitter.com/mb2Myw547Y
— ANI (@ANI) February 25, 2019
ಬಳಿಕ ಮಾತನಾಡಿದ ಅವರು, ದೇಶ ಸೇವೆ ಮಾಡಿದ ಎಲ್ಲ ಯೋಧರನ್ನು ಸ್ಮರಿಸುವ ಮಹತ್ಕಾರ್ಯ ಇದಾಗಿದೆ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಯೋಧರನ್ನು ಕಡೆಗಣಿಸಿತ್ತು. ಆದರೆ ಸ್ವಾತಂತ್ರ್ಯ ಬಂದು ಆರು ದಶಕಗಳ ಬಳಿಕ ಹುತಾತ್ಮ ಯೋಧರನ್ನು ಸ್ಮರಿಸುವ ಸ್ಮಾರಕವನ್ನು 40 ಎಕರೆ ಪ್ರದೇಶದಲ್ಲಿ ನಾವು ನಿರ್ಮಿಸಿದ್ದೇವೆ. ಇಲ್ಲಿ ಪ್ರತಿಯೊಬ್ಬ ಯೋಧನ ಹೆಸರನ್ನೂ ಕೆತ್ತಿಸಲಾಗಿದ್ದು, ಈ ಸ್ಮಾರಕ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದರು.
Delhi: PM Narendra Modi,Defence Minister Nirmala Sitharaman and the three Service Chiefs at the #NationalWarMemorial pic.twitter.com/5Md3jOozh4
— ANI (@ANI) February 25, 2019
"ಕಾಂಗ್ರೆಸ್ ಕೇವಲ ತನ್ನ ಉನ್ನತ ನಾಯಕರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದೆಯೇ ಹೊರತು ದೇಶದ ಯೋಧರನ್ನು ಕಡೆಗಣಿಸಿದೆ. ಕಳೆದ ಹಲವು ದಶಕಗಳಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಬೇಡಿಕೆಯಿತ್ತು. ಆದರೆ ಇದುವರೆಗೂ ಅದನ್ನು ನಿರ್ಮಿಸುವ ಬಗ್ಗೆ ಪ್ರಯತ್ನವನ್ನೂ ಕಾಂಗ್ರೆಸ್ ಮಾಡಲಿಲ್ಲ. ಈಗ ನಿಮ್ಮ ಆಶೀರ್ವಾದದಿಂದ ನಾವು 2014 ರಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದೆವು. 2009 ರಲ್ಲಿ, ಸಶಸ್ತ್ರ ಪಡೆಗಳು 1,86,000 ಬುಲೆಟ್-ಪ್ರೂಫ್ ಜಾಕೆಟ್ಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಜಾಕೆಟ್ ಇಲ್ಲದೆಯೇ ಸೈನ್ಯ ಶತ್ರುಗಳನ್ನು ಎದುರಿಸಿತ್ತು. ಆದರೆ, ಎನ್ ಡಿಎ ಸರಕಾರ 4.5 ವರ್ಷಗಳಲ್ಲಿ 2,30,000 ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಖರೀದಿಸಿವೆ. ಇಲ್ಲಿ ಕಾಣುವ ಮುಖ್ಯ ವ್ಯತ್ಯಾಸವೆಂದರೆ ಅವರು(ಕಾಂಗ್ರೆಸ್) ತಮ್ಮ ಕುಟುಂಬದ ರಸ್ಕಹ್ನೆಗೆ ಆದ್ಯತೆ ನೀಡುತ್ತಾರೆ, ನಾವು(ಬಿಜೆಪಿ) ದೇಶದ ರಕ್ಷಣೆಗೆ ಆದ್ಯತೆ ನೀಡುತ್ತೇವೆ" ಎಂದು ಮೋದಿ ವಾಗ್ದಾಳಿ ನಡೆಸಿದರು.
Addressing ex-servicemen before the dedication of #NationalWarMemorial to the nation. https://t.co/CX4vWogbTl
— Narendra Modi (@narendramodi) February 25, 2019
ಇದೇ ಸಂದರ್ಭದಲ್ಲಿ ದೇಶದ ರಕ್ಷಣೆಗೆ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರಿಗೆ ಮೋದಿ ನಮನ ಸಲ್ಲಿಸಿದರು. "ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಬಲಿಯಾದ ಯೋಧರನ್ನು ಪ್ರತಿ ಕ್ಷಣವೂ ಸ್ಮರಿಸುತ್ತಿದ್ದೇವೆ. ಆರು ದಶಕಗಳಿಂದ ಇದ್ದ ಯೋಧರ ಕೊರತೆಯನ್ನು ನಮ್ಮ ಸರಕಾರದ ಮೂಲಕ ಪೂರೈಸಿದ್ದೇವೆ. ಮಹಿಳೆಯರನ್ನು ಸೇನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಯೋಧರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ, ಏಕ ಶ್ರೇಣಿ - ಏಕ ಪಿಂಚಣಿ ಯೋಜನೆಗೆ 53 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮೋದಿ ತಿಳಿಸಿದರು.