ಮಹಾರಾಷ್ಟ್ರ: 13ರ ಹರೆಯದ ಬಾಲಕಿ ವಿವಾಹ ತಡೆದ ಪೊಲೀಸರು

ಕಳೆದ ಶುಕ್ರವಾರದಂದು ಸಂಜೆ 6 ಗಂಟೆಗೆ ಭಿವಾಂಡಿ ಪಟ್ಟಣದ ಕಾಲ್ವಾರ್ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಗೆ 13 ವರ್ಷದ ಬಾಲಕಿಯೊಂದಿಗೆ ವಿವಾಹ ಏರ್ಪಡಿಸಲಾಗಿತ್ತು.

Last Updated : May 19, 2019, 01:35 PM IST
ಮಹಾರಾಷ್ಟ್ರ: 13ರ ಹರೆಯದ ಬಾಲಕಿ ವಿವಾಹ ತಡೆದ ಪೊಲೀಸರು title=

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 13ರ ಹರೆಯದ ಬಾಲಕಿ ವಿವಾಹವನ್ನು ತಡೆಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದ ಬುಲ್ದಾನಾ ಜಿಲ್ಲೆಯ ಭಿವಾಂಡಿ ಪಟ್ಟಣದ ಕಾಲ್ವಾರ್ ಪ್ರದೇಶದಲ್ಲಿ  ಕಳೆದ ಶುಕ್ರವಾರದಂದು ಸಂಜೆ 6 ಗಂಟೆಗೆ 24 ವರ್ಷದ ವ್ಯಕ್ತಿಗೆ 13 ವರ್ಷದ ಬಾಲಕಿಯೊಂದಿಗೆ ವಿವಾಹ ಏರ್ಪಡಿಸಲಾಗಿತ್ತು ಎಂದು ನರ್ಪೋಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಲೋಜಿ ಶಿಂಧೆ ತಿಳಿಸಿದ್ದಾರೆ.

ಆದಾಗ್ಯೂ, ಬುಲ್ದಾನಾ ತೆಹಸೀಲ್ದಾರ್ (ಆದಾಯ ಅಧಿಕಾರಿ) ಶುಕ್ರವಾರ ಬೆಳಿಗ್ಗೆ ಈ ಬಗ್ಗೆ ಒಂದು ಸುಳಿವನ್ನು ಪಡೆದರು. ವಿವಾಹವಾಗುತ್ತಿದ್ದ ಬಾಲಕಿಯ ತಂದೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕರು ಬಾಲಕಿಗೆ ಚಿಕ್ಕ ವಯಸ್ಸಿನಲ್ಲೇ ವಿವಾಹ ಮಾಡಲು ಮುಂದಾಗಿದ್ದರು ಎಂದು ಅವರು ಹೇಳಿದರು. ಮದುವೆಯ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರದ ಕಾರಣ ಸ್ಥಳೀಯ ಆಡಳಿತಕ್ಕೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ತಕ್ಷಣ ಎಚ್ಚೆತ್ತ ಬುಲ್ದಾನಾ ಪೊಲೀಸರು ಕಡೆಗೂ ಈ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಲ್ಲಿನ ನರ್ಪೋಲಿ ಪೊಲೀಸರು ಹುಡುಗಿಯ ತಾಯಿಯ ಮೊಬೈಲ್ ಫೋನ್ ಕರೆಗಳನ್ನು ಟ್ಯಾಬ್ ಮಾಡಿ ಮದುವೆ ಸ್ಥಳವನ್ನು ಪತ್ತೆ ಮಾಡಿದ್ದಾರೆ ಪೊಲೀಸರು ರಾತ್ರಿ 4 ಗಂಟೆಗೆ ಸ್ಥಳಕ್ಕೆ ಧಾವಿಸಿ, ಮದುವೆಯನ್ನು ನಿಲ್ಲಿಸಿದರು ಎಂದು ಮಾಹಿತಿ ಲಭಿಸಿದೆ.

ಬಾಲ್ಯ ವಿವಾಹದಿಂದ ಹುಡುಗಿಯನ್ನು ರಕ್ಷಿಸಿ ಆಕೆಯ ತಾಯಿ ಮತ್ತು ಸಹೋದರನನ್ನು ಬಂಧಿಸಲಾಗಿದೆ. ಮಾಹಿತಿ ತಿಳಿದ ಬಳಿಕ ವರ ವಿವಾಹ ಸ್ಥಳಕ್ಕೆ ಧಾವಿಸದೆ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Trending News