ಲೋಕಸಭೆಯಲ್ಲಿ ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದ ಪ್ರಜ್ಞಾ ಠಾಕೂರ್

ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಉಲ್ಲೇಖಿಸಿ, ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಗೆ ನಾಂದಿ ಹಾಡಿದರು.

Last Updated : Nov 27, 2019, 08:21 PM IST
 ಲೋಕಸಭೆಯಲ್ಲಿ ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದ ಪ್ರಜ್ಞಾ ಠಾಕೂರ್ title=
Photo courtesy: Twitter

ನವದೆಹಲಿ: ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಉಲ್ಲೇಖಿಸಿ, ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಗೆ ನಾಂದಿ ಹಾಡಿದರು.

ವಿಶೇಷ ಸಂರಕ್ಷಣಾ ಗುಂಪು (ತಿದ್ದುಪಡಿ) ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರನ್ನು ಏಕೆ ಕೊಂದರು ಎಂಬ ಬಗ್ಗೆ ಡಿಎಂಕೆ ಸದಸ್ಯ ಎ ರಾಜಾ ಹೇಳಿದಾಗ, ಪ್ರಜ್ಞಾ ಠಾಕೂರ್ ಅಡ್ಡಿಪಡಿಸಿ, ನೀವು ದೇಶಭಕ್ತನ ಉದಾಹರಣೆ ನೀಡಲು ಸಾಧ್ಯವಿಲ್ಲ” ಎಂದರು. ಡಿಎಂಕೆ ಸದಸ್ಯ ಎ ರಾಜಾ ಅಂತಿಮವಾಗಿ ಗಾಂಧಿ ಹತ್ಯೆ ಮಾಡಲು ನಿರ್ಧರಿಸುವ ಮೊದಲು 32 ವರ್ಷಗಳ ಕಾಲ ಗಾಂಧಿಯ ವಿರುದ್ಧ ದ್ವೇಷ ಸಾಧಿಸಿದ್ದರು ಎಂದರು. 

ನಾಥುರಾಮ್ ಗೋಡ್ಸೆ ನಿರ್ದಿಷ್ಟ ಸಿದ್ಧಾಂತವನ್ನು ನಂಬಿದ್ದರಿಂದಾಗಿ ಮಹಾತ್ಮಾ ಗಾಂಧಿಯನ್ನು ಕೊಂದರು ಎಂದು ರಾಜಾ ಹೇಳಿದರು. ಲೋಕಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಪ್ರಜ್ಞಾ ಠಾಕೂರ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲ್ಲಿಬಿಜೆಪಿ ಸದಸ್ಯರು ಅವರಿಗೆ ಕುಳಿತುಕೊಳ್ಳಲು ಮನವೊಲಿಸಿದರು. 

Trending News