ನವದೆಹಲಿ: ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮುಗಿದ ಸುಮಾರು ಎರಡು ವಾರಗಳ ನಂತರ ರಾಷ್ಟ್ರಪತಿ ಭವನಕ್ಕೆ ಮರಳುತ್ತಿದ್ದಂತೆ ರಾಮ್ ನಾಥ್ ಕೋವಿಂದ್ ಅವರು ಚಿಕಿತ್ಸೆ ಪಡೆದ ಎರಡು ಆಸ್ಪತ್ರೆಗಳ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಸೋಮವಾರ ಧನ್ಯವಾದ ಅರ್ಪಿಸಿದರು.
ಮಾರ್ಚ್ 30 ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ರಾಷ್ಟ್ರಪತಿ ಕೊವಿಂದ್ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು.
ಇದನ್ನೂ ಓದಿ: ರಾಷ್ಟ್ರಪತಿ ಕೊವಿಂದ್ ಗೆ ಎದೆ ನೋವು, ಆಸ್ಪತ್ರೆಗೆ ದಾಖಲು
'ನನ್ನ ಶಸ್ತ್ರಚಿಕಿತ್ಸೆಯ ನಂತರ ನಾನು ರಾಷ್ಟ್ರಪತಿ ಭವನಕ್ಕೆ ಮರಳಿದ್ದೇನೆ. ನಿಮ್ಮೆಲ್ಲರ ಶುಭಾಶಯಗಳು ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು ಮತ್ತು ಏಮ್ಸ್ ಮತ್ತು ಸೈನ್ಯದ ಆರ್ಆರ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ನೀಡಿದ ಅಸಾಧಾರಣ ಆರೈಕೆಗೆ ಧನ್ಯವಾದಗಳು. ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ! "ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.
I have returned to Rashtrapati Bhavan after my surgery. My speedy recovery is thanks to wishes and prayers of all of you and exceptional care given by doctors and nursing staff at AIIMS and Army’s RR hospital. I am thankful to everyone! I am glad to be back home. pic.twitter.com/nhe6eC7OrD
— President of India (@rashtrapatibhvn) April 12, 2021
ಇದನ್ನೂ ಓದಿ: ರಾಷ್ಟ್ರಪತಿ ಕೊವಿಂದ್ ಆರೋಗ್ಯದಲ್ಲಿ ಸ್ಥಿರ, ಏಮ್ಸ್ ಅಸ್ಪತ್ರೆಗೆ ಶಿಫಾರಸ್ಸು
ಕಾರ್ಯವಿಧಾನಕ್ಕೆ ಒಂದು ವಾರದ ಮೊದಲು ರಾಷ್ಟ್ರಪತಿ ಕೋವಿಂದ್ (President Ram Nath Kovind) ಅವರನ್ನು ಏಮ್ಸ್ ಗೆ ಸ್ಥಳಾಂತರಿಸಲಾಯಿತು ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಮಾರ್ಚ್ 27 ರಂದು ತಿಳಿಸಿತ್ತು. ಇದಕ್ಕೂ ಮುನ್ನ 75 ವರ್ಷದ ಕೋವಿಂದ್ ಅವರು ಎದೆಯ ಅಸ್ವಸ್ಥತೆಯ ಬಗ್ಗೆ ದೂರು ನೀಡಿದ ನಂತರ ಆರ್ಮಿ ಆಸ್ಪತ್ರೆಯಲ್ಲಿ (ಆರ್ & ಆರ್) ಆರೋಗ್ಯ ತಪಾಸಣೆಗೆ ಒಳಗಾದರು.
ಇದನ್ನೂ ಓದಿ: ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಗೆ ಯಶಸ್ವಿ ಬೈಪಾಸ್ ಸರ್ಜರಿ
'ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನು ಇಂದು (ಮಾರ್ಚ್ 27, 2021) ಮಧ್ಯಾಹ್ನ ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗಿದೆ. ಪರಿಶೀಲನೆ ನಂತರ, ಮಾರ್ಚ್ 30, ಮಂಗಳವಾರ ಬೆಳಿಗ್ಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ 'ಎಂದು ರಾಷ್ಟ್ರಪತಿ ಭವನದ ಹೇಳಿಕೆ ನೀಡಿತ್ತು.
ರಾಷ್ಟ್ರಪತಿ ಕೊವಿಂದ್ ಅವರು ಆಸ್ಪತ್ರೆಗೆ ದಾಖಲಾದ ನಂತರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ನಾಯಕರು ಆರೋಗ್ಯದ ಬಗ್ಗೆ ವಿಚಾರಿಸಿದರು.ಪ್ರಧಾನಿ ಕಚೇರಿ (ಪಿಎಂಒ) ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಮಗನೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿತು. ಕೋವಿಂದ್ ಆಸ್ಪತ್ರೆಗೆ ದಾಖಲಿಸಿದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರ್ & ಆರ್ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.