ಕೇಂದ್ರ ಸಚಿವರ ಖಾಸಗಿ ಕಾರ್ಯದರ್ಶಿ ಕಾರು ಅಪಘಾತದಲ್ಲಿ ಮೃತ

ಕೇಂದ್ರ ಸಚಿವರ ಖಾಸಗಿ ಕಾರ್ಯದರ್ಶಿ ಕನ್ನೌಜ್‌ನಿಂದ ಬರೇಲಿಗೆ ಹೋಗುತ್ತಿದ್ದಾಗ, ಅವರ ಕಾರು ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬ್ರಿಜೇಶ್ ತಿವಾರಿ ಸಾವನ್ನಪ್ಪಿದ್ದಾರೆ.

Updated: Oct 19, 2019 , 02:02 PM IST
ಕೇಂದ್ರ ಸಚಿವರ ಖಾಸಗಿ ಕಾರ್ಯದರ್ಶಿ ಕಾರು ಅಪಘಾತದಲ್ಲಿ ಮೃತ

ಶಹಜಹಾನ್ಪುರ: ಶಹಜಹಾನ್ಪುರದಲ್ಲಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರ ಖಾಸಗಿ ಕಾರ್ಯದರ್ಶಿ ದುರಂತವಾಗಿ ಸಾವನ್ನಪ್ಪಿದ್ದಾರೆ. 

ಕೇಂದ್ರ ಸಚಿವರ ಖಾಸಗಿ ಕಾರ್ಯದರ್ಶಿ ಬ್ರಿಜೇಶ್ ತಿವಾರಿ ಕನ್ನೌಜ್‌ನಿಂದ ಬರೇಲಿಗೆ ಹೋಗುತ್ತಿದ್ದಾಗ, ಅವರ ಕಾರು ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮದನ್ಪುರ್ ಪ್ರದೇಶದ ಪೊಲೀಸ್ ಠಾಣೆಗೆ ಒಳಪಡುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತ ಬ್ರಿಜೇಶ್ ತಿವಾರಿ ಸ್ವತಃ ಕಾರು ಚಲಾಯಿಸುತ್ತಿದ್ದು, ಕಾರು ಅತಿ ವೇಗವಾಗಿ ಬರುತ್ತಿದ್ದ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಹಿತಿಯ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದರಾದರೂ ಬ್ರಿಜೇಶ್ ತಿವಾರಿ ಅಷ್ಟರಲ್ಲಿ ಮೃತಪಟ್ಟಿದ್ದರು. ಅದೇ ಸಮಯದಲ್ಲಿ, ಬ್ರಿಜೇಶ್ ತಿವಾರಿ ಸಾವಿನ ಸುದ್ದಿ ಬಂದಾಗಿನಿಂದ ಅವರ ಕುಟುಂಬದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ಬ್ರಿಜೇಶ್ ತಿವಾರಿ ಅವರ ಸಾವಿನಿಂದ ಸ್ಥಳೀಯರು ಕೂಡ ದುಃಖಿತರಾಗಿದ್ದಾರೆ ಮತ್ತು ಇದು ಬಿಜೆಪಿಗೆ ದೊಡ್ಡ ನಷ್ಟವೆಂದು ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.