ಯುಪಿಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ 498 ಜನರ ಆಸ್ತಿ ಮುಟ್ಟುಗೋಲು!

ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ರಾಜ್ಯದ 498 ಜನರನ್ನು ಯೋಗಿ ಸರ್ಕಾರ ಗುರುತಿಸಿದೆ.

Last Updated : Dec 27, 2019, 08:57 AM IST
ಯುಪಿಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ 498 ಜನರ ಆಸ್ತಿ ಮುಟ್ಟುಗೋಲು!  title=

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಉತ್ತರ ಪ್ರದೇಶದಾದ್ಯಂತ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರ ವಿರುದ್ಧ ಯುಪಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ರಾಜ್ಯದ 498 ಜನರನ್ನು ಗುರುತಿಸಿರುವ ಯುಪಿಯ ಯೋಗಿ ಆದಿತ್ಯನಾಥ್ (Yogi Adhityanath) ಸರ್ಕಾರ, ಈಗ ಈ 498 ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಈ ಮೊದಲು ಗುರುವಾರ ತನಕ, ಇಡೀ ರಾಜ್ಯದಲ್ಲಿ ಈವರೆಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ 373 ಆರೋಪಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ವಾಸ್ತವವಾಗಿ, ಡಿಸೆಂಬರ್ 19 ರಂದು ಲಖನೌದಲ್ಲಿ ಹಿಂಸಾಚಾರದ ಘಟನೆಯ ನಂತರ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಭಟನೆ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದವರನ್ನು ಗುರುತಿಸಿ ಆದ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕೆಂದು ಸೂಚನೆ ನೀಡಿದ್ದರು. ಪ್ರತಿಭಟನೆ ಮತ್ತು ಬಂಧನದ ಸಮಯದಲ್ಲಿ ತೆಗೆದ ವೀಡಿಯೊಗಳು ಮತ್ತು ಛಾಯಾಚಿತ್ರಗಳ ಸ್ಕ್ಯಾನ್ ಮೂಲಕ ಗುರುತಿಸಲ್ಪಟ್ಟ ಜನರ ಹೆಸರುಗಳನ್ನು ನೋಟಿಸ್ ಹೆಚ್ಚಾಗಿ ಒಳಗೊಂಡಿದೆ.

ಈ ಜಿಲ್ಲೆಗಳಲ್ಲಿ ನೋಟಿಸ್:
ರಾಂಪುರ್, ಸಂಭಾಲ್, ಲಕ್ನೋದಲ್ಲಿ 110, ಫಿರೋಜಾಬಾದ್‌ನಲ್ಲಿ 29, ಗೋರಖ್‌ಪುರದಲ್ಲಿ 34, ರಾಂಪುರದಲ್ಲಿ 28 ಸೇರಿದಂತೆ ಮೊರಾದಾಬಾದ್ ವಿಭಾಗದ 200 ಮಂದಿಗೆ ಆಸ್ತಿ ವಸೂಲಿಗೆ ಸಂಬಂಧಿಸಿದಂತೆ ನೋಟಿಸ್ ಕಳುಹಿಸಲಾಗಿದೆ.

ಡಿಸೆಂಬರ್ 20 ರಂದು ಬಿಜ್ನೋರ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಮಯದಲ್ಲಿ ಸಂಭವಿಸಿದ ಹಾನಿಯನ್ನು ನಿರ್ಣಯಿಸಿದ ನಂತರ, ಜಿಲ್ಲಾಡಳಿತವು 43 ಜನರಿಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನೋಟೀಸ್ ಕಳುಹಿಸಿದೆ.

ಫಿರೋಜಾಬಾದ್‌ನ 29 ಜನರಿಗೆ ವಿಧ್ವಂಸಕ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂಬ ಆರೋಪದ ಮೇಲೆ ನೋಟಿಸ್ ಕಳುಹಿಸಲಾಗಿದೆ.

ಸಂಭಾಲ್‌ನಲ್ಲಿ 26 ಜನರಿಗೆ ನೋಟಿಸ್:
ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act)ಯನ್ನು ವಿರೋಧಿಸಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ನಂತರ, ಪೊಲೀಸ್ ತನಿಖೆಯ ಆಧಾರದ ಮೇಲೆ ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ವ್ಯಕ್ತಿಗಳ ವಿಧ್ವಂಸಕ ಮತ್ತು ಆಸ್ತಿಪಾಸ್ತಿಗೆ ಹಾನಿ ಆರೋಪದಡಿ ಸಂಸ್ಥೆ ಮತ್ತು ವೈಯಕ್ತಿಕ ಆಧಾರದ ಮೇಲೆ ನೀಡಲಾದ ನೋಟಿಸ್‌ನಲ್ಲಿ, ಎಲ್ಲರಿಗೂ 3 ದಿನಗಳಿಂದ ಒಂದು ವಾರದವರೆಗೆ ಸಮಯವನ್ನು ನೀಡಲಾಗುತ್ತಿದೆ. ಈವರೆಗೆ ಯುಪಿಯಲ್ಲಿ ಸುಮಾರು 1.9 ಕೋಟಿ ರೂಪಾಯಿಗಳ ನಷ್ಟವನ್ನು ಸರಿದೂಗಿಸಲು ನೋಟಿಸ್ ನೀಡಲಾಗಿದ್ದು, ಇದರಲ್ಲಿ ಬುಲಂದ್‌ಶಹರ್‌ನಲ್ಲಿ 6 ಲಕ್ಷ ವಸೂಲಿ ಮಾಡಲು ನೋಟಿಸ್ ನೀಡಲಾಗಿದೆ. ಸಂಭಾಲ್‌ನಲ್ಲಿ 15 ಲಕ್ಷ ವಸೂಲಿಗಾಗಿ ನೋಟಿಸ್ ನೀಡಲಾಗಿದ್ದು, ರಾಂಪುರ ಜಿಲ್ಲೆಯಲ್ಲಿ 25 ಲಕ್ಷ ರೂ.ಗಳ ನಷ್ಟಕ್ಕೆ ನೋಟಿಸ್ ನೀಡಲಾಗಿದೆ.

Trending News