2025ರಲ್ಲಿ ಎಷ್ಟು ಬಾರಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಸಂಭವಿಸುತ್ತದೆ? ದಿನಾಂಕ ಮತ್ತು ಸಮಯವನ್ನ ತಿಳಿಯಿರಿ

Eclipse 2025: ಹಿಂದೂ ಧರ್ಮದಲ್ಲಿ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ 2025ರಲ್ಲಿ ಎಷ್ಟು ಗ್ರಹಣಗಳು ಸಂಭವಿಸುತ್ತವೆ? ಎಂಬುದರ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಹಾಗಾದರೆ 2025ರಲ್ಲಿ ಸಂಭವಿಸುವ ಸೂರ್ಯ ಮತ್ತು ಚಂದ್ರಗ್ರಹಣದ ದಿನಾಂಕ ಮತ್ತು ಸಮಯವನ್ನು ತಿಳಿಯಿರಿ.

Written by - Puttaraj K Alur | Last Updated : Jan 4, 2025, 10:43 PM IST
  • ಹಿಂದೂ ಧರ್ಮದಲ್ಲಿ ಗ್ರಹಣದ ಅವಧಿಯನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ
  • ಸೂರ್ಯ ಅಥವಾ ಚಂದ್ರಗ್ರಹಣ ಸಂಭವಿಸಿದಾಗಲೂ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ
  • ಗ್ರಹಣ ಸಮಯದಲ್ಲಿ ವೇಳೆ ಹಿಂದೂ ಮನೆಗಳಲ್ಲಿ ಆಹಾರ & ನೀರು ಸೇವನೆ ನಿಷೇಧಿಸಲಾಗಿದೆ
2025ರಲ್ಲಿ ಎಷ್ಟು ಬಾರಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಸಂಭವಿಸುತ್ತದೆ? ದಿನಾಂಕ ಮತ್ತು ಸಮಯವನ್ನ ತಿಳಿಯಿರಿ title=
ಗ್ರಹಣ 2025

Surya and Chandra Grahan 2025 Date timing: ಹಿಂದೂ ಧರ್ಮದಲ್ಲಿ ಗ್ರಹಣದ ಅವಧಿಯನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಅಷ್ಟೇ ಅಲ್ಲ ಸೂರ್ಯ ಅಥವಾ ಚಂದ್ರಗ್ರಹಣ ಸಂಭವಿಸಿದಾಗಲೂ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಅದೇ ರೀತಿ ಗ್ರಹಣ ಸಮಯದಲ್ಲಿ ಹಿಂದೂ ಮನೆಗಳಲ್ಲಿ ಆಹಾರ ಸೇವಿಸುವುದು ಮತ್ತು ನೀರು ಕುಡಿಯುವುದನ್ನು ನಿಷೇಧಿಸಲಾಗಿದೆ. ಗ್ರಹಣದ ಸಮಯದಲ್ಲಿ ದೇವಾನುದೇವತೆಗಳ ಮಂತ್ರಗಳನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ 2025ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎಷ್ಟು ಬಾರಿ ಸಂಭವಿಸುತ್ತದೆ? ಮತ್ತು ಗ್ರಹಣದ ಸಮಯ ಯಾವುದು? ಎಂದು ತಿಳಿಯಿರಿ. 

2025ರಲ್ಲಿ ಸೂರ್ಯಗ್ರಹಣದ ದಿನಾಂಕ ಮತ್ತು ಸಮಯ

1) ಚೈತ್ರ ಶುಕ್ಲ ಪಕ್ಷದ ಅಮಾವಾಸ್ಯೆಯ ದಿನದಂದು ಮಾರ್ಚ್ 29ರ ಶನಿವಾರದಂದು 2025ರ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣದ ಸ್ಪರ್ಶದ ಅವಧಿಯು ಮಧ್ಯಾಹ್ನ 2.20ರಿಂದ ಸಂಜೆ 6.13ರವರೆಗೆ ಇರುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. 

2) 2025ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು 21ನೇ ಸೆಪ್ಟೆಂಬರ್ ಭಾನುವಾರ, ಅಶ್ವಿನ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣದ ಸ್ಪರ್ಶದ ಅವಧಿಯು ರಾತ್ರಿ 11ರಿಂದ 3.24ರವರೆಗೆ ಇರುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ.

ಇದನ್ನೂ ಓದಿ: ಇದು ಜಗತ್ತಿನ ಅತ್ಯಂತ ಶ್ರೇಷ್ಠ ಸಂಖ್ಯೆ! ಈ ದಿನಾಂಕನಲ್ಲಿ ಜನಿಸಿದವರು ಅದೃಷ್ಟಕ್ಕೆ ಮತ್ತೊಂದು ಹೆಸರಿದ್ದಂತೆ; ಐಶ್ವರ್ಯ, ವಿರಾಟ್‌ ಜನಿಸಿದ್ದು ಕೂಡ ಇದೇ ಡೇಟ್‌ನಲ್ಲಿ

2025ರಲ್ಲಿ ಚಂದ್ರಗ್ರಹಣದ ದಿನಾಂಕ ಮತ್ತು ಸಮಯ

1) 2025ರ ಮೊದಲ ಚಂದ್ರಗ್ರಹಣವು ಮಾರ್ಚ್ 14ರ ಶುಕ್ರವಾರದಂದು ಫಾಲ್ಗುಣ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣದ ಸ್ಪರ್ಶದ ಅವಧಿಯು ಬೆಳಗ್ಗೆ 10.39ರಿಂದ ಮಧ್ಯಾಹ್ನ 2.18ರವರೆಗೆ ಇರುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

2) 2025ರಲ್ಲಿ ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 7ರ ಭಾನುವಾರದಂದು ಭಾದ್ರಪದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಈ ಗ್ರಹಣದ ಸ್ಪರ್ಶದ ಅವಧಿಯು ರಾತ್ರಿ 9.57ರಿಂದ 12.23ರವರೆಗೆ ಇರುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ.

ಇದನ್ನೂ ಓದಿ: ಅಪ್ಪಿತಪ್ಪಿಯೂ ಮೊಬೈಲ್‌ನಲ್ಲಿ ಇಂತಹ ವಾಲ್‌ಪೇಪರ್ ಅಳವಡಿಸಬೇಡಿ, ಇಲ್ಲದಿದ್ದರೆ ನಿಮಗೆ ಸಂಪತ್ತಿನ ಕೊರತೆ ತಪ್ಪಿದ್ದಲ್ಲ..!

ಸೂತಕ ಅವಧಿಯ ಸಮಯ

ಗ್ರಹಣದ ದಿನದಂದು ಸೂತಕ ಅವಧಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಸೂರ್ಯಗ್ರಹಣದ ಸೂತಕ ಕಾಲವು ಗ್ರಹಣದ ಸಮಯಕ್ಕಿಂತ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಆದರೆ ಚಂದ್ರಗ್ರಹಣದಲ್ಲಿ ಸೂತಕ ಕಾಲವು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂತಕವನ್ನು ಅನ್ವಯಿಸಿದಾಗ ಕುಶ ಅಥವಾ ತುಳಸಿ ಎಲೆಗಳು ಅಥವಾ ದೂಬನ್ನು ತೊಳೆದು ಮನೆಯಲ್ಲಿರುವ ಎಲ್ಲಾ ನೀರಿನ ಪಾತ್ರೆಗಳು, ಹಾಲು ಮತ್ತು ಮೊಸರುಗಳಿಗೆ ಸೇರಿಸಬೇಕು. ಗ್ರಹಣದ ಸಮಯದಲ್ಲಿ ವಾತಾವರಣದ ಕಿರಣಗಳು ನಕಾರಾತ್ಮಕ ಪ್ರಭಾವವನ್ನು ಬೀರುತ್ತವೆ, ಅದಕ್ಕಾಗಿಯೇ ಗ್ರಹಣ ಮತ್ತು ಸೂತಕ ಅವಧಿಯಲ್ಲಿ ತಿನ್ನುವುದು ಅಥವಾ ಕುಡಿಯುವುದನ್ನು ನಿಷೇಧಿಸಲಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News