ದೆಹಲಿ ಪೊಲೀಸರ ನಿರಾಕರಣೆ ನಡುವೆಯೂ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಪ್ರತಿಭಟನೆ

    

Last Updated : Jan 9, 2018, 01:06 PM IST
ದೆಹಲಿ ಪೊಲೀಸರ ನಿರಾಕರಣೆ ನಡುವೆಯೂ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಪ್ರತಿಭಟನೆ title=

ನವದೆಹಲಿ: ಮಂಗಳವಾರದಂದು ನಡೆಯಬೇಕಿದ್ದ ಜಿಗ್ನೇಶ್ ಮೇವಾನಿ ನೇತೃತ್ವದ ಯುವ ಹುಂಕಾರ್ ರ್ಯಾಲಿಗೆ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನೆಪ ಹೇಳಿ ನಿರಾಕರಿಸಿದ ಕಾರಣ ಯುವಜನರು ರಾಜಧಾನಿಯಲ್ಲಿ ಬೀದಿಗಿಳಿದು ಪ್ರತಿಭಟನೆಗೆ ನಿಂತಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ದೆಹಲಿಯ ಜಂಟಿ ಪೋಲಿಸ ಆಯುಕ್ತ ಅಜಯ್ ಚೌಧರಿ ಎನ್ ಜಿ ಟಿ ಆದೇಶದನ್ವಯ ಜಂತರ್ ಮಂತರ್ ನಲ್ಲಿ ಯಾವುದೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಅವಕಾಶವಿಲ್ಲ.ಆದ್ದರಿಂದ ಸಂಘಟಕರಿಗೆ ಪ್ರತಿಭಟನೆಯನ್ನು ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹಿರಿಯ ಪೋಲಿಸ ಅಧಿಕಾರಿ ತಿಳಿಸಿದ್ದಾರೆ.

ಎ ಎನ್ ಐ ವರದಿಯಂತೆ ಜಿಗ್ನೇಶ್ ಮೇವಾನಿ ಬೆಂಬಲಿಗರು ಬಹಳ ಸಂಖ್ಯೆಯಲ್ಲಿ  ಪಾರ್ಲಿಮೆಂಟ್ ಹತ್ತಿರ ಪ್ರತಿಭಟನೆಗೆ ಜಮಾಯಿಸಿದ್ದಾರೆ.ಜನವರಿ 26 ರಂದು ಗಣರಾಜ್ಯೋತ್ಸವ ಇರುವುದರ ಹಿನ್ನಲೆಯಲ್ಲಿ ಮುನ್ನಚ್ಚೆರಿಕೆಯ ಕ್ರಮವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ  ನಿಷೇದಾಜ್ಞೆಯನ್ನುಜಾರಿ ಮಾಡಲಾಗಿದೆ.

ಈ ಪ್ರತಿಭಟನಾ ರ್ಯಾಲಿಯಲ್ಲಿ ಜಿಗ್ನೇಶ್ ಭೂಮಿ,ಶಿಕ್ಷಣದಂತಹ ವಿಷಯಗಳನ್ನು ಇಂದಿನ ಸಭೆಯಲ್ಲಿ ಪ್ರಸ್ತಾಪಿಸುವ ಸಾದ್ಯತೆ ಇತ್ತು ಎಂದು ಹೇಳಲಾಗಿತ್ತು,ಅಲ್ಲದೆ ಜಿಗ್ನೇಶ್ ಜೊತೆಯಾಗಿ  ಅಸ್ಸಾಂ ನ ಅಖಿಲ್ ಗೋಗಿ  ಬಿಹಾರದಿಂದ   ಮನೋಜ್ ಮನ್ಜಿಲ್,ಲಕ್ನೊ ದಿಂದ ಪೂಜಾ ಶುಕ್ಲಾ ರವರು ಯುವ ಹುಂಕಾರ ರ್ಯಾಲಿಯಲ್ಲಿ ಭಾಗವಹಿಸುವ ಇತರ ನಾಯಕರಾಗಿದ್ದರು.  

Trending News