ನವದೆಹಲಿ: ಲೋಕಸಭೆಯಲ್ಲಿ ನಡೆಯುತ್ತಿರುವ ಅವಿಶ್ವಾಸ ಗೊತ್ತುವಳಿ ಚರ್ಚೆ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧೀ, ಭಾಷಣ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ತೆರಳಿ ಆಲಿಂಗಿಸಿಕೊಂಡರು. ಈ ವಿಶೇಷ ಘಟನೆ ಸದನದಲ್ಲಿ ಇದ್ದವರನ್ನು ಕೆಲ ಕಾಲ ನಗೆಗಡಲಲ್ಲಿ ತೇಲುವಂತೆ ಮಾಡಿತು.
Aap logon ke andar mere liye nafrat hai, aap mujhe Pappu aur bohot gaaliyan dekar bula sakte hain, lekin mere andar aapke liye nafrat nahi hai: Rahul Gandhi. He then walks up to PM Modi and gives him a hug #NoConfidenceMotion pic.twitter.com/w5DqyR7mVu
— ANI (@ANI) July 20, 2018
ಭಾಷಣದುದ್ದಕ್ಕೂ ಮೋದಿಯನ್ನು ಟೀಕಿಸಿದ ರಾಹುಲ್, "ನಾನು ನಿಮಗೆ ಪಪ್ಪು ಇರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶ ಕಟ್ಟಿದೆ. ಈ ಭಾವನೆ ನಿಮ್ಮಲ್ಲೂ ಇದೆ, ನಿಮ್ಮೊಳಗಿನ ಭಾವನೆ ಹೊರತರುವೆ, ನಿಮ್ಮನ್ನೂ ಕಾಂಗ್ರೆಸ್ಸಿಗರನ್ನಾಗಿ ಮಾಡುವೆ" ಎಂದು ಹೇಳಿದ್ದಲ್ಲದೆ, ಪ್ರಧಾನಿ ಮೋದಿ ಕುಳಿತಿದ್ದ ಕಡೆ ತೆರಳಿ ಅವರನ್ನು ಆಲಿಂಗಿಸಿಕೊಂಡರು. ಮತ್ತೆ ತಮ್ಮ ಸ್ಥಳಕ್ಕೆ ಬಂದು, "ನಾನು ಹಿಂದು, ನೀವು ಎಷ್ಟೇ ದೂರ ತಳ್ಳಿದರೂ ಹತ್ತಿರಮಾಡಿಕೊಳ್ಳುತ್ತೇನೆ" ಎಂದ ರಾಹುಲ್ ಮೋದಿ ಕಡೆ ನೋಡಿ ಕಣ್ಣು ಹೊಡೆದರು!
Rahul Gandhi winks after hugging PM Narendra Modi in Lok Sabha #NoConfidenceMotion pic.twitter.com/uStFDVKvLj
— ANI (@ANI) July 20, 2018