ರಾಜಸ್ಥಾನ: ಸರ್ಕಾರದ ವಿರುದ್ಧ ಮುನಿಸು, ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

ಪೊಲೀಸ್ ಅಧೀಕ್ಷಕ, ಪೊಲೀಸ್ ಅಧಿಕಾರಿಗಳು ಈ ಗ್ರಾಮದ ಚುನಾವಣೆಯ ನೇತೃತ್ವ ವಹಿಸಿದ್ದಾರೆ. ಈ ಗ್ರಾಮದಲ್ಲಿ ಇದುವರೆಗೂ ಕೇವಲ ಒಂದು ಒಂದು ಮತ ಹಾಕಲಾಗಿದೆ.

Last Updated : Dec 7, 2018, 12:55 PM IST
ರಾಜಸ್ಥಾನ: ಸರ್ಕಾರದ ವಿರುದ್ಧ ಮುನಿಸು, ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು title=

ಬೇಸ್ಡಿ : ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶುಕ್ರವಾರ ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಏತನ್ಮಧ್ಯೆ, ಬೇಸ್ಡಿ ವಿಧಾನಸಭಾ ಕ್ಷೇತ್ರದ ಎಕ್ತಾ ಗ್ರಾಮದ ಜನರು ಚುನಾವಣೆಯನ್ನು ಬಹಿಷ್ಕರಿಸಿರುವ ಬಗ್ಗೆ ವರದಿಗಳಿವೆ. 

ಮಾಧ್ಯಮ ವರದಿಗಳ ಪ್ರಕಾರ, ಗ್ರಾಮಕ್ಕೆ ರಸ್ತೆ ಅನುಕೂಲ ಮಾಡಿಕೊಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜನರು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಸಂಖ್ಯೆ 19 ಮತ್ತು 20 ರಲ್ಲಿ ಮತದಾನ ಸ್ಥಗಿತಗೊಂಡಿದೆ.

ಜನಪ್ರತಿನಿಧಿಗಳು ಲಿಖಿತ ರೂಪದಲ್ಲಿ ಇಲ್ಲಿ ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡದಿದ್ದರೆ ಮತ ಚಲಾಯಿಸುವುದಿಲ್ಲ ಎಂದು ಮತದಾದರು ಪಟ್ಟು ಹಿಡಿದಿದ್ದಾರೆ.  ಆದಾಗ್ಯೂ, ಆಡಳಿತಾತ್ಮಕ ಮಟ್ಟದಲ್ಲಿ ಈಗಲೂ ಯಾವುದೇ ರೀತಿಯ ಚರ್ಚೆಯನ್ನು ಮಾಡಲಾಗಿಲ್ಲ. ವಾಸ್ತವವಾಗಿ, ಇಲ್ಲಿ ಜನರು ಎಕ್ತಾ ಗ್ರಾಮದಿಂದ ಜಗನ್ನೇರ್ ಗೆ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

ಅದೇ ಸಮಯದಲ್ಲಿ, ಕೋಟಾದ ಜಾಟ್ಲಿ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಪೊಲೀಸ್ ಡೆಪ್ಯುಟಿ ಕಮಿಷನರ್, ಪೊಲೀಸ್ ಅಧಿಕಾರಿಗಳು,  ಗ್ರಾಮದ ಉಸ್ತುವಾರಿ ಸೇರಿದಂತೆ ಹಲವು ಅಭಿವೃದ್ಧಿ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಈ ಗ್ರಾಮದಲ್ಲಿ ಕೇವಲ ಒಂದು ಮತ ಮಾತ್ರ ಚಲಾಯಿಸಲಾಗಿದೆ. ವಾಟರ್ ಬಳಕೆದಾರರ ಸಂಘ ಸಮಿತಿಯ ಅಧ್ಯಕ್ಷ ಘಾಸಿಲಾಲ್ ಮತ ಚಲಾಯಿಸಿರುವ ಏಕೈಕ ಮತದಾರ. ನೀರಿನ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಇಲ್ಲಿಯ ಜನ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, 4 ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ಈವರೆಗೂ 4 ಬೂತ್ ಗಳಲ್ಲಿ ಮತದಾನ ನಡೆದಿಲ್ಲ. ಬಾನ್ಪಿ ಮತಗಟ್ಟೆ ಸಂಖ್ಯೆ 61 ರಲ್ಲಿ, ಧವಾಲಾದ ಮತಗಟ್ಟೆ ಸಂಖ್ಯೆ 147, ಶೇಖ್ಪುರಾ ಮತಗಟ್ಟೆ ಸಂಖ್ಯೆ 39 ಮತ್ತು ಬಾನ್ಸಿಯ ಮತಗಟ್ಟೆ ಸಂಖ್ಯೆ 61ರಲ್ಲಿ ಮತದಾನ ನಡೆದಿಲ್ಲ. 

ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಒಂದು ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.  ಅಲವಾರ್ ಜಿಲ್ಲೆಯ ರಾಮ್ಗಢ ವಿಧಾನಸಭೆ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನವೆಂಬರ್ 29 ರಂದು ನಿಧನರಾದರು. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಒಟ್ಟು 4,74,37,761 ಮತದಾರರು 199 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಲಿದ್ದು, ಅದರಲ್ಲಿ 2,47,22,365 ಪುರುಷರು ಮತ್ತು 2,27,15,396 ಮಹಿಳಾ ಮತದಾರರಿದ್ದಾರೆ. ಸಂಖ್ಯೆ 20,20,156 ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ.
 

Trending News