“ನನ್ನ ಗಂಡ ನಟಿಯರೊಂದಿಗೆ ಅದನ್ನ ಮಾಡ್ತಾರೆ; ನಾನ್ಯಾಕೆ ನಿರ್ಮಾಪಕರೊಂದಿಗೆ ಮಾಡ್ಬಾರ್ದು?”: ಸ್ಟಾರ್ ನಟಿಯ ಶಾಕಿಂಗ್ ಹೇಳಿಕೆ

Rani Mukerji: ಯಶ್ ರಾಜ್ ಫಿಲಂ ನಿರ್ಮಾಣವಲ್ಲದ,'ಮಿಸೆಸ್ ಚಟರ್ಜಿ Vs ನಾರ್ವೆ' ಸಿನಿಮಾದಲ್ಲಿ ರಾಣಿ ನಟಿಸಿದ್ದರು. ಈ ಸಿನಿಮಾದ ಬಗ್ಗೆ ಕರಣ್ ಜೋಹರ್ ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ ಅವರೊಂದಿಗೆ ಮಾತನಾಡುತ್ತಿದ್ದಾಗ ಇಂತಹ ಹೇಳಿಕೆ ನೀಡಿದ್ದಾರೆ.

Written by - Bhavishya Shetty | Last Updated : Mar 14, 2023, 08:23 PM IST
    • ಕರಣ್ ಜೋಹರ್ ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ ಅವರೊಂದಿಗೆ ಮಾತನಾಡುತ್ತಿದ್ದಾಗ ಇಂತಹ ಹೇಳಿಕೆ ನೀಡಿದ್ದಾರೆ
    • ಯಶ್ ರಾಜ್ ಫಿಲಂ ನಿರ್ಮಾಣವಲ್ಲದ,'ಮಿಸೆಸ್ ಚಟರ್ಜಿ Vs ನಾರ್ವೆ' ಸಿನಿಮಾದಲ್ಲಿ ರಾಣಿ ನಟಿಸಿದ್ದರು
    • ಈ ಎಲ್ಲಾ ಗಾಳಿ ಸುದ್ದಿಗೆ ರಾಣಿ ಫುಲ್ ಸ್ಟಾಪ್ ಇಡುವಂತೆ ಉತ್ತರ ಕೊಟ್ಟಿದ್ದಾರೆ.
“ನನ್ನ ಗಂಡ ನಟಿಯರೊಂದಿಗೆ ಅದನ್ನ ಮಾಡ್ತಾರೆ; ನಾನ್ಯಾಕೆ ನಿರ್ಮಾಪಕರೊಂದಿಗೆ ಮಾಡ್ಬಾರ್ದು?”: ಸ್ಟಾರ್ ನಟಿಯ ಶಾಕಿಂಗ್ ಹೇಳಿಕೆ title=
Rani Mukerji

Rani Mukerji: ರಾಣಿ ಮುಖರ್ಜಿ ಅವರು ಮದುವೆಯಾದ ಮೇಲೆ ಕೇವಲ ತಮ್ಮ ಹೋಮ್ ಪ್ರೊಡಕ್ಷನ್ ಯಶ್ ರಾಜ್ ಫಿಲಂ (YRF) ನಲ್ಲಿ ಮಾತ್ರ ಕೆಲಸ ಮಾಡಲು ಮುಂದಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಎಲ್ಲಾ ಗಾಳಿ ಸುದ್ದಿಗೆ ರಾಣಿ ಫುಲ್ ಸ್ಟಾಪ್ ಇಡುವಂತೆ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಈ ಸ್ಟಾರ್ ಕ್ರಿಕೆಟಿಗ

ಯಶ್ ರಾಜ್ ಫಿಲಂ ನಿರ್ಮಾಣವಲ್ಲದ,'ಮಿಸೆಸ್ ಚಟರ್ಜಿ Vs ನಾರ್ವೆ' ಸಿನಿಮಾದಲ್ಲಿ ರಾಣಿ ನಟಿಸಿದ್ದರು. ಈ ಸಿನಿಮಾದ ಬಗ್ಗೆ ಕರಣ್ ಜೋಹರ್ ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ ಅವರೊಂದಿಗೆ ಮಾತನಾಡುತ್ತಿದ್ದಾಗ ಇಂತಹ ಹೇಳಿಕೆ ನೀಡಿದ್ದಾರೆ.

“ನಾನು ಈಗ ತಾಯಿಯಾಗಿದ್ದೇನೆ. ನನ್ನ ಮಗಳು ನನ್ನ ಆದ್ಯತೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಎಲ್ಲಿ ಬೇಕಾದರೂ ಕೆಲಸ ಮಾಡುತ್ತೇನೆ. ನನ್ನ ಪತಿ ಅನೇಕ ನಟರೊಂದಿಗೆ ಕೆಲಸ ಮಾಡುತ್ತಾರೆ, ನಾನು ಹೊರಗೆ ಏಕೆ ಕೆಲಸ ಮಾಡಬಾರದು?” ಎಂದು ಪ್ರಶ್ನೆ ಎತ್ತಿದ್ದಾರೆ.

“ಆದಿತ್ಯ ಚೋಪ್ರಾ( ರಾಣಿ ಅವರ ಪತಿ) ನನ್ನನ್ನು ಹೊಗಳಿದ್ದಾರೆ. ಅವರು ಕೂಡ ಈ ಸಿನಿಮಾ ನೋಡಿ ಭಾವುಕರಾದರು. ಅಷ್ಟೇ ಅಲ್ಲ, ಇದರಲ್ಲಿ ಚೆನ್ನಾಗಿ ಅಭಿನಯಿಸಿದ್ದೀಯಾ ಎನ್ನುತ್ತಾ ಮಗುವಿನಂತೆ ಅಪ್ಪಿಕೊಂಡರು” ಎಂದು ಹೇಳಿದ್ದಾರೆ ರಾಣಿ.

ಈ ಸಿನಿಮಾ ಸಂಪೂರ್ಣ ನೈಜತೆಯನ್ನು ಆಧರಿಸಿದೆ. ಇದರ ಬಗ್ಗೆ ಮಾತನಾಡಿದ ರಾಣಿ, “ನನ್ನ ತಾಯಿ ಕೃಷ್ಣ ಮುಖರ್ಜಿಯೇ ಇಂತಹ ಪಾತ್ರ ಮಾಡಲು ಸ್ಪೂರ್ತಿ. ಇನ್ನು ಕೂಡ ನಾನು ಸಾಗರಿಕಾ ಅವರನ್ನು ಭೇಟಿ ಮಾಡಿಲ್ಲ, ಅವರೊಂದಿಗೆ ಮಾತನಾಡಿಲ್ಲ. ಆದರೆ ನಿರ್ದೇಶಕಿ ಅಶಿಮಾ ಚಿಬ್ಬರ್ ಅವರೊಂದಿಗೆ ಮಾತನಾಡುವ ಟೇಪ್‌’ಗಳನ್ನು ನಾನು ನೋಡಿದೆ. ಅದರಲ್ಲಿ ಕೋಪ, ಹತಾಶೆ, ಒಂಟಿತನ ಎಲ್ಲವೂ ಕಣ್ಣಿಗೆ ಕಟ್ಟಿದಂತಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ TTE: ಮುಂದೇನಾಯ್ತು ಗೊತ್ತಾ?

ಇದು ನಾರ್ವೆಯಲ್ಲಿ ದಂಪತಿಗಳು ಎದುರಿಸಿದ ಒಂದು ಘಟನೆಯನ್ನು ಆಧರಿಸಿದ ಸಿನಿಮಾ. ಮಗುವಿಗೆ ಕೈ ತುತ್ತು ನೀಡಿದರೆಂದು ಕೇಸು ದಾಖಲಿಸಿ ಮಗುವನ್ನು ಪೋಷಕರಿಂದ ದೂರವಿರಿಸುವ ಕಾನೂನು ನಾರ್ವೆ ದೇಶದಲ್ಲಿದೆ. ಇಂತಹ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಕುಟುಂಬ ಆ ಸಮಸ್ಯೆಯಿಂದ ಹೇಗೆ ಹೊರಬಂದಿದೆ ಎಂಬುದರ ಸಾರಾಂಶವನ್ನು ಹೊಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News