ನವದೆಹಲಿ: ಗಣರಾಜ್ಯೋತ್ಸವ ಇನ್ನು ಆರು ದಿನಗಳು ಬಾಕಿ ಇವೆ ಆಗಲೇ ರಾಷ್ಟ್ರಪತಿ ಭವನ್ ತ್ರಿವರ್ಣ ಧ್ವಜದ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಶುಕ್ರವಾರದಂದು ರಾತ್ರಿ ಈ ಕಂಗೊಳಿಸುವ ವಿದ್ಯುತ್ತಾಲಂಕಾರಕ್ಕೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಚಾಲನೆ ನೀಡಿದರು.
2018ರ ಈ ಗಣರಾಜ್ಯೋತ್ಸವಕ್ಕೆ ಹತ್ತು ಆಸಿಯಾನ್ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸುತ್ತಿದ್ದಾರೆ.
ಸುಲ್ತಾನ್ ಹಾಸನಲ್ ಬೋಲ್ಕಯ್ಯ (ಬ್ರೂನಿ)
ಪ್ರಧಾನಿ ಹುನ್ ಸೇನ್ (ಕಾಂಬೋಡಿಯಾ)
ಅಧ್ಯಕ್ಷ ಜೋಕೊ ವಿಡೊಡೊ (ಇಂಡೋನೇಷ್ಯಾ)
ಪ್ರಧಾನಿ ಥೊಂಗ್ಲೋನ್ ಸಿಸೌಲಿತ್ (ಲಾವೋಸ್)
ಪ್ರಧಾನಿ ನಜೀಬ್ ರಝಕ್ (ಮಲೇಷಿಯಾ)
ಅಧ್ಯಕ್ಷ ಹಿಟಿನ್ ಕ್ವಾವ್ (ಮ್ಯಾನ್ಮಾರ್)
ಅಧ್ಯಕ್ಷ ರೋಡ್ರಿಗೊ ರೊ ಡಟರ್ಟೆ (ಫಿಲಿಪೈನ್ಸ್)
ಅಧ್ಯಕ್ಷ ಹಾಲಿಮಾ ಯಾಕೊಬ್ (ಸಿಂಗಾಪುರ್)
ಪ್ರಧಾನಿ ಪ್ರಯತ್ ಚಾನ್-ಒಚಾ (ಥೈಲ್ಯಾಂಡ್)
ಪ್ರಧಾನ ಮಂತ್ರಿ ನ್ಗುಯಿನ್ ಕ್ಸುನ್ ಫುಕ್ (ವಿಯೆಟ್ನಾಂ)
#WATCH Dynamic facade lighting of Rashtrapati Bhavan in Delhi #RepublicDay pic.twitter.com/k9npaqjb29
— ANI (@ANI) 19 January 2018
President Ram Nath Kovind inaugurated the dynamic facade lighting of Rashtrapati Bhavan in the run up to #RepublicDay. pic.twitter.com/R3vEOQN4o9
— ANI (@ANI) 19 January 2018
ಜನವರಿ 26, 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಅಂದಿನಿಂದ ಈ ದಿನವನ್ನು ಗಣರಾಜ್ಯೋತ್ಸವ ದಿನವೆಂದು ಎಂದು ಆಚರಿಸಲಾಗುತ್ತದೆ. ರಾಷ್ಟ್ರಪತಿ ಭವನದ ದ್ವಾರಗಳಿಂದ ಮೆರವಣಿಗೆ ರಾಜಪಥ ಮಾರ್ಗದಲ್ಲಿ ಸಾಗಿ ಮುಂದೆ ಅದು ಇಂಡಿಯಾ ಗೇಟವರೆಗೂ ಸಾಗುತ್ತದೆ. ಭಾರತೀಯ ಸೇನೆ, ನೌಕಾಪಡೆಯ ಮತ್ತು ವಾಯುಪಡೆಯ ಬ್ಯಾಂಡ್ಗಳ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಈ ಪ್ರದರ್ಶನವು ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯ ಪ್ರತೀಕವನ್ನು ಎತ್ತಿ ತೋರಿಸುತ್ತದೆ. ಆ ದಿನದಲ್ಲಿ ಭಾರತದ ರಾಷ್ಟ್ರಪತಿ ಅಶೋಕ್ ಚಕ್ರ, ಕೀರ್ತಿ ಚಕ್ರ ಮುಂತಾದ ಪ್ರಶಸ್ತಿಗಳನ್ನು ನೀಡುತ್ತಾರೆ.