'ಕಳಂಕಿತ ರಾಜಕಾರಣಿಗಳಿಂದ ನಿಮಗೇ ಹಾನಿಯಾಗಲಿದೆ' - ಬಿಜೆಪಿಗೆ ಅಣ್ಣಾ ಹಜಾರೆ ಎಚ್ಚರಿಕೆ

ಕಳಂಕಿತ ನಾಯಕರನ್ನು ನೇಮಿಸಿಕೊಳ್ಳುವುದು ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

Last Updated : Sep 3, 2019, 03:13 PM IST
'ಕಳಂಕಿತ ರಾಜಕಾರಣಿಗಳಿಂದ ನಿಮಗೇ ಹಾನಿಯಾಗಲಿದೆ' - ಬಿಜೆಪಿಗೆ ಅಣ್ಣಾ ಹಜಾರೆ ಎಚ್ಚರಿಕೆ  title=

ನವದೆಹಲಿ: ಕಳಂಕಿತ ನಾಯಕರನ್ನು ನೇಮಿಸಿಕೊಳ್ಳುವುದು ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

“ಬಿಜೆಪಿ ಅಂತಹವರನ್ನು ನೇಮಕ ಮಾಡಬಾರದು. ಕಳಂಕಿತ ಜನರನ್ನು ನೇಮಕ ಮಾಡುವುದನ್ನು ಮುಂದುವರಿಸಿದರೆ, ಅದರ ಮೂಲಕ ಪಕ್ಷಕ್ಕೆ ಕೆಟ್ಟ ಹೆಸರು ಬರಲು ಹೆಚ್ಚಿಗೆ ಸಮಯಬೇಕಾಗಿಲ್ಲ ” ಎಂದು ಹಜಾರೆ ಹೇಳಿದ್ದಾರೆ.

ಇದೇ ವೇಳೆ ರಾಜಕೀಯದಲ್ಲಿ ಇಂತಹ ನಾಯಕರು ಬರುವುದಕ್ಕೆ ಮತದಾರರೇ ಜವಾಬ್ದಾರಾಗಿದ್ದಾರೆ. ಆದ್ದರಿಂದ ಯುವಕರು ಅಂತಹ ಕಳಂಕಿತ ರಾಜಕಾರಣಿಗಳಿಗೆ ಮಣೆ ಹಾಕುವ ಪಕ್ಷಗಳಿಗೆ ಪಾಠ ಕಳಿಸಬೇಕು ಎಂದು ಹೇಳಿದರು.'ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡುವ ಪ್ರಾಮಾಣಿಕ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು" ಎಂದು ಹಜಾರೆ ಹೇಳಿದರು.

ರಾಜಕೀಯದಲ್ಲಿ ಹಲವಾರು ಕಳಂಕಿತ ಮತ್ತು ಭ್ರಷ್ಟ ನಾಯಕರು ಇದ್ದಾರೆ, 'ಈ ನಾಯಕರು, ತಮ್ಮ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಲ್ಲಿ, ಯಾವಾಗಲೂ ಆಡಳಿತ ಪಕ್ಷಗಳಲ್ಲಿ ಆಶ್ರಯ ಪಡೆಯುತ್ತಾರೆ. ಸುರೇಶ್ ಜೈನ್ (ಇತ್ತೀಚೆಗೆ ಘಾರ್ಕುಲ್ ವಸತಿ ಹಗರಣದಲ್ಲಿ ಶಿಕ್ಷೆಗೊಳಗಾದ ಶಿವಸೇನೆ ನಾಯಕ) ಇಂತಹ ಪದ್ಧತಿಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ಅವರ ಬಹು-ಕೋಟಿ ಹಗರಣಗಳನ್ನು ಮರೆಮಾಡಲು, ಅವರು ಪಕ್ಷಗಳನ್ನು ಮೂರು ಬಾರಿ ಬದಲಾಯಿಸಿದರು ಮತ್ತು ಆದ್ದರಿಂದ ಅವರ ವಿರುದ್ಧ ಕ್ರಮ ವಿಳಂಬವಾಯಿತು ”ಎಂದು ಹಜಾರೆ ಹೇಳಿದರು.

ಇತ್ತೀಚೆಗೆ, ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಅನೇಕ ನಾಯಕರು ಮಹಾರಾಷ್ಟ್ರದ ಬಿಜೆಪಿಗೆ ಸೇರಿದ್ದಾರೆ.

Trending News