74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಹೆಮ್ಮೆಯ ಭಾರತ

Republic Day 2023: ಜನವರಿ 26 ಗಣರಾಜ್ಯೋತ್ಸವ ದಿನ. ಈ ದಿನವನ್ನು ಭಾರತದಾದ್ಯಂತ ಬಹಳ ಸಂಭ್ರಮದಿಂದ  ಆಚರಿಸಲಾಗುತ್ತದೆ. ಅದರಲ್ಲೂ ದೆಹಲಿಯ ಕೆಂಪುಕೋಟೆ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು. ಭವ್ಯ ಮೆರವಣಿಗೆ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಮತ್ತು ಅರೆಸೇನಾ ಪಡೆಯ ರಾಜಪಥ ನೋಡುಗರ ಮನಸ್ಸು ಗೆಲ್ಲುತ್ತದೆ. 

Written by - MALLIKARJUN PATIL | Edited by - Yashaswini V | Last Updated : Jan 26, 2023, 06:53 AM IST
  • ಸ್ವತಂತ್ರ್ಯ ದಿನಾಚರಣೆಗೂ ಗಣರಾಜ್ಯೋತ್ಸವಕ್ಕೂ ವ್ಯತ್ಯಾಸವಿದೆ
  • ಸಂವಿಧಾನದ ರಚನೆಗೆ ಬರೊಬ್ಬರಿ 2 ವರ್ಷ, 11 ತಿಂಗಳು 17 ದಿನ
  • ದೆಹಲಿಯ ಕೆಂಪುಕೋಟೆಯ ಮೇಲೆ ಹಾರಾರುವ ರಾಷ್ಟ್ರಧ್ವಜ
74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಹೆಮ್ಮೆಯ ಭಾರತ title=
Republic Day History

Republic Day 2023: ಭಾರತ ಅದೆಷ್ಟೋ ಜಾತಿ, ಧರ್ಮ, ಮತ-ಪಂತ-ಪಂಗಡ, ಕ್ರೀಡೆ ಹೀಗೆ ನಾನಾ ವಿಶೇಷತಗಳನ್ನೊಳಗೊಂಡ ಪ್ರಜಾಪ್ರಭುತ್ವ ದೇಶ. 1947ರಲ್ಲಿ ಬ್ರಿಟಿಷರ ಕೈ ಮುಷ್ಠಿಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಭಾರತ, ಅಂದಿನಿಂದ ಇಂದಿನ ವರೆಗೂ ಕಾನೂನಿನ ಚೌಕಟ್ಟಿನಲ್ಲಿ ಎತ್ತರಕ್ಕೆ ಬೆಳೆಯುತ್ತ ಸಾಗುತ್ತಿದೆ.  ಪ್ರತಿ ದೇಶದ ಬೆಳವಣಿಗೆಯಲ್ಲಿ ಆ ದೇಶದ ಸಂವಿಧಾನದ ಪಾತ್ರ ಪ್ರಬಲ ಹಾಗೂ ಪ್ರಮುಖವಾಗಿ ಕಾಣಿಸುತ್ತದೆ. ಹಾಗಿದ್ರೆ ನಮ್ಮ ಸಂವಿಧಾನ ಜಾರಿಯಾದ ದಿನ ಜತೆಗೆ ಸಂವಿಧಾನದ ಪ್ರಾಮುಖ್ಯ ಏನು ಅನ್ನೋದು ಪ್ರತಿಯೊಬ್ಬ ವ್ಯಕ್ತಿ ತಿಳಿಯಲೇಬೇಕು

ನಮ್ಮಲ್ಲಿ ಸ್ವತಂತ್ರ್ಯ ದಿನಾಚರಣೆಗೂ ಗಣರಾಜ್ಯೋತ್ಸವಕ್ಕೂ ವ್ಯತ್ಯಾಸ ಗೊತ್ತಿಲ್ಲದ ಸಾವಿರಾರು ಜನ ನಮ್ಮ ನಡುವೆ ಇದ್ದಾರೆ.  ಬ್ರೀಟಿಷರಿಂದ ಮುಕ್ತಿ ಪಡೆದು ಸಂಭ್ರಮಿಸಿದ ದಿನವೊಂದಾದ್ರೆ, ಇಡೀ ಭಾರತಕ್ಕೆ ಸಂವಿಧಾನ ಜಾರಿಗೆ ಮಾಡಿದ ದಿನವೊಂದು.. ಎರಡು ಹಬ್ಬವೇ ಸರಿ. ಪ್ರತಿ ಭಾರತೀಯನೂ ಈ ದಿನವನ್ನೂ ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತೆ ಮರೆಯಲೂ ಬಾರದು. ʻಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರʼ ಜಾರಿಯಾದ ನಮ್ಮ ಸಂವಿಧಾನ ಪ್ರಜೆಯನ್ನೇ ಪ್ರಭು ಅಂತ ಕರಿಯುತ್ತೆ. ಆದ್ರೆ ಪ್ರತಿಯೊಬ್ಬನಿಗೂ ಸಮಾಜದಲ್ಲಿ ಬದುಕುವಾಗ ನಿಯಮಗಳು ಅನ್ನೋ ಕಡಿವಾಣವೂ ಇದೆ. ಸಂವಿಧಾನದ ಅಡಿಯಲ್ಲಿ ಬದುಕು ಕಟ್ಟಿಕೊಂಡು ಹೋದ್ರೆ ಇಲ್ಲಿ ಯಾವುದೇ ಅಡ್ಡಿ ಆತಂಕವೂ ಇಲ್ಲ. ಆದ್ರೆ ಸಂವಿದಾನ ಮೀರಿ ಜೀವನ ಸಾಗಿಸುವ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಇರುತ್ತೆ.  ಸದ್ಯ ನಾವು 74 ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ನಡುವೆ ನಮ್ಮ ಸಂವಿಧಾನದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕಾದ ಕೆಲವು ಮಹತ್ವದ ವಿಷಯಗಳು ಹೀಗಿವೆ. 

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲರೂ ಸಂಭ್ರಮಿಸಿ ಕುಣಿದು ಕುಪ್ಪಳಿಸಿದ್ದರು. ಬ್ರೀಟಿಷರ ಆಳ್ವಿಕೆಯಿಂದ ಮುಕ್ತಿ ಹೊಂದಿದ ಸಂತೋಷ ಎಲ್ಲರಲ್ಲೂ ಮೂಡಿತ್ತು. ಆದ್ರೆ ಭಾರತದಂತ ದೇಶಕ್ಕೆ ಒಂದು ಪ್ರಬಲ ಸಂವಿಧಾನದ ಅವಶ್ಯಕತೆ ಇತ್ತು. ಈ ಜವಾಬ್ದಾರಿ ಹೊತ್ತಿದ್ದು ಡಾ ಬಿ ಆರ್ ಅಂಬೇಡ್ಕರ್ ಅನ್ನೋ ಮಹಾನ್‌ ಪುಸ್ತಕ ಪ್ರೇಮಿ. ಕರಡು ರಚನೆಗೆ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ ಬಿ. ಆರ್. ಅಂಬೇಡ್ಕರ್ ಆಯ್ಕೆ ಮಾಡಲಾಗತ್ತೆ. ಆದ್ರೆ ಸಂವಿಧಾನ ರಚನೆ ಅನ್ನೋ ಮಹಾಸಾಗರದ ಹೊಸ ರಚನೆ ಅಷ್ಟೋಂದು ಸುಲಭ ಆಗಿರಲಿಲ್ಲ.  ಆಗಷ್ಟೇ ಸ್ವಾತಂತ್ರ್ಯ ಅನ್ನೋ ಭಾರತೀಯನ ಮನಸ್ಸು ಕದಡದ ಹಾಗೆ ಈ ಸಂವಿಧಾನ ರಚನೆ ಆಗಬೇಕಾಗಿತ್ತು. 

ಇದನ್ನೂ ಓದಿ- ರಾಜಪಥ್‍ನಲ್ಲಿ ಕರ್ನಾಟಕ ಸ್ತಬ್ಧ ಚಿತ್ರ: ನಾರಿಶಕ್ತಿಯನ್ನು ಸ್ಮರಿಸಿದ ಕೇಂದ್ರ ಸಚಿವ ಜೋಶಿ

ಸಂವಿಧಾನ ರಚನಾ ಸಭೆ ಈ ಐತಿಹಾಸಿಕ ಕಾರ್ಯವನ್ನೂ ಮುಗಿಸಲು ಬರೊಬ್ಬರಿ 2 ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನೇಳು ದಿನಗಳನ್ನು ತೆಗೆದುಕೊಂಡಿತ್ತು. ಸಂವಿಧಾನದ ಕರಡನ್ನು ನವೆಂಬರ್ 4, 1947 ರಂದು ಭಾರತೀಯ ಸಂವಿಧಾನ ರಚನಾ ಸಭೆಗೆ ಸಲ್ಲಿಸಲಾಯಿತು.  ಜನವರಿ 24, 1950 ರಂದು, ವಿಧಾನಸಭೆಯ ಸದಸ್ಯರು ಸಂವಿಧಾನದ ಎರಡು ಕೈಬರಹದ ಪ್ರತಿಗಳಿಗೆ ಸಹಿ ಹಾಕಿದರು, ಎರಡು ಕೈ ಬರಹ ಅಂದ್ರೆ ಒಂದು ಇಂಗ್ಲಿಷ್‌ನಲ್ಲಿ ರಚಿಸಿದ ಭಾರತದ ಸಂವಿಧಾನ ಹಾಗೂ ಒಂದು ಹಿಂದಿ ಭಾಷೆಯಲ್ಲಿ ರಚಿಸಿದ ಭಾರತದ ಸಂವಿಧಾನ. ಅಂದು ಈ ಪ್ರತಿಗೆ ಸದಸ್ಯರು ಸಹಿ ಹಾಕಿದ್ರು. ನಂತರ  ಅಂದ್ರೆ ಅದಾದ ಎರಡು ದಿನಗಳ ಬಳಿಕ ಜನವರಿ 26, 1950 ರಂದು ಭಾರತ ಸಂವಿಧಾನ ಜಾರಿಗೆ ಬಂದಿತು. ಅಂದೇ ಭಾರತೀಯ ಸ್ವಾತಂತ್ರ್ಯದ ಘೋಷಣೆ ಅಂದ್ರೆ ಪೂರ್ಣ ಸ್ವರಾಜ್ ಘೋಷಣೆ ಕೂಡ ಮಾಡಿತು.  ಅದೇ ದಿನ, ಡಾ ರಾಜೇಂದ್ರ ಪ್ರಸಾದ್ ಅವರು ಭಾರತೀಯ ಒಕ್ಕೂಟದ ಮೊದಲ ಅಧ್ಯಕ್ಷರಾದರು.  ಭಾರತದ ಸಂವಿಧಾನದ ಒಂದು ವಿಶೇಷ ಅಂದ್ರೆ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.  

ಭಾರತದ ತ್ರಿವರ್ಣ ಧ್ವಜವೂ ಕೂಡ ತನ್ನದೇ ಸಂದೇಶ ಸಾರುತ್ತದೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ಈ ಧ್ವಜ ನಡುವೆ ಅಶೋಕ ಚಕ್ರ ಒಳಗೊಂಡಿದೆ. ಇದು ‘ಕಾನೂನು ಮತ್ತು ಧರ್ಮ’ ಕಲ್ಪನೆಯನ್ನು ಸೂಚಿಸುತ್ತದೆ.  ಮೇಲಿನ ಕೇಸರಿ ಬಣ್ಣವು ತ್ಯಾಗ ಮತ್ತು ಧೈರ್ಯವನ್ನು ಸೂಚಿಸುತ್ತದೆ, ಬಿಳಿ ಬಣ್ಣವು ಶುದ್ಧತೆ ಮತ್ತು ಪ್ರಾಮಾಣಿಕತೆ ಪ್ರತಿನಿಧಿಸುತ್ತದೆ ಮತ್ತು ಹಸಿರು ಬಣ್ಣವು ಸಮೃದ್ಧಿಯನ್ನು ಸೂಚಿಸುತ್ತದೆ. ಇನ್ನೂ ದಿನದ 24 ಗಂಟೆಗಳನ್ನು ಪ್ರತಿನಿಧಿಸುವ ಚಕ್ರವನ್ನೂ ಅಶೋಕನ ಸಿಂಹ ರಾಜಧಾನಿಯಿಂದ ಪಡೆಯಲಾಗಿದೆ.

ಜನವರಿ 26 ಗಣರಾಜ್ಯೋತ್ಸವ ದಿನ. ಈ ದಿನವನ್ನು ಭಾರತದಾದ್ಯಂತ ಬಹಳ ಸಂಭ್ರಮದಿಂದ  ಆಚರಿಸಲಾಗುತ್ತದೆ. ಅದರಲ್ಲೂ ದೆಹಲಿಯ ಕೆಂಪುಕೋಟೆ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು. ಭವ್ಯ ಮೆರವಣಿಗೆ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಮತ್ತು ಅರೆಸೇನಾ ಪಡೆಯ ರಾಜಪಥ ನೋಡುಗರ ಮನಸ್ಸು ಗೆಲ್ಲುತ್ತದೆ.  ರಾಜ್ಯ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಪಥದ ಮೆರವಣಿಗೆ ನೋಡಲೆಂದೆ ದೇಶ ವಿದೇಶಗಳಿಂದ ಜನರು ದೆಹಲಿಗೆ ಆಗಮಿಸುತ್ತಾರೆ. ಗಣರಾಜ್ಯೋತ್ಸವ ದಿನ ವಾಯುಪಡೆಯ ಏರ್ ಶೋ ನೋಡಲೆಂದೆ ಸಾವಿರಾರು ಜನರು ಜಮಾಯಿಸುತ್ತಾರೆ. 

ಇದನ್ನೂ ಓದಿ- Karnataka : ಭಾರತದ ನಿರ್ಮಾಣಕ್ಕೆ ಕರ್ನಾಟಕದ ದಿಗ್ಗಜರ ಕೊಡುಗೆ!

ಇಂಡಿಯಾ ಗೇಟ್‌ನಲ್ಲಿ ಜ್ಯೋತಿ ಬೆಳಗಿಸಿ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ದೆಹಲಿಯಲ್ಲಿ ಕಾರ್ಯಕ್ರಮಗಳು ಆರಂಭ ಆಗುತ್ತವೆ. ಪ್ರತಿ ವರ್ಷ ವಿವಿಧ ದೇಶಗಳ ಮುಖ್ಯಸ್ಥರನ್ನು  ಗಣರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ. ಇಂಡೋನೇಷ್ಯಾದ ಮೊದಲ ಅಧ್ಯಕ್ಷರಾಗಿದ್ದ ಅಧ್ಯಕ್ಷ ಸುಕರ್ನೊ ಮೊದಲ ಬಾರಿಗೆ ಗಣರಾಜ್ಯೋತ್ಸವಕ್ಕೆ  ಮುಖ್ಯ ಅತಿಥಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News