ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (80) ಅವರನ್ನು ಹೊಟ್ಟೆ ನೋವಿನ ಸಮಸ್ಯೆಯಿಂದಾಗಿ ಮೆಡಂತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಮತ್ತು ಸೊಸೆ ಡಿಂಪಲ್ ಯಾದವ್ ಆಸ್ಪತ್ರೆಯಲ್ಲಿ ಅವರ ಜೊತೆಗಿದ್ದರು.ಇತರ ಎಸ್‌ಪಿ ನಾಯಕರು ಕೂಡ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ.
ವೈದ್ಯಕೀಯ ತಂಡವು ಕೆಲವು ಪರೀಕ್ಷೆಗಳನ್ನು ನಡೆಸಿದೆ ಮತ್ತು ಅವರನ್ನು ವೀಕ್ಷಣೆಗೆ ಒಳಪಡಿಸಿದೆ ಎಂದು ಮೆಡಂತ ಆಸ್ಪತ್ರೆಯ ನಿರ್ದೇಶಕ ಡಾ.ರಾಕೇಶ್ ಕಪೂರ್ ಹೇಳಿದರು. ಎಸ್‌ಪಿ ನಾಯಕನನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.