ಸೆಕ್ಷನ್ 377 ರ ಕಾಯ್ದೆ ನಿರಂಕುಶ ಮತ್ತು ಅಸಂವಿಧಾನಿಕ ಕ್ರಮ-ಮೆನಕಾ ಗುರುಸ್ವಾಮಿ

    

Updated: Jul 11, 2018 , 03:23 PM IST
ಸೆಕ್ಷನ್ 377 ರ ಕಾಯ್ದೆ ನಿರಂಕುಶ ಮತ್ತು ಅಸಂವಿಧಾನಿಕ ಕ್ರಮ-ಮೆನಕಾ ಗುರುಸ್ವಾಮಿ

ನವದೆಹಲಿ: ಸುಪ್ರೀಂ ಕೋರ್ಟ್ ಸಂವಿಧಾನದ ನ್ಯಾಯಮೂರ್ತಿಯು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿರುವ ಐಪಿಸಿ ಸೆಕ್ಷನ್ 377ನ್ನು ವಜಾಗೊಳಿಸುವಂತೆ ಮನವಿ ಮಾಡಿರುವ  ವಕೀಲೆ ಮೆನಕಾ ಗುರುಸ್ವಾಮಿ ಈ ಸೆಕ್ಷನ್  'ನಿರಂಕುಶ' ಮತ್ತು 'ಅಸಂವಿಧಾನಿಕ ' ಕ್ರಮ ಎಂದು ವಾದಿಸಿದ್ದಾರೆ. 

ವಿಚಾರಣೆ ವೇಳೆಯಲ್ಲಿ ಉತ್ತರಿಸಿದ ಅವರು "ಈ ವಿಭಾಗವು 377 ನಿರಂಕುಶ ಮತ್ತು ಅಸಂವಿಧಾನಿಕ  ಎಂದು ತಿಳಿಸಿದರು. ಅಲ್ಲದೆ ಅದು ಸಂವಿಧಾನದ ವಿಧಿ 15, 19, 21ನ್ನು ಉಲ್ಲಂಘಿಸುತ್ತದೆ."  ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದರು.

"ಈ ಕಾಯ್ದೆಯು ಪಾಲುದಾರರ ಲಿಂಗ ತಾರತಮ್ಯವನ್ನುಂಟುಮಾಡುತ್ತದೆ" ಎಂದು ಅವರು ಹೇಳಿದರು.ಇನ್ನು ಮುಂದುವರೆದು ಇದು ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ಮಾಡುತ್ತಿರುವುದರಿಂದ ವಿಧಿ 15ರ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಅವರು ಈ ನಿಯಮವು ವಿಕ್ಟೋರಿಯನ್ ನೈತಿಕತೆಯನ್ನು ಆದರಿಸಿದೆ. ಆದ್ದರಿಂದ , ಸಂತಾನೋತ್ಪತ್ತಿಯ ಕಾರಣದಿಂದ ಲಿಂಗಕ್ಕೆ ವಿರುದ್ಧವಾಗಿ ಲೈಂಗಿಕತೆಯನ್ನು ಹೊಂದಿರಬೇಕು" ಎನ್ನುವುದನ್ನು ಅದು ಹೇಳುತ್ತದೆ  ಎಂದು ಅವರು ಹೇಳಿದರು. ಸಂವಿಧಾನದಲ್ಲಿ ವಿಧಿ15 ಮತ್ತು 16 ಸಂವಿಧಾನದ ಪ್ರಕಾರ ಸಮಾನತೆಯ ರಕ್ಷಣೆ ಹಲ್ಲುಗಳು ಎಂದು ಅವರು ವಿವರಿಸಿದರು.

ಸಲಿಂಗಕಾಮಿ, ದ್ವೀಲಿಂಗಿ ಜನರು ಸಂವಿಧಾನ ಮತ್ತು ದೇಶವು ಅವರನ್ನು ಸಂರಕ್ಷಿಸಲು ಅರ್ಹರಾಗಿದ್ದಾರೆ ಎಂದು ವಾಧಿಸಿದರಲ್ಲದೆ 377ನೇ ವಿಭಾಗವು ಎಲ್ಜಿಬಿಟಿ ಸಮುದಾಯವನ್ನು ವೃತ್ತಿಯಲ್ಲಿ ಭಾಗವಹಿಸುವ ಸಮಾನ ಅವಕಾಶವನ್ನು ನಿರಾಕರಿಸಿದೆ ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದರು.

ಇನ್ನು ಮುಂದುವರೆದು "ಇದು ಎಲ್ಜಿಬಿಟಿ ನಾಗರಿಕರಿಗೆ ಉದ್ಯೋಗದಲ್ಲಿ ಸಮಾನ ಪಾಲ್ಗೊಳ್ಳುವಿಕೆಯನ್ನು ತಿರಸ್ಕರಿಸುತ್ತದೆ ಮತ್ತು ರಾಜ್ಯ ಉದ್ಯೋಗ ಮತ್ತು ಸಾಂವಿಧಾನಿಕ ಕಚೇರಿಗಳನ್ನು ಒಳಗೊಂಡಂತೆ ಉದ್ಯೋಗವನ್ನು ಪಡೆಯುವ ಹಕ್ಕನ್ನು ಉಲ್ಲಂಘಿಸುತ್ತದೆ" ಎಂದು ತಿಳಿಸಿದರು.