Shirdi Sai Temple Update : ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ಸಿಐಎಸ್ಎಫ್ ನಿಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಸಿಐಎಸ್ಎಫ್ ನಿಯೋಜನೆ ವಿರೋಧಿಸಿ ಶಿರಡಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ. ಈ ಮಧ್ಯೆ, ಶಿರಡಿಯ ಸಾಯಿಬಾಬಾ ದೇವಸ್ಥಾನವನ್ನು ಮೇ 1 ರಿಂದ ಮುಚ್ಚಲಾಗುವುದು ಎಂದು ಆಡಳಿತ ಮಂಡಳಿ ಘೋಷಿಸಿದೆ. ಮೇ 1ರಿಂದ ಶಿರಡಿಯಲ್ಲಿ ಅನಿರ್ದಿಷ್ಟಾವಧಿ ಬಂದ್ ಮುಂದುವರಿಯಲಿದೆ.
ಶಿರಡಿ ಸಾಯಿಬಾಬಾ ಮಂದಿರ ಅತ್ಯಂತ ಪ್ರಸಿದ್ಧ ದೇವಾಲಯ. ಶಿರಡಿ ಸಾಯಿ ಬಾಬಾಗೆ ದೇಶ ವಿದೇಶ ಸೇರಿದಂತೆ ಕೋಟ್ಯಂತರ ಭಕ್ತರಿದ್ದಾರೆ. ಹೀಗೆ ಕೋಟ್ಯಂತರ ಭಕ್ತರನ್ನು ಹೊದಿರುವ ಕಾರಣದಿಂದಲೇ ಶಿರಡಿಯ ಸಾಯಿ ದೇವಸ್ಥಾನಕ್ಕೆ ಸಾಕಷ್ಟು ದೇಣಿಗೆ ಹರಿದು ಬರುತ್ತದೆ. ಈ ದೇವಸ್ಥಾನಕ್ಕೆ ಬರುತ್ತಿರುವ ದೇಣಿಗೆ ಆಗಾಗ ಚರ್ಚೆಯ ವಿಷಯವಾಗಿಯೂ ಮಾರ್ಪಡುತ್ತದೆ. ಹೀಗಿರುವಾಗ ಮೇ 1ರಿಂದ ಶಿರಡಿಯ ಸಾಯಿ ಮಂದಿರವನ್ನು ಮುಚ್ಚುವುದಾಗಿ ಆಡಳಿತ ಮಂಡಳಿ ಘೋಷಣೆ ಮಾಡಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : Rain Update: ಕರ್ನಾಟಕಕ್ಕೆ ಸೈಕ್ಲೋನ್ ಭೀತಿ; ಮುಂದಿನ 24 ಗಂಟೆಯಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಮೇ 1ರಿಂದ ಶಿರಡಿ ಬಂದ್ ಗೆ ಕರೆ :
ಇದೀಗ ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾದ ಶಿರಡಿಯ ಸಾಯಿ ಮಂದಿರವನ್ನು ಬಂದ್ ಮಾಡುವುದಾಗಿ ಹೇಳಲಾಗಿದೆ. ಸಾಯಿಬಾಬಾ ಮಂದಿರದ ಭದ್ರತೆಗೆ ಸಿಐಎಸ್ಎಫ್ ನಿಯೋಜಿಸುವ ಸರ್ಕಾರದ ನಿರ್ಧಾರದ ವಿರುದ್ಧ ಅನಿರ್ದಿಷ್ಟಾವಧಿ ಬಂದ್ಗೆ ಕರೆ ನೀಡಲಾಗಿದೆ. ವಾಸ್ತವವಾಗಿ, ಶಿರಡಿಯ ಸಾಯಿ ದೇವಸ್ಥಾನದ ಆಡಳಿತ ಮಂಡಳಿ ಕೂಡಾ ಸಿಐಎಸ್ಎಫ್ ನಿಯೋಜನೆಯನ್ನು ವಿರೋಧಿಸುತ್ತಿದೆ.
ಪ್ರತಿ ವರ್ಷ ಲಕ್ಷಾಂತರ ಭಕ್ತರಿಂದ ಶಿರಡಿ ಬಾಬಾ ದರ್ಶನ :
ಗಮನಾರ್ಹವಾಗಿ, ಅಹಮದ್ನಗರದ ಶಿರಡಿಯಲ್ಲಿ ನಿರ್ಮಿಸಲಾದ ಸಾಯಿಬಾಬಾರವರ ಈ ದೇವಾಲಯವು ಭಾರತ ಮಾತ್ರವಲ್ಲ ಭಾರತದ ಹೊರಗೆ ಕೂಡಾ ಪ್ರಸಿದ್ಧವಾಗಿದೆ. ಸಾಯಿಬಾಬಾ ದರ್ಶನಕ್ಕೆ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಶಿರಡಿ ಬಾಬಾ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಶಿರಡಿಯ ಸಾಯಿ ಮಂದಿರ ಅಹ್ಮದ್ನಗರ-ಮನ್ಮಾಡ್ ಹೆದ್ದಾರಿಯಲ್ಲಿದೆ.
ಇದನ್ನೂ ಓದಿ : Viral Video: ಚಲಿಸುತ್ತಿದ್ದ ಆಟೋದಲ್ಲಿ ನಿಮಿಷದಲ್ಲೇ ಟೈರ್ ಬದಲಿಸಿದ ಚಾಲಕ
ಭದ್ರತೆಯ ಹೊಣೆ ಹೊತ್ತಿರುವ ಸಿಐಎಸ್ಎಫ್ :
ಈ CISF ಎಲ್ಲಾ ಕೈಗಾರಿಕಾ ಸಂಸ್ಥೆಗಳು, ಮೆಟ್ರೋ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳ ಭದ್ರತೆಯ ಜವಾಬ್ದಾರಿಯನ್ನು ಹೊಂದಿದೆ. ಆದರೆ, ಶಿರಡಿ ದೇವಸ್ಥಾನದಲ್ಲಿ ಸಿಐಎಸ್ಎಫ್ ನಿಯೋಜನೆ ಕ್ರಮ ಮಾತ್ರ ಇಲ್ಲಿನ ಭಕ್ತರನ್ನು ಅಸಮಾಧಾನಗೊಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.