/kannada/photo-gallery/try-this-simple-trick-to-remove-cockroaches-in-every-corner-of-the-house-within-few-minutes-249320 ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ 249320

ಬಿಹಾರ, ಉತ್ತರಪ್ರದೇಶ, ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಿಂದಾಗಿ ಭಾರತ ಹಿಂದುಳಿದಿದೆ : ನೀತಿ ಆಯೋಗ

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 188 ರಾಷ್ಟ್ರಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ.

Last Updated : Apr 24, 2018, 11:25 AM IST
ಬಿಹಾರ, ಉತ್ತರಪ್ರದೇಶ, ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಿಂದಾಗಿ ಭಾರತ   ಹಿಂದುಳಿದಿದೆ : ನೀತಿ ಆಯೋಗ title=

ನವದೆಹಲಿ : ಭಾರತ ಸಾಮಾಜಿಕವಾಗಿ ಹಿಂದುಳಿಯಲು ಉತ್ತರ ಭಾಗದ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ರಾಜ್ಯಗಳೇ ಕಾರಣ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕೌಂಟ್ ತಿಳಿಸಿದ್ದಾರೆ. 

ಇಲ್ಲಿನ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮಿತಾಬ್ ಕೌಂಟ್ ಈ ಹೇಳಿಕೆ ನೀಡಿದರು. ಭಾರತವು ವ್ಯವಹಾರ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಂಡಿದೆಯಾದರೂ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 188 ರಾಷ್ಟ್ರಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ ಎಂದರು.

ಮುಂದುವರೆದು, ದೇಶದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಅಭಿವೃದ್ಧಿಯಾಗಬೇಕಾದರೆ ನಾವು ಸಾಮಾಜಿಕ ಸೂಚ್ಯಂಕದ ಅಭಿವೃದ್ಧಿ ಕಡೆ ಗಮನಹರಿಸಬೇಕಿದೆ. ಅದಕ್ಕಾಗಿ ಜಿಲ್ಲ ಮಟ್ಟದಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.