ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ವಿವಾಹ ವಿನಾಯಿತಿ ಇಲ್ಲ ಎಂದ ಸರ್ವೋಚ್ಚ ನ್ಯಾಯಾಲಯ

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಮದುವೆ ಒಂದು ವಿನಾಯಿತಿಯಲ್ಲ. ಅಪ್ರಾಪ್ತ ಪತ್ನಿಯ ಜೊತೆ ಸಂಭೋಗಕ್ಕೆ ವತ್ತಾಯ ಅಥವಾ ಲೈಂಗಿಕ ಕ್ರಿಯೆ ಐಪಿಸಿ ಸೆಕ್ಷನ್ 375 ರ ಪ್ರಕಾರ ಅಪರಾಧವಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

Last Updated : Sep 1, 2017, 11:18 AM IST
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ವಿವಾಹ ವಿನಾಯಿತಿ ಇಲ್ಲ ಎಂದ ಸರ್ವೋಚ್ಚ   ನ್ಯಾಯಾಲಯ   title=

ನವ ದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಮದುವೆ ಒಂದು ವಿನಾಯಿತಿಯಲ್ಲ. ಅಪ್ರಾಪ್ತ ಪತ್ನಿಯ ಜೊತೆ ಸಂಭೋಗಕ್ಕೆ ವತ್ತಾಯ ಅಥವಾ ಲೈಂಗಿಕ ಕ್ರಿಯೆ ಐಪಿಸಿ ಸೆಕ್ಷನ್ 375 ರ ಪ್ರಕಾರ ಅಪರಾಧವಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಭಾರತೀಯ ಪೀನಲ್ ಕೋಡ್ನ 375 ನೇ ವಿಭಾಗವು ತನ್ನ ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ಸಂಭೋಗ ಅಥವಾ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರಕ್ಕೆ ಒಳಪಡಿಸದಿದ್ದರೂ ಸಹ ಅಪ್ರಾಪ್ತ ಪತ್ನಿಯ ಜೊತೆಗಿನ ಬಲವಾದ ಸಂಭೋಗವು ಕ್ರಿಮಿನಲ್ ಅಪರಾಧ ಎಂದು ಕೋರ್ಟ್ ತಿಳಿಸಿದೆ.

15 ರಿಂದ 18 ವರ್ಷ ವಯಸ್ಸಿನ ಹೆಂಡತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಅನುಮತಿಸುವ ಅವಕಾಶದ ಸಾಧ್ಯತೆಯ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ದತಿಯನ್ನು ನಿಷೇಧಿಸಿದ್ದರೂ, ಹೆಣ್ಣು ಮಕ್ಕಳ ಪೋಷಕರು ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ ಎಂದು ಕೋರ್ಟ್ ತಿಳಿಸಿದೆ.ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವುದರಿಂದ ಈ ರೀತಿಯ ಅಪರಾಧಗಳು ಉಂಟಾಗುತ್ತಿದ್ದರೆ, ಮತ್ತೆ ಕೆಲವು ಸಂಗತಿಗಳಲ್ಲಿ ಯುವಕರು ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಸಿ ವಿವಾಹವಾಗುತ್ತಿದ್ದಾರೆ ಎಂದು ನ್ಯಾಯಮೂರ್ತಿ ಎಂ.ಬಿ.ಲೋಕುರ್ ಮತ್ತು ದೀಪಕ್ ಗುಪ್ತ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತಿಳಿಸಿದೆ.

ಅಗರ್ವಾಲ್ ಅವರು 2015-16ರ ನಾಲ್ಕನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ಉಲ್ಲೇಖಿಸಿ 18 ವರ್ಷ ವಯಸ್ಸಿನವರಲ್ಲಿ ಮದುವೆಯಾದ 26.8 ಪ್ರತಿಶತ ವಧುಗಳು ಇದ್ದರು ಎಂದು ಹೇಳಿದರು.

2005-06ರ ಮೂರನೇ ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಅಂಕಿ-ಅಂಶಗಳ ಪ್ರಕಾರ ದೇಶದ ಶೇ. 46 ರಷ್ಟು ಮಹಿಳೆಯರು (23 ಮಿಲಿಯನ್ ವಧುಗಳು) 18 ವರ್ಷಕ್ಕಿಂತ ಮುಂಚಿತವಾಗಿ ಮದುವೆಯಾದವರು ಎಂದು ತಿಳಿದು ಬಂದಿದೆ.

Trending News