ನವದೆಹಲಿ: ನೂತನ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳೊಳಗೆ ಮಾಜಿ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿರುವ ಕ್ರಮ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
I have moved out of my official residence 8, Safdarjung Lane, New Delhi. Please note that I am not contactable on the earlier address and phone numbers.
— Sushma Swaraj (@SushmaSwaraj) June 29, 2019
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು .ಅಷ್ಟೇ ಅಲ್ಲದೆ ಅವರು ಈಗ ರಚನೆಯಾಗಿರುವ ಸರ್ಕಾರದಲ್ಲಿ ಅವರು ಸಚಿವರಾಗಿಲ್ಲ. ಈ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ತಮ್ಮ ಅಧಿಕೃತ ನಿವಾಸವನ್ನು ತಾವು ಖಾಲಿ ಮಾಡಿರುವುದಾಗಿ ಹೇಳಿದ್ದಾರೆ. "ನಾನು ನನ್ನ ಅಧಿಕೃತ ನಿವಾಸ 8, ನವದೆಹಲಿಯ ಸಫ್ದರ್ಜಂಗ್ ಲೇನ್ ನಿಂದ ಹೊರಬಂದಿದ್ದೇನೆ. ಹಿಂದಿನ ವಿಳಾಸ ಮತ್ತು ಫೋನ್ ಸಂಖ್ಯೆಗಳಲ್ಲಿ ನಾನು ಈಗ ಲಭ್ಯವಿರುವುದಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಫಾಲೋವರೊಬ್ಬರು ಟ್ವೀಟ್ ಮಾಡಿ ಇನ್ನು ಮುಂದೆ ದೇಶದ ಅತ್ಯಂತ ಕ್ರಿಯಾತ್ಮಕ ಮಹಿಳಾ ರಾಜಕಾರಣಿಯನ್ನು ಮಿಸ್ ಮಾಡಲಾಗುತ್ತದೆ. ನೂತನ ಸರ್ಕಾರದಲ್ಲಿ ನಿಮ್ಮ ವರ್ಚಸ್ವಿ ಉಪಸ್ಥಿತಿಯನ್ನು ನಾವು ಕಳೆದುಕೊಳ್ಳುತ್ತೇವೆ. ದೇಶದ ಅತ್ಯಂತ ಕ್ರಿಯಾತ್ಮಕ ಮಹಿಳಾ ರಾಜಕಾರಣಿಗೆ ಆರೋಗ್ಯ ಮತ್ತು ಅದೃಷ್ಟವನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.