ನವದೆಹಲಿ: ಟಾಟಾ ಸನ್ಸ್ ಶುಕ್ರವಾರ ಎನ್ ಚಂದ್ರಶೇಖರನ್ ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ತನ್ನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮರುನೇಮಕಗೊಳಿಸಿದೆ.
'ಕಾರ್ಯಕಾರಿ ಅಧ್ಯಕ್ಷರ ಕಾರ್ಯವೈಖರಿಯನ್ನು ಮಂಡಳಿಯ ಸದಸ್ಯರು ಶ್ಲಾಘಿಸಿದರು ಮತ್ತು ಮುಂದಿನ ಐದು ವರ್ಷಗಳ ಕಾಲ ಶ್ರೀ ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಲು ಸರ್ವಾನುಮತದಿಂದ ಅನುಮೋದಿಸಿದರು" ಎಂದು ಟಾಟಾ ಸನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ- 'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್ ಲವ್ ಸ್ಟೋರಿ..!
"ಸಭೆಗೆ ವಿಶೇಷ ಆಹ್ವಾನಿತರಾಗಿದ್ದ ರತನ್ ಟಾಟಾ, ಶ್ರೀ ಚಂದ್ರಶೇಖರನ್ ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅವರು ತಮ್ಮ ಅವಧಿಯನ್ನು ಇನ್ನೂ ಐದು ವರ್ಷಗಳ ಅವಧಿಗೆ ನವೀಕರಿಸಲು ಶಿಫಾರಸು ಮಾಡಿದರು" ಎಂದು ಪ್ರಕಟಣೆ ತಿಳಿಸಿದೆ.
ಅವರ ಮರು ನೇಮಕದ ಕುರಿತು ಮಾತನಾಡಿದ ಶ್ರೀ ಚಂದ್ರಶೇಖರನ್,"ಕಳೆದ ಐದು ವರ್ಷಗಳಿಂದ ಟಾಟಾ ಗ್ರೂಪ್ ಅನ್ನು ಮುನ್ನಡೆಸುವುದು ಒಂದು ಸುಯೋಗವಾಗಿದೆ ಮತ್ತು ಮುಂದಿನ ಹಂತದಲ್ಲಿ ಟಾಟಾ ಗ್ರೂಪ್ ಅನ್ನು ಇನ್ನೂ ಐದು ವರ್ಷಗಳ ಕಾಲ ಮುನ್ನಡೆಸುವ ಅವಕಾಶಕ್ಕಾಗಿ ನಾನು ಸಂತೋಷಪಡುತ್ತೇನೆ."ಎಂದು ಅವರು ಹೇಳಿದರು.
ಇದನ್ನೂ ಓದಿ- Love Mocktail-2 : ಮತ್ತೆ ಕಳೆಗಟ್ಟಿದ ಕನ್ನಡ ಚಿತ್ರರಂಗ : ಇದು ಸ್ಯಾಂಡಲ್‌ವುಡ್ ಸಂಭ್ರಮ!
ಅವರು ಅಕ್ಟೋಬರ್ 2016 ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದರು ಮತ್ತು ಜನವರಿ 2017 ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು.ಟಾಟಾ ಸಮೂಹವು ಮಾರ್ಚ್ 31, 2021 ಕ್ಕೆ ಕೊನೆಗೊಂಡ ವರ್ಷಕ್ಕೆ ಸುಮಾರು $103 ಬಿಲಿಯನ್ (ರೂ. 7.7 ಲಕ್ಷ ಕೋಟಿ) ಆದಾಯವನ್ನು ಹೊಂದಿದೆ.
ಇತ್ತೀಚೆಗೆ, ಟಾಟಾ ಗ್ರೂಪ್ 69 ವರ್ಷಗಳ ನಂತರ ಏರ್ ಇಂಡಿಯಾದ ನಿಯಂತ್ರಣವನ್ನು ಮರಳಿ ಪಡೆದುಕೊಂಡಿದೆ."ಟಾಟಾ ಗ್ರೂಪ್‌ನಲ್ಲಿ ಏರ್ ಇಂಡಿಯಾವನ್ನು ಮರಳಿ ಹೊಂದಲು ನಾವು ಸಂತೋಷಪಡುತ್ತೇವೆ ಮತ್ತು ಇದನ್ನು ವಿಶ್ವ ದರ್ಜೆಯ ವಿಮಾನಯಾನ ಮಾಡಲು ಬದ್ಧರಾಗಿದ್ದೇವೆ" ಎಂದು ಚಂದ್ರಶೇಖರನ್ ಹೇಳಿದ್ದಾರೆ.ಅಧಿಕೃತ ಹಸ್ತಾಂತರಕ್ಕೂ ಮುನ್ನ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.