'ಅಟಲ್ ಜೀ' ಪಾರ್ಥಿವ ಶರೀರದ ಅಂತಿಮ ಯಾತ್ರೆ!

ಯಾತ್ರೆಯ ಉದ್ದಕ್ಕೂ ಅಭಿಮಾನಿಗಳು “ಅಟಲ್​ ಬಿಹಾರಿ ಅಮರ್​ ರಹೇ” ಎಂಬ ಘೋಷಣೆಯನ್ನು ಮೊಳಗಿಸುತ್ತಿದ್ದಾರೆ.  

Last Updated : Aug 17, 2018, 11:53 AM IST
'ಅಟಲ್ ಜೀ' ಪಾರ್ಥಿವ ಶರೀರದ ಅಂತಿಮ ಯಾತ್ರೆ! title=
Pic: ANI

ನವದೆಹಲಿ: ಗುರುವಾರ ಸಂಜೆ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ದೆಹಲಿಯ ಕೃಷ್ಣಮೆನನ್ ರಸ್ತೆಯಲ್ಲಿರುವ ಅವರ ಮನೆಯಿಂದ ಪುಷ್ಪಾಲಂಕೃತಗೊಂಡಿರುವ ಸೇನಾ ವಾಹನದಲ್ಲಿ ಆರಂಭವಾಗಿದೆ. 

ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಮಿಲಿಟರಿ ಬ್ಯಾಂಡ್‌ ಮತ್ತು ಪಥಸಂಚಲನದೊಂದಿಗೆ ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಗೆ ಒಯ್ಯಲಾಗುತ್ತಿದೆ. ರಸ್ತೆಯ ಇಕ್ಕೆಲದಲ್ಲಿ ನೆರೆದಿರುವ ಸಾವಿರಾರು ಮಂದಿ ಸಾರ್ವಜನಿಕರು ಅಜಾತ ಶತ್ರುವಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಯಾತ್ರೆಯ ಉದ್ದಕ್ಕೂ ಅಭಿಮಾನಿಗಳು “ಅಟಲ್​ ಬಿಹಾರಿ ಅಮರ್​ ರಹೇ” ಎಂಬ ಘೋಷಣೆಯನ್ನು ಮೊಳಗಿಸುತ್ತಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನದ ವರೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಅಂತಿಮ ದರ್ಶನದ ನಂತರ ವಾಜಪೇಯಿ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

Trending News