ಮುಂಬೈನಲ್ಲಿ ಹರಾಜಾದ ಭೂಗತ ಪಾತಕಿ ದಾವುದ್ ಆಸ್ತಿ-ಪಾಸ್ತಿ

              

Last Updated : Nov 14, 2017, 06:16 PM IST
ಮುಂಬೈನಲ್ಲಿ ಹರಾಜಾದ ಭೂಗತ ಪಾತಕಿ ದಾವುದ್ ಆಸ್ತಿ-ಪಾಸ್ತಿ title=

ಮುಂಬೈ: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿದ ಮೂರು ಕಟ್ಟಡಗಳು ಮಂಗಳವಾರ ದಕ್ಷಿಣ ಮುಂಬೈಯಲ್ಲಿ ಸೈಫಿ ಬರ್ಹಾನಿ ಅಪ್ಲಿಪ್ಟ್ ಮೆಂಟ್  ಟ್ರಸ್ಟ್ ಮೂಲಕ ಹರಾಜಾಗಿದೆ.

ಒಟ್ಟು  11.58 ಕೋಟಿ ರೂ. ಗಳ ಮೌಲ್ಯದ ಭೂಗತ ಪಾತಕಿಯ ಸಂಪತ್ತನ್ನು ಹರಾಜು ಹಾಕಲಾಗಿದೆ. ಈ ಹರಾಜು ಪ್ರಕ್ರಿಯೆಯು  'ಕಳ್ಳಸಾಗಾಣಿಕೆದಾರರು ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ಗಳ ಆಕ್ಟ್' ಮೂಲಕ ನಡೆದಿದೆ ಎಂದು ತಿಳಿದು ಬಂದಿದೆ.

ಸುಮಾರು 12 ಜನ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಮುಖ್ಯವಾಗಿ  ಈ ಮೂರು ಸಂಪತ್ತುಗಳು ಶಬ್ನಮ್ ಗೆಸ್ಟ್ ಹೌಸ್ 3.53 ಕೋಟಿ, ದಮರವಾಲಾ ಬಿಲ್ಡಿಂಗ್ 3.53 ಕೋಟಿ ಮತ್ತು ಹೋಟೆಲ್ ರೌನಾಕ್  ಆಫ್ರೋಜ್ 4.53 ಕೋಟಿಗಳಿಗೆ ಬೆಂಧಿ ಬಜಾರ್ ಪುನರ್ ಅಭಿವೃದ್ದಿ ಯೋಜನೆಯಲ್ಲಿ ಹರಾಜು ಹಾಕಲಾಗಿದೆ .

ಈ ಕಟ್ಟಡಗಳು ವಾಸಿಸಲು ಯೋಗ್ಯವಲ್ಲದಿರುವುದರಿಂದ  ಈ ಸುತ್ತಲಿನ ಕುಟುಂಬಗಳ ರಕ್ಷಣೆಗಾಗಿ  ಇವುಗಳನ್ನು ಹರಾಜುಗೊಳಿಸಲಾಗಿದೆ. ಫೀ ಬುರ್ಹಾನಿ ಅಪ್ಲಿಪ್ಮೆಂಟ್ ಟ್ರಸ್ಟ್ ಮೂರು ಕಟ್ಟಡಗಳನ್ನು ಅತ್ಯಧಿಕ ಮೊತ್ತಕ್ಕೆ ಹರಾಜು ಪ್ರಕ್ರಿಯೆ ಮೂಲಕ ಬಿಡ್ ಮಾಡಿದೆ ಎಂದು ತಿಳಿದುಬಂದಿದೆ.

ಟ್ರಸ್ಟ್ ನ ವಕ್ತಾರರು "ಹೌದು, ನಾವು ಟೆಂಡರ್ ಸಲ್ಲಿಸಿದ್ದೇವೆ ಮತ್ತು ಹರಾಜಿನಲ್ಲಿ ಪ್ರಾಪರ್ಟಿಯನ್ನು ಖರೀದಿಸಿದ್ದೇವೆ, ಇದು SUBU ಪುನರಾಭಿವೃದ್ಧಿ ವ್ಯಾಪ್ತಿಯಲ್ಲಿ ಬರುತ್ತದೆ, ನಾವು ಉಳಿದ ಔಪಚಾರಿಕತೆಗಳನ್ನು ಪೂರ್ಣಗೊಳಿಸುತ್ತೇವೆ" ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Trending News