ವಾರಾಣಸಿಯಲ್ಲಿ ಮೋದಿ ಕೈಗೊಂಡಿರುವ ಎಲ್ಲ ಕಾರ್ಯಗಳು ತಾತ್ಕಾಲಿಕ -ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ

 ವಾರಾಣಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಭಾನುವಾರ ತಮ್ಮ ಪ್ರತಿಸ್ಪರ್ಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುತ್ತಾ" ಮೋದಿ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ವಾರಣಾಸಿಗೆ ಅಷ್ಟೊಂದು ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲವೆಂದು ಆರೋಪಿಸಿದ್ದಾರೆ.

Last Updated : May 19, 2019, 04:28 PM IST
ವಾರಾಣಸಿಯಲ್ಲಿ ಮೋದಿ ಕೈಗೊಂಡಿರುವ ಎಲ್ಲ ಕಾರ್ಯಗಳು ತಾತ್ಕಾಲಿಕ -ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ  title=

ನವದೆಹಲಿ:  ವಾರಾಣಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಭಾನುವಾರ ತಮ್ಮ ಪ್ರತಿಸ್ಪರ್ಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುತ್ತಾ" ಮೋದಿ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ವಾರಣಾಸಿಗೆ ಅಷ್ಟೊಂದು ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲವೆಂದು ಆರೋಪಿಸಿದ್ದಾರೆ.

"ಈ ಪ್ರದೇಶದ ಪರಿಸ್ಥಿತಿ ನಿಮ್ಮ ಮುಂದೆ ಇದೆ. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.ಯುವಜನರಿಗೆ ಉದ್ಯೋಗ ನೀಡುವಲ್ಲಿ ಅವರು ಯಶಸ್ವಿಯಾಗಲಿಲ್ಲ ಮತ್ತು ಗುಜರಾತ್ ಮಾದರಿಯು ಇಲ್ಲಿ ಯಶಸ್ವಿಯಾಗಿಲ್ಲ "ಎಂದು ಹೇಳಿದರು.

"ವಾರಣಾಸಿಯಲ್ಲಿ ತಾತ್ಕಾಲಿಕವಾಗಿ ಕೆಲಸವನ್ನು ಕೈಗೊಳ್ಳಲಾಗುತ್ತಿದೆ, ಯಾವುದೂ ಶಾಶ್ವತವಲ್ಲ" ಎಂದು ರಾಯ್ ಹೇಳಿದ್ದಾರೆ.ಪ್ರಸಕ್ತ ಸರ್ಕಾರದಲ್ಲಿನ ಕಾರ್ಯಕ್ಷಮತೆ ಬಗ್ಗೆ ಜನರು ತೃಪ್ತಿ ಹೊಂದದಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಅವರು ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸತತ ಎರಡನೇ ಬಾರಿ ಅಜಯ್ ರೈ ಅವರು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.ಈ ಹಿಂದೆ 2014 ರಲ್ಲಿ ಅವರು ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.

Trending News