ಭಾರತೀಯ ವಾಯುಸೇನೆಗೆ ಇಂದು ಮತ್ತೆ ಮೂರು ರಾಫೆಲ್ ಯುದ್ಧ ವಿಮಾನಗಳ ಸೇರ್ಪಡೆ

ಭಾರತೀಯ ವಾಯುಸೇನೆಗೆ (IAF) ಸೇರಲಿದೆ ಮತ್ತೆ ಮೂರು ರಾಫೆಲ್ ಯುದ್ಧ ವಿಮಾನ. ಇದರೊಂದಿಗೆ ವಾಯುಸೇನೆ ಬತ್ತಳಿಕೆಯಲ್ಲಿ 8 ರಾಫೆಲ್ ಯುದ್ಧ ವಿಮಾನಗಳು ಸೇರಿದಂತಾಗುತ್ತದೆ.   

Last Updated : Nov 4, 2020, 11:07 AM IST
  • ಇಂದು ವಾಯುಸೇನೆಗೆ 3 ರಾಫೆಲ್ ಯುದ್ಧ ವಿಮಾನ
  • ಅಂಬಾಲಾ ವಾಯುನೆಲೆಯಲ್ಲಿ ಲ್ಯಾಂಡ್ ಆಗಲಿರುವ ರಾಫೆಲ್
  • ವಾಯುಸೇನೆಯ ಬತ್ತಳಿಕೆಯಲ್ಲಿ 8 ರಾಫೆಲ್ ಬಲ
ಭಾರತೀಯ ವಾಯುಸೇನೆಗೆ ಇಂದು ಮತ್ತೆ ಮೂರು ರಾಫೆಲ್ ಯುದ್ಧ ವಿಮಾನಗಳ ಸೇರ್ಪಡೆ title=

ನವದೆಹಲಿ : ಭಾರತೀಯ ವಾಯುಸೇನೆಯ ಬತ್ತಳಿಕೆಗೆ ಇಂದು ಮತ್ತೆ ಮೂರು ರಾಫೆಲ್ ಯುದ್ಧವಿಮಾನ ಗಳು ಸೇರಲಿವೆ. ಮೂರೂ ಯುದ್ಧವಿಮಾನಗಳು ಫ್ರಾನ್ಸ್ ನಿಂದ ಜಾಮ್ ನಗರಕ್ಕೆ ಬರಲಿದೆ. ಸುಮಾರು 7 ಸಾವಿರ ಕಿ.ಮೀ ದೂರವನ್ನ ಯುದ್ಧ ವಿಮಾನ ಕ್ರಮಿಸಲಿದೆ. ಮಾರ್ಗ ಮಧ್ಯೆ ಫ್ರೆಂಚ್ ಯುದ್ಧ ವಿಮಾನಗಳೇ ಭಾರತೀಯ ರಾಫೆಲ್ ಗೆ ಇಂಧನ ಭರ್ತಿ ಮಾಡಲಿವೆ. ಜಾಮ್ ನಗರದಿಂದ ಸಂಜೆ ವೇಳೆಗೆ ಅಂಬಾಲಾ ವಾಯುನೆಲೆ ಸೇರಲಿವೆ. 

ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್ ರಫಲ್ ಬಗೆಗಿನ 10 ಪ್ರಮುಖ ವೈಶಿಷ್ಟ್ಯಗಳಿವು

ಇದಕ್ಕೂ ಮೊದಲು ಜುಲೈ 28ರಂದು, 5 ರಾಫೆಲ್ (RAFEL) ಯುದ್ದ ವಿಮಾನಗಳು ಭಾರತೀಯ ವಾಯುಸೇನೆ ಸೇರಿತ್ತು. ಚೀನಾದೊಂದಿಗಿನ ಸಂಬಂಧ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ ಎಸಿಯಲ್ಲಿ (LAC)  ಈ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಲಾಗಿದೆ.  ಇದೀಗ  ಈ ಮೂರು ಹೊಸ ರಾಫೆಲ್ ಯುದ್ಧ ವಿಮಾನಗಳೊಂದಿಗೆ ಭಾರತೀಯ ವಾಯುಸೇನೆ 8 ರಾಫೆಲ್ ಗಳನ್ನು ಹೊಂದಿದಂತಾಗುತ್ತದೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಮತ್ತೆ 21 ರಾಫೆಲ್ ಯುದ್ಧ ವಿಮಾನಗಳು ಫ್ರಾನ್ಸ್ (France) ನಿಂದ ಭಾರತಕ್ಕೆ ಬರಲಿವೆ. ಫ್ರಾನ್ಸ್ ನೊಂದಿಗೆ ಒಟ್ಟು 36 ರಾಫೆಲ್ ಯುದ್ಧ ವಿಮಾನ ಪಡೆಯುವ ಬಗ್ಗೆ ಉಭಯ ದೇಶಗಳ ನಡುವೆ ವ್ಯವಹಾರ ನಡೆದಿತ್ತು. 

ಚೀನಾ-ಪಾಕಿಸ್ತಾನದ ವಿರುದ್ಧ ಭಾರತದ ಜೊತೆಗೆ ನಿಂತಿದೆ ಈ ಪ್ರಬಲ ದೇಶ

ರಾಫೆಲ್ ಸಾಮರ್ಥ್ಯ: 
ರಾಫೆಲ್ ಮುಂದಿನ ತಲೆಮಾರಿನ ಅತ್ಯಾಧುನಿಕ ಯುದ್ಧವಿಮಾನವಾಗಿದೆ. ಇದು ಆಗಸದಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯ ಹೊಂದಿರುವ ಫ್ರಂಚ್ ಹ್ಯಾಮರ್, ಆಗಸದಿಂದ ಆಗಸಕ್ಕೆ ಚಿಮ್ಮುನ ಕ್ಷಿಪಣಿ, ಕ್ರೂಸ್ ಕ್ಷಿಪಣಿ, ಇಸ್ರೇಲ್ ನಿರ್ಮಿತ ಹೆಲ್ಮೆಟ್, ರಾಡಾರ್ ಮುನ್ನೆಚ್ಚರಿಕಾ ರಿಸೀವರ್ ಜಾಮರ್ ಗಳನ್ನು ಹೊಂದಿದೆ.  ಇದಲ್ಲದೆ, 10 ಗಂಟೆಗಳ ಹಾರಾಟ ದತ್ತಾಂಶ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ಫ್ರಾ ರೆಡ್ ಸರ್ಚ್  ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ರಾಫೆಲ್ ನಲ್ಲಿದೆ.
 

Trending News