ಗ್ರೇಟರ್ ನೋಯ್ಡಾದಲ್ಲಿ ಎನ್‌ಕೌಂಟರ್; ಇಬ್ಬರ ಬಂಧನ

ಡಿಸೆಂಬರ್ 3 ರ ಮಂಗಳವಾರ ಗ್ರೇಟರ್ ನೋಯ್ಡಾದ ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಟರ್ 144 ರ ಹಿಂಡನ್ ಸೇತುವೆ ಬಳಿ ಈ ಎನ್‌ಕೌಂಟರ್ ನಡೆದಿದೆ.

Last Updated : Dec 4, 2019, 09:42 AM IST
ಗ್ರೇಟರ್ ನೋಯ್ಡಾದಲ್ಲಿ ಎನ್‌ಕೌಂಟರ್; ಇಬ್ಬರ ಬಂಧನ title=

ನವದೆಹಲಿ: ಗ್ರೇಟರ್ ನೋಯ್ಡಾದ ಸೂರಜ್‌ಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಭೀಕರ ಎನ್‌ಕೌಂಟರ್(Encounter) ನಡೆದಿದ್ದು, ಬಳಿಕ ಉತ್ತರ ಪ್ರದೇಶ ಪೊಲೀಸರು ಇಬ್ಬರು  ಅಪರಾಧಿಗಳನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ಬಂಧಿಸಿದ ಇಬ್ಬರು ಅಪರಾಧಿಗಳು ಅಂತರರಾಜ್ಯ ಮೊಬೈಲ್-ಲ್ಯಾಪ್‌ಟಾಪ್ ಸ್ನ್ಯಾಚಿಂಗ್ ಗ್ಯಾಂಗ್‌ಗೆ ಸೇರಿದವರು ಎನ್ನಲಾಗಿದೆ.

ಡಿಸೆಂಬರ್ 3 ರ ಮಂಗಳವಾರ ಗ್ರೇಟರ್ ನೋಯ್ಡಾದ ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಟರ್ 144 ರ ಹಿಂಡನ್ ಸೇತುವೆ ಬಳಿ ಈ ಎನ್‌ಕೌಂಟರ್ ನಡೆದಿದೆ.

ಈ ದರೋಡೆ ಕೋರರ ತಂಡ ಗ್ರೇಟರ್ ನೋಯ್ಡಾ(Greater Noida) ವ್ಯಾಪ್ತಿಯಲ್ಲಿ ಕಳ್ಳತನಕ್ಕಾಗಿ ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮೊದಲೇ ಸ್ಥಳಕ್ಕೆ ಧಾವಿಸಿದ್ದರು ಎನ್ನಲಾಗಿದೆ. ಇದನ್ನರಿತ ಖದೀಮರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಗಳು ದರೋಡೆ ಕೋರರ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಫೈರಿಂಗ್ ನಿಲ್ಲಿಸುವಂತೆ ಪೊಲೀಸರು ಎಷ್ಟು ಸೂಚನೆಗಳನ್ನು ನೀಡಿದರೂ ಕಿವಿಗೊಡದ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ ನಂತರ ಎನ್ಕೌಂಟರ್ ಪ್ರಾರಂಭವಾಯಿತು.

ಬಳಿಕ ಇಬ್ಬರು ಅಪರಾಧಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ರಾಹುಲ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಅಲ್ಲದೆ ಅವರಿಬ್ಬರೂ ದೆಹಲಿಯ ಮದಂಗೀರ್ ಪ್ರದೇಶಕ್ಕೆ ಸೇರಿದವರು ಎಂದು ಮಾಹಿತಿ ಕಲೆಹಾಕಲಾಗಿದೆ.

ಬಂಧನದ ವೇಳೆ ದುಷ್ಕರ್ಮಿಗಳಿಂದ ಕನಿಷ್ಠ ಆರು ಲ್ಯಾಪ್‌ಟಾಪ್‌ಗಳು, ಒಂದು ಸ್ಕೂಟಿ, ಎರಡು ದೇಶಿ-ನಿರ್ಮಿತ ಪಿಸ್ತೂಲ್‌ಗಳು, ಹಲವಾರು .315 ಬೋರ್ ಜೀವಂತ ಸಿಡಿಮದ್ದು, ಒಂದು ಲೇಡೀಸ್ ಪರ್ಸ್, 2 ಲ್ಯಾಪ್‌ಟಾಪ್ ಬ್ಯಾಗ್ ಮತ್ತು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಅಪರಾಧಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ, ಗ್ಯಾಂಗ್‌ನ ಇತರ ಸದಸ್ಯರನ್ನು ಬಂಧಿಸಲು ಪೊಲೀಸರು ಬಲೆ ಬೀಸಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Trending News