ಟೀಂ ಇಂಡಿಯಾದ ಮುಖ್ಯ ಕೋಚ್ ಆಗಬೇಕೆಂದರೆ ಇರಲೇಬೇಕು ಈ ಅರ್ಹತೆಗಳು: ಯಾವ್ಯಾವು..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Team India Head Coach Qualifications: ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆಯಾಗಲಿದೆ ಎಂದು ಮಂಡಳಿ ಕಾರ್ಯದರ್ಶಿ ಜೈ ಶಾ ಈಗಾಗಲೇ ತಿಳಿಸಿದ್ದರು. ಈಗ ಮತ್ತೆ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

Written by - Bhavishya Shetty | Last Updated : May 14, 2024, 04:09 PM IST
    • ಬಿಸಿಸಿಐ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
    • ಮೇ 13ರಂದು ಇಮೇಲ್ ಕಳುಹಿಸುವ ಮೂಲಕ ಈ ಮಾಹಿತಿ ನೀಡಿದೆ.
    • ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆಯಾಗಲಿದೆ
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಬೇಕೆಂದರೆ ಇರಲೇಬೇಕು ಈ ಅರ್ಹತೆಗಳು: ಯಾವ್ಯಾವು..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ title=
Head Coach Qualifications

Team India Head Coach Qualifications: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 13ರಂದು ಇಮೇಲ್ ಕಳುಹಿಸುವ ಮೂಲಕ ಈ ಮಾಹಿತಿ ನೀಡಿದೆ.

ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಆಯ್ಕೆಯಾಗಲಿದೆ ಎಂದು ಮಂಡಳಿ ಕಾರ್ಯದರ್ಶಿ ಜೈ ಶಾ ಈಗಾಗಲೇ ತಿಳಿಸಿದ್ದರು. ಈಗ ಮತ್ತೆ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಒಂದು ವೇಳೆ ದ್ರಾವಿಡ್ ಅರ್ಜಿ ಸಲ್ಲಿಸದಿದ್ದರೆ ಟೀಂ ಇಂಡಿಯಾಗೆ ಹೊಸ ಕೋಚ್ ನೇಮಿಸಲಾಗುತ್ತದೆ.

ಇದನ್ನೂ ಓದಿ: ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು : ಶುಭ ಗಳಿಗೆಯಲ್ಲಿಯೇ ಜೈಲಿನಿಂದ ಬಿಡುಗಡೆ 

ಮುಖ್ಯ ಕೋಚ್ ಹುದ್ದೆಗೆ ಮೇ 27ರ ಸಂಜೆ 6 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ತಿಳಿಸಿದೆ. ಆಯ್ಕೆ ಪ್ರಕ್ರಿಯೆಯು ಅಪ್ಲಿಕೇಶನ್‌’ಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ನಂತರ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಇರುತ್ತದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿತ್ತು. ಬಿಸಿಸಿಐ ಕೋರಿಕೆಯ ಮೇರೆಗೆ ಟಿ20 ವಿಶ್ವಕಪ್ ವರೆಗೆ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಲು ಒಪ್ಪಿಕೊಂಡಿದ್ದರು.

ಹೊಸ ಕೋಚ್‌’ನ ಅಧಿಕಾರಾವಧಿಯು ಜುಲೈ 1, 2024 ರಂದು ಪ್ರಾರಂಭವಾಗಿ, 31 ಡಿಸೆಂಬರ್ 2027 ರವರೆಗೆ ಇರುತ್ತದೆ. ಅಂದರೆ ಹೊಸ ಕೋಚ್‌’ನ ಅವಧಿ 3 ವರ್ಷ 5 ತಿಂಗಳು. ಹೊಸ ಕೋಚ್‌’ಗೆ ಮೂರು ಸೀಮಿತ ಓವರ್‌’ಗಳ ವಿಶ್ವಕಪ್ ಮತ್ತು 2 ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಸವಾಲು ಇದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 2025, T20 ವಿಶ್ವಕಪ್ ಫೆಬ್ರವರಿ 2026 ಮತ್ತು ODI ವಿಶ್ವಕಪ್ 2027 ಅಕ್ಟೋಬರ್-ನವೆಂಬರ್‌’ನಲ್ಲಿ ನಡೆಯಲಿದೆ.

ಅರ್ಹತೆ ಏನಾಗಿರಬೇಕು?

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 30 ಟೆಸ್ಟ್ ಅಥವಾ 50 ODI ಪಂದ್ಯಗಳನ್ನು ಆಡಿದ ಅನುಭವ ಹೊಂದಿರಬೇಕು

ಅಥವಾ ಕನಿಷ್ಠ 2 ವರ್ಷಗಳ ಕಾಲ ಪೂರ್ಣ ಸದಸ್ಯರ ಟೆಸ್ಟ್ ಆಡುವ ರಾಷ್ಟ್ರದ ಮುಖ್ಯ ತರಬೇತುದಾರರಾಗಿರಬೇಕು

ಅಥವಾ IPL ತಂಡದ ಸಹಾಯಕ ಸದಸ್ಯ/ಮುಖ್ಯ ತರಬೇತುದಾರ ಅಥವಾ ಸಮಾನವಾದ ಇಂಟರ್ನ್ಯಾಷನಲ್ ಲೀಗ್/ಮೊದಲ ಡಿವಿಷನ್ ತಂಡಗಳು/ರಾಷ್ಟ್ರೀಯ A ತಂಡಗಳ ತರಬೇತುದಾರರಾಗಿ ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು

ಅಥವಾ ಬಿಸಿಸಿಐ ಮಟ್ಟ 3 ಅಥವಾ ತತ್ಸಮಾನ ಪ್ರಮಾಣೀಕರಣವನ್ನು ಹೊಂದಿರಬೇಕು.

ವಯಸ್ಸು 60 ವರ್ಷಕ್ಕಿಂತ ಕಡಿಮೆಯಿರಬೇಕು.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News