ನವದೆಹಲಿ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ(Rajiv Gandhi) ಅವರಿಂದ 'ಭಾರತರತ್ನ' ಗೌರವವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
1984ರಲ್ಲಿ ಪ್ರಧಾನಮಂತ್ರಿಯಾಗಿದ್ದ ಇಂದರ್ ಕುಮಾರ್ ಗುಜ್ರಾಲ್(IK Gujaral) ಅವರ ಸಲಹೆಯನ್ನು ಅಂದಿನ ಗೃಹ ಸಚಿವ
ನರಸಿಂಹರಾವ್ ಆಲಿಸಿದ್ದಿದ್ದರೆ 1984 ರ ಸಿಖ್ ಗಲಭೆಯನ್ನು ತಪ್ಪಿಸಬಹುದಿತ್ತು ಎಂಬ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್(Dr Manmohan Singh) ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಗಿನ ಗೃಹ ಸಚಿವ ನರಸಿಂಹ ರಾವ್ ಅವರು ಇಂದ್ರಕುಮಾರ್ ಗುಜ್ರಾಲ್ ಅವರ ಸಲಹೆಯನ್ನು ಸ್ವೀಕರಿಸಿದ್ದರೆ, ಸಿಖ್ ವಿರೋಧಿ ಗಲಭೆಯನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ. 'ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1984 ರ ಸಿಖ್ ವಿರೋಧಿ ಗಲಭೆಯಲ್ಲಿ ರಾಜೀವ್ ಗಾಂಧಿ ಮತ್ತು ಅವರ ಸಹೋದ್ಯೋಗಿಗಳ ಪಾತ್ರವನ್ನು ಸ್ಪಷ್ಟಪಡಿಸಬೇಕು. ಅಂತಹ ವ್ಯಕ್ತಿಯು ಭಾರತರತ್ನ ಗೌರವಕ್ಕೆ ಅರ್ಹರಾಗಿದ್ದಾರೆಯೇ? ಎಂದು ದೇಶವಾಸಿಗಳನ್ನು ಪ್ರಶ್ನಿಸಿದ್ದು, ಯಾವುದೇ ಸಂಸ್ಥೆ ಅವರ ಹೆಸರಿನಲ್ಲಿ ಇರಬೇಕೆ? ಎಂದೂ ಕೂಡ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ ರಾಜೀವ್ ಗಾಂಧಿ ಅವರಿಂದ ಕೂಡಲೇ ಭಾರತರತ್ನವನ್ನು ಹಿಂತೆಗೆದುಕೊಳ್ಳುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ' ಎಂದವರು ಬರೆದಿದ್ದಾರೆ.
In the wake of a confirmation from ex-PM #ManmohanSingh on the role of RajivGandhi & his acolytes in '84 #SikhGenocide, I ask the citizens of India, do such leaders deserve #BharatRatna or institutions in their name? I urge PM @narendramodi ji to withdraw such honours immediately
— Harsimrat Kaur Badal (@HarsimratBadal_) December 7, 2019
ಅದೇ ಸಮಯದಲ್ಲಿ, ಅಕಾಲಿ ದಳದ ಮುಖಂಡ ಸುಖಬೀರ್ ಬಾದಲ್ (Sukhbir Singh Badal) ಸಹ ರಾಜೀವ್ ಗಾಂಧಿಯಿಂದ ಭಾರತ್ ರತ್ನವನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
I appeal to PM @narendramodi Ji to withdraw the highest civilian honour from Rajiv Gandhi, who planned & oversaw the #SikhMassacre and also get cases registered against Rajiv & others who prevented the Army from entering Delhi. They should be awarded exemplary punishment. 3/4
— Sukhbir Singh Badal (@officeofssbadal) December 6, 2019
1984ರ ಗಲಭೆ ಕುರಿತು ಮನಮೋಹನ್ ಸಿಂಗ್ ಹೇಳಿಕೆ ಖಂಡಿಸಿದ ಜಾವಡೇಕರ್:
1984 ರ ಸಿಖ್ ವಿರೋಧಿ ಗಲಭೆ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಖಂಡಿಸಿದ್ದಾರೆ. ಮಾಜಿ ಪ್ರಧಾನ ಮಂತ್ರಿಯ ಮೇಲೆ ದಾಳಿ ಮಾಡಿದ ಜಾವಡೇಕರ್, "ಮನಮೋಹನ್ ಜಿ, ಯಾವುದೇ ಸಮಸ್ಯೆಯನ್ನು ಎದುರಿಸಲು ಸೈನ್ಯಕ್ಕೆ ಆದೇಶ ನೀಡುವುದು ಪ್ರಧಾನಮಂತ್ರಿಯ ಕೆಲಸ ಮತ್ತು ರಾಜೀವ್ ಗಾಂಧಿ ಆ ಸಮಯದಲ್ಲಿ ಪ್ರಧಾನಿಯಾಗಿದ್ದರು. ಆದರೆ ಸತ್ಯವೆಂದರೆ ಅವರು ಹತ್ಯಾಕಾಂಡವನ್ನು ಬಹಿರಂಗವಾಗಿ ಬೆಂಬಲಿಸಿದರು. ಒಂದು ದೊಡ್ಡ ಮರ ಬಿದ್ದಾಗಲೆಲ್ಲಾ ಭೂಮಿಯು ನಡುಗುತ್ತದೆ ಎಂದು ಅವರು ಹೇಳಿದರು."
ನರಸಿಂಹ ರಾವ್ ಇಂದರ್ ಕುಮಾರ್ ಗುಜ್ರಾಲ್ ಅವರ ಸಲಹೆಯನ್ನು ಸ್ವೀಕರಿಸಿದ್ದರೆ 1984 ರ ಗಲಭೆಯನ್ನು ತಪ್ಪಿಸಬಹುದಿತ್ತು ಎಂದು ಮನಮೋಹನ್ ಹೇಳಿದ್ದಾರೆ. "1984 ರ ದುರಂತ ಘಟನೆ ನಡೆದಾಗ, ಆ ಸಂಜೆ, ಗುಜ್ರಾಲ್ ಜಿ ಆಗಿನ ಗೃಹ ಸಚಿವ ನರಸಿಂಹ ರಾವ್ ಅವರ ಬಳಿಗೆ ಹೋಗಿ ಪರಿಸ್ಥಿತಿ ತುಂಬಾ ತೀವ್ರವಾಗಿದೆ ಎಂದು ಹೇಳಿದ್ದು, ಸಾಧ್ಯವಾದಷ್ಟು ಬೇಗ ಸೈನ್ಯವನ್ನು ಕರೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. ಆ ಸಲಹೆಯನ್ನು ಗಮನಿಸಿದರೆ 1984 ರಲ್ಲಿ ನಡೆದ ಹತ್ಯಾಕಾಂಡವನ್ನು ಬಹುಶಃ ತಪ್ಪಿಸಬಹುದಿತ್ತು. ಇದರರ್ಥ ಕಾಂಗ್ರೆಸ್ ಮಾಡಿದ ತಪ್ಪಿನಿಂದಾಗಿ ಗಲಭೆ ಸಂಭವಿಸಿದೆ ಎಂದು ಸಿಂಗ್ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅವರು ವಾಗ್ಧಾಳಿ ನಡೆಸಿದ್ದಾರೆ.