ಶ್ರೀನಗರ: ತ್ರಿಕುಟಾ ಬೆಟ್ಟದಲ್ಲಿರುವ ವೈಷ್ಣೋ ದೇವಿ ದೇಗುಲ ಯಾತ್ರೆ ಮಂಗಳವಾರ ಸ್ಥಗಿತಗೊಂಡಿದೆ.
ಅಧ್ಕುವಾರಿ ಮತ್ತು ಭವನ ನಡುವೆ ಇರುವ ಹೊಸ ಟ್ರ್ಯಾಕ್ನಲ್ಲಿ ಭೂಕುಸಿತ ಸಂಭವಿಸಿದ ಕಾರಣ, ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆಯಾದರೂ ಸಾಂಪ್ರದಾಯಿಕ ಟ್ರ್ಯಾಕ್ ಮೂಲಕ ತೀರ್ಥಯಾತ್ರೆ ಮುಂದುವರೆದಿದೆ.
ಅಧಿಕಾರಿಗಳ ಪ್ರಕಾರ, ಪ್ರತಿಕೂಲ ಹವಾಮಾನದಿಂದಾಗಿ ಕತ್ರ-ಸಂಜಿಚಾಟ್ ವಲಯದ ಹೆಲಿಕಾಪ್ಟರ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಪ್ರದೇಶದ ವಿವಿಧ ಪ್ರತ್ಯೇಕ ಭಾಗಗಳಲ್ಲಿನ ಜಂಕ್ಷನ್ ಗಳಲ್ಲಿ ಭೂಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ -1 ಸಿ (ಕತ್ರಾ-ರಾಸಿ-ಪೌನಿ-ಶಿವಖೋರಿ)ದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ, ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲು ಜಿಲ್ಲಾಡಳಿತ ಇಂದು ನಿರ್ಧರಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.