ಮೂರ್ತಿಗಳನ್ನು ಭಗ್ನಗೊಳಿಸುವುದು ಬಿಜೆಪಿಗೆ ಹವ್ಯಾಸವಾಗಿದೆ- ಮಮತಾ ಬ್ಯಾನರ್ಜೀ

ಈಶ್ವರಚಂದ್ರ ವಿದ್ಯಾಸಾಗರ್ ಮೂರ್ತಿ ಭಗ್ನಗೊಂಡಿರುವುದಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ "ಮೂರ್ತಿಗಳನ್ನು ಭಗ್ನಗೊಳಿಸುವುದು ಬಿಜೆಪಿಗೆ ಹವ್ಯಾಸವಾಗಿದೆ "ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Updated: May 16, 2019 , 03:14 PM IST
ಮೂರ್ತಿಗಳನ್ನು ಭಗ್ನಗೊಳಿಸುವುದು ಬಿಜೆಪಿಗೆ ಹವ್ಯಾಸವಾಗಿದೆ- ಮಮತಾ ಬ್ಯಾನರ್ಜೀ

ನವದೆಹಲಿ: ಈಶ್ವರಚಂದ್ರ ವಿದ್ಯಾಸಾಗರ್ ಮೂರ್ತಿ ಭಗ್ನಗೊಂಡಿರುವುದಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ "ಮೂರ್ತಿಗಳನ್ನು ಭಗ್ನಗೊಳಿಸುವುದು ಬಿಜೆಪಿಗೆ ಹವ್ಯಾಸವಾಗಿದೆ "ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರ್ತಿಗಳನ್ನು ಭಗ್ನಗೊಳಿಸುವುದು ಬಿಜೆಪಿಗೆ ಹವ್ಯಾಸವಾಗಿದೆ.ಈ ಹಿಂದೆ ಅದು ತ್ರಿಪುರಾದಲ್ಲಿಯೂ ಕೂಡ ಮಾಡಿತ್ತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಜನರನ್ನು ರೊಚ್ಚಿಗೆಳಿಸುತ್ತಿದೆ ಮತ್ತು 200 ವರ್ಷಗಳ ಬಂಗಾಳದ ಪರಂಪರೆಯನ್ನು ನಾಶಪಡಿಸಿದೆ. ಆದ್ದರಿಂದ ಆ ಪಕ್ಷವನ್ನು ಬೆಂಬಲಿಸುವವರನ್ನು ಸಮಾಜವೆಂದು ಸ್ವೀಕರಿಸುವುದಿಲ್ಲವೆಂದು ಹೇಳಿದರು. 

ಪ್ರಧಾನಿ ಮೋದಿ ವಿದ್ಯಾಸಾಗರ್ ಅವರ ಮೂರ್ತಿಯನ್ನು ಪುನರ್ ನಿರ್ಮಿಸುವುದಾಗಿ ಹೇಳುತ್ತಿದ್ದಾರೆ.ನಾವೇಕೆ ಅವರ ಹಣವನ್ನು ತೆಗೆದುಕೊಳ್ಳಬೇಕು, ಬಂಗಾಳವಷ್ಟೇ ಸಾಕು ಎಂದು ಹೇಳಿದರು.