Anti-COVID-19 Smart Bag: ಕೊರೋನಾ ಪತ್ತೆ ಮಾಡಲು 'ಸ್ಮಾರ್ಟ್ ಬ್ಯಾಗ್' ಕಂಡುಹಿಡಿದ ವಿದ್ಯಾರ್ಥಿ!

ಪ್ರಥಮ ವರ್ಷದ ಪಿಯು ತರಗತಿ ವಿದ್ಯಾರ್ಥಿ ಪುಷ್ಕರ್ ಸಿಂಗ್ ಎಂಬುವವ ಸ್ಕೂಲ್ ಮಕ್ಕಳು ಕೊರೋನಾದಿಂದ ರಕ್ಷಿಸಲು 'ಸ್ಮಾರ್ಟ್ ಬ್ಯಾಗ್' 

Last Updated : Apr 8, 2021, 01:01 PM IST
  • ಪ್ರಥಮ ವರ್ಷದ ಪಿಯು ತರಗತಿ ವಿದ್ಯಾರ್ಥಿ ಪುಷ್ಕರ್ ಸಿಂಗ್ ಎಂಬುವವ ಸ್ಕೂಲ್ ಮಕ್ಕಳು ಕೊರೋನಾದಿಂದ ರಕ್ಷಿಸಲು 'ಸ್ಮಾರ್ಟ್ ಬ್ಯಾಗ್'
  • ಇದು ಮಕ್ಕಳಿಗೆ ಕ್ಲಾಸ್ ರೂಮ್ ಮತ್ತೆ ಪ್ಲೇ ಗ್ರೌಂಡ್ ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಹಾಯ
  • ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಅಲ್ಟ್ರಾಸಾನಿಕ್ ಸೆನ್ಸಾರ್
Anti-COVID-19 Smart Bag: ಕೊರೋನಾ ಪತ್ತೆ ಮಾಡಲು 'ಸ್ಮಾರ್ಟ್ ಬ್ಯಾಗ್' ಕಂಡುಹಿಡಿದ ವಿದ್ಯಾರ್ಥಿ! title=

ನವದೆಹಲಿ: ವಾರಣಾಸಿ (ಉತ್ತರ ಪ್ರದೇಶ)ದ ಪ್ರಥಮ ವರ್ಷದ ಪಿಯು ತರಗತಿ ವಿದ್ಯಾರ್ಥಿ ಪುಷ್ಕರ್ ಸಿಂಗ್ ಎಂಬುವವ ಸ್ಕೂಲ್ ಮಕ್ಕಳು ಕೊರೋನಾದಿಂದ ರಕ್ಷಿಸಲು 'ಸ್ಮಾರ್ಟ್ ಬ್ಯಾಗ್' ಒಂದನ್ನ ಅಭಿವೃದ್ಧಿಪಡಿಸಿದ್ದಾನೆ.

ಈ ಬ್ಯಾಗ್ ಮಕ್ಕಳಿಗೆ ಕ್ಲಾಸ್ ರೂಮ್(Class Room) ಮತ್ತೆ ಪ್ಲೇ ಗ್ರೌಂಡ್ ನಲ್ಲಿ ಸಾಮಾಜಿಕ ಅಂತರ  ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಅಲ್ಟ್ರಾಸಾನಿಕ್ ಸೆನ್ಸಾರ್ ನೀಡಲಾಗಿದೆ. ಸ್ಕೂಲ್ ಬ್ಯಾಗ್ ಅನ್ನ ಮಗು ತನ್ನೆ ಬೆನ್ನ ಮೇಲೆ ಹಾಕಿಕೊಂಡ ತಕ್ಷಣ ಅದು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಮಗು ನಿಂತಿರುವ ಎರಡು ಮೀಟರ್ ಒಳಗೆ ಯಾರಾದರೂ ಕೊರೋನಾ ಪೀಡಿತರು ಹೋಗುತ್ತಿದ್ದಾರೆ ಅಥವಾ ನಿಂತಿದ್ದಾರೆ ಅದರಲ್ಲಿರುವ ಸೆನ್ಸಾರ್ ಬಡಿದುಕೊಳ್ಳಲು ಶುರು ಮಾಡುತ್ತದೆ. ಇದರಿಂದ ಮಗು ಆ ಕಡೆ ಹೋಗದೆ ಅವರಿಂದ ತಪ್ಪಿಸಿಕೊಂಡು ಹೋಗಬಹುದು. 

ಇದನ್ನೂ ಓದಿ : 7th Pay Commission: ಕೇಂದ್ರ ನೌಕರರಿಗೆ ಶೀಘ್ರದಲ್ಲೇ ಸಿಗಲಿದೆ DA ಹಣ; ಖಾತೆಗೆ ಜಮಾ ಆಗಲಿದೆ ಅರಿಯರ್ಸ್!

ಈ ಕೊರೋನಾ ಪ್ರೊಟೆಕ್ಷನ್ ಸ್ಮಾರ್ಟ್ ಸ್ಕೂಲ್ ಬ್ಯಾಗ್(Anti-COVID-19 Smart Bag) ಎರಡು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಅದು 5 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿ : Best Prepaid Plan: 100 ರೂ.ಗಿಂತ ಕಡಿಮೆ ಬೆಲೆಗೆ Airtel, Jio, Vi ರೀಚಾರ್ಜ್ ಕೂಪನ್ಸ್

ಈ ಬ್ಯಾಗ್ ನಲ್ಲಿ ಮಗುವಿನ ಮನೆ ವಿಳಾಸ ಸೇರಿದಂತೆ ತಂದೆ ತಾಯಿ ದೂರವಾಣಿ ಸಂಪರ್ಕ  ವಿವರಗಳನ್ನು ಸ್ಟೋರ್ ಮಾಡಲು ಬಾರ್‌ಕೋಡ್(BarCode) ನೀಡಲಾಗಿದೆ. ಮಕ್ಕಳು ಎಲ್ಲಿಯಾದರೂ ಕಳೆದು ಹೋದರೆ ಅಥವಾ ಯಾರಾದರೂ ನಿಮ್ಮ ಮಕ್ಕಳನ್ನ ಕಿಡ್ನಾಪ್ ಹುಡುಕಲು ಪೊಲೀಸರಿಗೆ ಸಹಾಯ ಮಾಡುತ್ತದೆ. 

ಇದನ್ನೂ ಓದಿ : Coronavirus: 24 ಗಂಟೆಯಲ್ಲಿ 1.26 ಲಕ್ಷ ಪ್ರಕರಣ ವರದಿ, 685 ಮಂದಿ ಸಾವು

ಆರ್ಡುನೊ(Arduino), ಅಲ್ಟ್ರಾಸಾನಿಕ್ ಸೆನ್ಸರ್, 3.7- ವೋಲ್ಟ್ ಬ್ಯಾಟರಿ, ಅಲಾರ್ಮ್ , ಪುಶ್ ಸ್ವಿಚ್ ಮತ್ತು ಬಾರ್ ಕೋಡ್ ಅಳವಡಿಸಿ ಈ ಬ್ಯಾಗ್ ಅನ್ನ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ : Corona Vaccine : ಕರೋನ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನಿ ಮೋದಿ

ಕೊರೋನಾ ಹೆಚ್ಚಳದಿಂದಾಗಿ ಉತ್ತರ ಪ್ರದೇಶದ ಪ್ರಮುಖ ನಗರಗಳಾದ ವಾರಣಾಸಿ, ಲಕ್ನೋ ಮತ್ತು ಕಾನ್ಪುರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ವಾರಣಾಸಿಯಲ್ಲಿ ಗುರುವಾರ ರಾತ್ರಿ 9 ಗಂಟೆಯಿಂದ ಒಂದು ವಾರದ ಕರ್ಫ್ಯೂ ಜಾರಿಮಾಡಲಾಗಿದೆ.

ಇದನ್ನೂ ಓದಿ : ಎಪ್ರಿಲ್ 15 ರ ವರೆಗೆ ಈ ರಾಜ್ಯದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಸ್ಥಗಿತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News