ಡಿ.21ಕ್ಕೆ 2ಜಿ ಸ್ಪೆಕ್ಟ್ರಂ ಹಗರಣ ತೀರ್ಪು ಪ್ರಕಟ

2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಡಿಸೆಂಬರ್ 21ಕ್ಕೆ ಕಾಯ್ದಿರಿಸಿದೆ. 

Last Updated : Dec 5, 2017, 06:46 PM IST
ಡಿ.21ಕ್ಕೆ 2ಜಿ ಸ್ಪೆಕ್ಟ್ರಂ ಹಗರಣ ತೀರ್ಪು ಪ್ರಕಟ title=

ನವ ದೆಹಲಿ : ಮಾಜಿ ಟೆಲೆಕಾಂ ಸಚಿವ ಎ ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಪ್ರಮುಖ ಆರೋಪಿಗಳಾಗಿರುವ 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಡಿಸೆಂಬರ್ 21ಕ್ಕೆ ಕಾಯ್ದಿರಿಸಿದೆ. 

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಒ ಪಿ ಸೈನಿ ಅವರು, ಅಂತಿಮ ತೀರ್ಪುನ್ನು ಡಿಸೆಂಬರ್ 21ಕ್ಕೆ ಕಾಯ್ದಿರಿಸಿದ್ದಾರೆ. 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಎರಡು ಪ್ರತ್ಯೇಕ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದು, ಒಂದು ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದರೆ, ಮತ್ತೊಂದು ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಎ.ರಾಜಾ, ಕನಿಮೋಳಿ ಹಾಗೂ ಇತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. 2ಜಿ ಸ್ಪೆಕ್ಟ್ರಂಗಾಗಿ ನೀಡಿದ 122 ಲೈಸನ್ಸ್ಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರೊಬ್ಬರಿ 30,984 ಕೋಟಿ ರೂ. ನಷ್ಟವಾಗಿದೆ ಎಂದು ಸಿಬಿಐ ತನ್ನ ಚಾರ್ಜ್ ಶೀಟ್ನಲ್ಲಿ ಆರೋಪಿಸಿದೆ. 

ಇನ್ನು 2014ರ ಏಪ್ರಿಲ್ ನಲ್ಲಿ ಅಕ್ರಮ ಹಣ ವಹಿವಾಟು ಸೇರಿದಂತೆ 2ಜಿ ಸ್ಪೆಕ್ಟ್ರಂ ಹಗರಣ ಸಂಬಂಧ ಎ.ರಾಜಾ, ಕನ್ನಿಮೋಳಿ ಸೇರಿದಂತೆ 19 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದ್ದು, ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟುಮಾಡಿದ ಈ ಹಗರಣದ ಅಂತಿಮ ತೀರ್ಪುನ್ನು ಡಿಸೆಂಬರ್ 21ಕ್ಕೆ ನವದೆಹಲಿಯ ಪಟಿಯಾಲ ವಿಶೇಷ ನ್ಯಾಯಾಲಯ ಘೋಷಿಸಲಿದೆ.

Trending News